Viral Video: ಪತ್ನಿಯ ಲವ್ವರ್ ಎಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಬರ್ಬರ ಹಲ್ಲೆ- ಶಾಕಿಂಗ್ ವಿಡಿಯೊ ಫುಲ್ ವೈರಲ್
Man Mistakes Youth as Wife's Lover: ಹೆಂಡತಿಯೊಂದಿಗೆ ಪರಪುರುಷನಿರುವುದನ್ನು ನೋಡಿದ ನಂತರ ತಪ್ಪಾಗಿ ಅರ್ಥೈಸಿಕೊಂಡ ಪತಿಯೊಬ್ಬ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತಾನು ನಿನ್ನ ಪತ್ನಿಯ ಪ್ರಿಯಕರನಲ್ಲ ಎಂದು ಬೇಡಿಕೊಂಡರೂ ಬಿಡದ ಪತಿಯು ಮನಬಂದಂತೆ ಹಲ್ಲೆ ನಡೆಸಿದ್ದಾನೆ.

-

ಝಾನ್ಸಿ: ಹೋಟೆಲ್ ಒಂದರಲ್ಲಿ ಹೆಂಡತಿಯೊಂದಿಗೆ ಪರಪುರುಷನಿರುವುದನ್ನು ನೋಡಿದ ನಂತರ ತಪ್ಪಾಗಿ ಅರ್ಥೈಸಿಕೊಂಡ ಪತಿಯೊಬ್ಬ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ (Jhansi) ಯಲ್ಲಿ ನಡೆದಿದೆ. ನಿನ್ನ ಹೆಂಡತಿಯ ಗೆಳೆಯ ನಾನಲ್ಲ ಎಂದು ಎಷ್ಟೇ ಬೇಡಿಕೊಂಡರೂ ಕೇಳದ ಪತಿಮಹಾಶಯ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವರದಿಯ ಪ್ರಕಾರ, ಪತಿಗೆ ತನ್ನ ಹೆಂಡತಿ ಹೋಟೆಲ್‌ನಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗಿದ್ದಾಳೆ ಎಂಬ ಸುಳಿವು ಸಿಕ್ಕಿತ್ತು. ಪತಿಯು ಸ್ಥಳಕ್ಕೆ ತಲುಪಿದಾಗ, ತನ್ನ ಹೆಂಡತಿಯನ್ನು ಯುವಕನೊಂದಿಗೆ ನೋಡಿ ಸಾರ್ವಜನಿಕವಾಗಿ ಹೊಡೆಯಲು ಪ್ರಾರಂಭಿಸಿದನು. ತನ್ನ ವೈಯಕ್ತಿಕ ಕೆಲಸಕ್ಕಾಗಿ ಹೋಟೆಲ್‌ಗೆ ಹೋಗಿದ್ದ ಯುವಕನನ್ನು ಆಕೆಯ ಕುಟುಂಬವು ಮಹಿಳೆಯ ಜೊತೆಗಾರ ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ. ಮಹಿಳೆಯ ಕುಟುಂಬ ಸದಸ್ಯರು ಆತನನ್ನು ಕ್ರೂರವಾಗಿ ಥಳಿಸಿದ್ದಾರೆ. ವರದಿಗಳ ಪ್ರಕಾರ, ಆತನನ್ನು ಕಬ್ಬಿಣದ ರಾಡ್‌ನಿಂದ ಕೂಡ ಥಳಿಸಲಾಯಿತು.
ವಿಡಿಯೊ ವೀಕ್ಷಿಸಿ:
ಹಲ್ಲೆಯನ್ನು ತಡೆಯಲು ಸ್ಥಳಕ್ಕೆ ಬಂದ ಯುವಕನ ತಂದೆ ಮತ್ತು ಸಹೋದರನನ್ನು ಮಹಿಳೆಯ ಪತಿ ಮತ್ತು ಅವರ ಕುಟುಂಬದವರು ಥಳಿಸಿದ್ದಾರೆ. ಮೂವರು ಕೂಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಸೋನು ಅಲಿಯಾಸ್ ಪ್ರಮೋದ್ ಆರ್ಯ, ಮಹಿಳೆಯ ಪತಿ ಮತ್ತು ಆಕೆಯ ಕುಟುಂಬದವರು ಬಂದಾಗ ತಾನು ಯಾವುದೋ ಕೆಲಸದ ನಿಮಿತ್ತ ಹೋಟೆಲ್‌ಗೆ ಹೋಗಿದ್ದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: IND vs WI 2nd Test: ಮ್ಯಾಚ್ ನೋಡುತ್ತಿದ್ದ ಹುಡುಗನಿಗೆ ಯುವತಿಯಿಂದ ಕಪಾಳಮೋಕ್ಷ; ವಿಡಿಯೊ ವೈರಲ್
ತಪ್ಪಾಗಿ ಅರ್ಥೈಸಿಕೊಂಡ ಮಹಿಳೆಯ ಪತಿಯು ತನ್ನನ್ನು ಕ್ರೂರವಾಗಿ ಥಳಿಸಿದರು ಎಂದು ದೂರಿದ್ದಾನೆ. ಮಹಿಳೆಯ ಪತಿಯು ತನ್ನ ಪತ್ನಿ ಹೋಟೆಲ್‌ನಲ್ಲಿ ಯುವಕನೊಂದಿಗೆ ಇದ್ದಾಳೆ ಎಂದು ಕುಟುಂಬ ಸದಸ್ಯರಿಂದ ಮಾಹಿತಿ ಪಡೆದಿದ್ದಾಗಿ ಹೇಳಿದ್ದಾನೆ. ಅವನು ಬಂದಾಗ, ಅವಳು ಮತ್ತು ಯುವಕ ಒಟ್ಟಿಗೆ ಇರುವುದು ಕಂಡುಬಂದಿದೆ. ಯುವಕನಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೂ ಬಿಡದ ಪತಿ ಯುವಕನಿಗೆ ಥಳಿಸಿದ್ದಾನೆ. ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಮೌರಾನಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ವಿದ್ಯಾಸಾಗರ್ ಸಿಂಗ್ ಮಾತನಾಡಿ, ಯುವಕನ ದೂರಿನ ಮೇರೆಗೆ ಐದು ಮಂದಿ ಹೆಸರಿಸಲಾದ ಮತ್ತು ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.