ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಳಉಡುಪಿನೊಳಗೆ ಆಮೆಗಳ ಕಳ್ಳಸಾಗಣೆ- ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ

Woman caught at airport: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಎದೆಭಾಗದ ಒಳಉಡುಪಿನಲ್ಲಿ ಎರಡು ಆಮೆಗಳನ್ನು ಅಡಗಿಸಿಟ್ಟು ಸಾಗಿಸಿದ್ದಾಳೆ. ಸ್ಕ್ರೀನಿಂಗ್ ತಂತ್ರಜ್ಞಾನದಲ್ಲಿ ಮಹಿಳೆಯ ಎದೆಯ ಪ್ರದೇಶದಲ್ಲಿ ವಸ್ತುವೊಂದು ಇರುವುದು ತಿಳಿದುಬಂದಿದೆ. ಈ ವೇಳೆ ಅಧಿಕಾರಿಗಳು ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಎರಡು ಜೀವಂತ ಆಮೆಗಳನ್ನು ಕಂಡುಹಿಡಿದಿದ್ದಾರೆ.

ಒಳಉಡುಪಿನೊಳಗೆ ಆಮೆಗಳನ್ನಿಟ್ಟು ಕಳ್ಳಸಾಗಣೆ- ವಿಡಿಯೊ ಫುಲ್‌ ವೈರಲ್‌

Priyanka P Priyanka P Jul 29, 2025 4:13 PM

ಮಿಯಾಮಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಎದೆಭಾಗದ ಒಳಉಡುಪಿನಲ್ಲಿ ಎರಡು ಆಮೆಗಳನ್ನು ಅಡಗಿಸಿಟ್ಟು ಸಾಗಿಸಿದ್ದಾಳೆ. ಭದ್ರತಾ ಸಿಬ್ಬಂದಿ ಆಕೆಯನ್ನು ಗುರುತಿಸಿ, ಕೂಡಲೇ ತಡೆಹಿಡಿದಿದ್ದಾರೆ. ವರದಿಯ ಪ್ರಕಾರ, ಸ್ಕ್ರೀನಿಂಗ್ ತಂತ್ರಜ್ಞಾನದಲ್ಲಿ ಮಹಿಳೆಯ ಎದೆಯ ಪ್ರದೇಶದಲ್ಲಿ ವಸ್ತುವೊಂದು ಇರುವುದು ತಿಳಿದುಬಂದಿದೆ. ನಂತರ ಆಕೆಯನ್ನು ಖಾಸಗಿ ಸ್ಕ್ರೀನಿಂಗ್‌ಗಾಗಿ ಪಕ್ಕಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಅಧಿಕಾರಿಗಳು ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಎರಡು ಜೀವಂತ ಆಮೆಗಳನ್ನು ಕಂಡುಹಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೋಗಳು ಆಮೆಗಳನ್ನು ಹೇಗೆ ಪ್ಯಾಕ್ ಮಾಡಿ ಮರೆಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದ ಫ್ಲೋರಿಡಾ ಮಹಿಳೆಯೊಬ್ಬರು ಇತ್ತೀಚೆಗೆ ನಮ್ಮ ಚೆಕ್‌ಪಾಯಿಂಟ್ ಮೂಲಕ ಎರಡು ಆಮೆಗಳನ್ನು ಕರೆದೊಯ್ಯಲು ಪ್ರಯತ್ನಿಸಿದರು ಎಂದು ಟಿಎಸ್ಎ ಫೇಸ್‌ಬುಕ್ ಪೋಸ್ಟ್‌ ತಿಳಿಸಿದೆ.



ಈ ಘಟನೆಯಲ್ಲಿ ಒಂದು ಆಮೆ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು. ಬದುಕುಳಿದ ಆಮೆಯನ್ನು ಸರಿಯಾದ ಆರೈಕೆಗಾಗಿ ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಇಲಾಖೆಗೆ ಹಸ್ತಾಂತರಿಸಲಾಯಿತು.

ಘಟನೆಯ ನಂತರ ಟಿಎಸ್ಎ ಸಾಮಾಜಿಕ ಮಾಧ್ಯಮದಲ್ಲಿ ಜ್ಞಾಪನೆಯನ್ನು ನೀಡಿದೆ. ಭದ್ರತಾ ಚೆಕ್‌ಪೋಸ್ಟ್‌ಗಳ ಮೂಲಕ ಸಾಕುಪ್ರಾಣಿಗಳನ್ನು ಅನುಮತಿಸಲಾಗಿದ್ದರೂ, ಅವುಗಳನ್ನು ಸರಿಯಾಗಿ ಸಾಗಿಸಬೇಕು ಎಂದು ಸಂಸ್ಥೆ ಒತ್ತಿ ಹೇಳಿದೆ. ದೇಹದ ಒಳಭಾಗದಲ್ಲಿ ಅಡಗಿಸಿಟ್ಟುಕೊಂಡು ಪ್ರಾಣಿಗಳನ್ನು ಸಾಗಿಸುವ ಪ್ರಯತ್ನವನ್ನು ಮಾಡಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?

ಈ ಹಿಂದೆ ವರದಿಯಾಗಿದ್ದ ಇದೇ ರೀತಿಯ ಘಟನೆಗಳು

ಟಿಎಸ್ಎ ಅಧಿಕಾರಿಗಳು ಅಸಾಮಾನ್ಯ ರೀತಿಯಲ್ಲಿ ಅಡಗಿರುವ ಪ್ರಾಣಿಗಳನ್ನು ಕಂಡುಕೊಂಡಿರುವುದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ, ನ್ಯೂವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ತನ್ನ ಪ್ಯಾಂಟ್‌ನ ಮುಂಭಾಗದಲ್ಲಿ ಆಮೆಯನ್ನು ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆಮೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

2024 ರಲ್ಲಿ, ವ್ಯಕ್ತಿಯೊಬ್ಬ ಹಾವುಗಳಿಂದ ತುಂಬಿದ ಚೀಲದೊಂದಿಗೆ ವಿಮಾನ ಹತ್ತಲು ಪ್ರಯತ್ನಿಸಿದ್ದ. ಮತ್ತು 2023 ರಲ್ಲಿ, ಮಿಯಾಮಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಚಿಲಿಪಿಲಿ ಶಬ್ಧ ಕೇಳಿದೆ. ಅನುಮಾನಗೊಂಡ ಅವರು ಪರೀಕ್ಷಿಸಿದಾಗ ಜೀವಂತ ಅಮೆಜಾನ್ ಗಿಣಿ ಮೊಟ್ಟೆಗಳು ಮತ್ತು ಪಕ್ಷಿಗಳನ್ನು ಕಂಡುಹಿಡಿದರು. ಚೀಲವನ್ನು ಹೊತ್ತ ವ್ಯಕ್ತಿ ನಿಕರಾಗುವಾದಿಂದ ತೈವಾನ್‌ಗೆ ತೆರಳುತ್ತಿದ್ದ. ನಂತರ ಅವನು ಕಳ್ಳಸಾಗಣೆ ಆರೋಪಗಳನ್ನು ಒಪ್ಪಿಕೊಂಡನು.