Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್ (Pahalgam) ಜಿಲ್ಲೆಯ ಬೈಸರನ್ ಕಣಿವೆಯ ಸುಂದರವಾದ ಹುಲ್ಲುಗಾವಲು ಪ್ರದೇಶದಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಮೊದಲು ಮತ್ತು ಅನಂತರದ ಕೆಲವು ವಿಡಿಯೋಗಳು ಹೊರಬರುತ್ತಿವೆ. ಇದೀಗ ಭಯೋತ್ಪಾದಕ ದಾಳಿಯ ಅನಂತರ ಪಹಲ್ಗಾಮ್ ಮಾರುಕಟ್ಟೆಯಲ್ಲಿ ಪ್ರವಾಸಿಗರು ಓಡುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್ (Pahalgam) ಜಿಲ್ಲೆಯ ಬೈಸರನ್ ಕಣಿವೆಯ ಸುಂದರವಾದ ಹುಲ್ಲುಗಾವಲು ಪ್ರದೇಶದಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಮೊದಲು ಮತ್ತು ಅನಂತರದ ಕೆಲವು ವಿಡಿಯೊಗಳು ಹೊರಬರುತ್ತಿವೆ. ಇದೀಗ ಭಯೋತ್ಪಾದಕ ದಾಳಿಯ ಅನಂತರ ಪಹಲ್ಗಾಮ್ ಮಾರುಕಟ್ಟೆಯಲ್ಲಿ ಪ್ರವಾಸಿಗರು ಓಡುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿರುವ ದೃಶ್ಯಾವಳಿಯ ಸಮಯವು ಏಪ್ರಿಲ್ 22ರಂದು ಭಯೋತ್ಪಾದಕ ದಾಳಿಯ ಸಮಯಕ್ಕೆ ಹೊಂದಿಕೆಯಾಗುತ್ತದೆ. ಈ ವಿಡಿಯೋ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ ಒಂದು ಗಂಟೆಯ ಅನಂತರದ್ದು ಎನ್ನಲಾಗಿದೆ.
ಬೈಸರನ್ ಕಣಿವೆಯ ಹುಲ್ಲುಗಾವಲಿನಿಂದ ಕೆಳಗೆ ಇಳಿಜಾರಿನಲ್ಲಿರುವ ಮಾರುಕಟ್ಟೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಭಯೋತ್ಪಾದಕ ದಾಳಿ ಪ್ರಾರಂಭವಾದ ಒಂದು ಗಂಟೆಯ ನಂತರ ಮಕ್ಕಳು ಸೇರಿದಂತೆ ಪ್ರವಾಸಿಗರು ಓಡುತ್ತಿರುವುದು, ವಾಹನಗಳು ರಸ್ತೆಯಲ್ಲಿ ವೇಗವಾಗಿ ಸಾಗುತ್ತಿರುವುದನ್ನು ಕಾಣಬಹುದು. ಈ ದೃಶ್ಯಾವಳಿಗಳ ಸಮಯ ಏಪ್ರಿಲ್ 22ರಂದು ಭಯೋತ್ಪಾದಕರು ದಾಳಿ ನಡೆಸಿರುವ ಸಮಯಕ್ಕೆ ಹೊಂದಿಕೆಯಾಗುತ್ತದೆ. ಇದು ಪಾಕಿಸ್ತಾನದ ಲಷ್ಕರ್ ಈ ತೈಬಾಗೆ ಸಂಬಂಧಿತ ಸಂಘಟನೆಯಾದ ಟಿಆರ್ ಎಫ್ ನ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ ಒಂದು ಗಂಟೆಯ ಅನಂತರದ್ದು ಎಂದು ಮೂಲಗಳು ತಿಳಿಸಿವೆ.
ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಪ್ರವಾಸಿಗರು ಬೈಸರನ್ ನ ಎತ್ತರದ ಪ್ರದೇಶದಿಂದ ಭಯೋತ್ಪಾದಕರು ನಿರ್ಬಂಧಿಸದ ಮಾರ್ಗದ ಮೂಲಕ ಮಾರುಕಟ್ಟೆಗೆ ಓಡಿಕೊಂಡು ಬಂದರು. ಅಲ್ಲದೇ ಈ ದೃಶ್ಯಗಳಲ್ಲಿ ಕೆಲವು ವಾಹನಗಳು ಗಾಯಗೊಂಡ ಜನರನ್ನು ಹೊತ್ತೊಯ್ಯುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 22ರಂದು ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದು ಕಾಡಿನೊಳಗೆ ಹೋಗಿ ಮರೆಯಾಗಿದ್ದಾರೆ. ಇಲ್ಲಿ ಪ್ರವಾಸಿಗರು ತೆಗೆದಿರುವ ಒಂದೊಂದೇ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವೆಲ್ಲವನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ.
ವೈರಲಾಗಿರುವ ವಿಡಿಯೊ ಇಲ್ಲಿದೆ
ಇದರಲ್ಲಿ ಜಿಪ್‌ಲೈನ್ ಸವಾರಿ ಮಾಡಿದ ಪ್ರವಾಸಿಗರೊಬ್ಬರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅದರಲ್ಲಿ ಭಯೋತ್ಪಾದಕರು ಓಡುತ್ತಿರುವ ಪ್ರವಾಸಿಗರ ಮೇಲೆ ಹತ್ತಿರದಿಂದ ಗುಂಡು ಹಾರಿಸಿ ಕೊಳ್ಳುತ್ತಿರುವ ದೃಶ್ಯ ಸೆರೆಯಾಗಿತ್ತು.
To all journalists & leaders who claimed 'locals were unaware': Watch this! 🎥 Locals heard gunshots, chanted 'Allah hu Akbar' 3x before tourist release.
— Dharma's🛡️Shield 🚩 (@DharmaShield) April 28, 2025
One even pushed a man to die.
What's your defense now? 🔍 #pahelgamattack #Pahelgam 🇮🇳 pic.twitter.com/07jt0ia7zO
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಯ ಬಳಿಕ ಕೇಂದ್ರ ಸರ್ಕಾರವು ಉಗ್ರರಿಗೆ ಬೆಂಬಲ ನೀಡುವ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನಿಷೇಧ, ಸಿಂಧೂ ಜಲ ಒಪ್ಪಂದ ರದ್ದು, ಪಾಕಿಸ್ತಾನಿ ಸರಕುಗಳಿಗೆ ವಾಯುಪ್ರದೇಶ, ಬಂದರು,ರಸ್ತೆ ಸಾರಿಗೆ ಬಂದ್ ಸೇರಿದಂತೆ ಇನ್ನು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರರಿಗೆ ಸಹಾಯ ಮಾಡಿದ್ದ ಶಂಕಿತ ಪೊಲೀಸ್ ಚೇಸಿಂಗ್ ವೇಳೆ ನದಿಗೆ ಹಾರಿ ಸಾವು
ಭಯೋತ್ಪಾದಕರ ವಿರುದ್ಧಕ್ರಮಕೈಗೊಂಡಿರುವ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಕೆಲವು ಶಂಕಿತರು ವಿಮಾನದಲ್ಲಿ ಶ್ರೀಲಂಕಾಕ್ಕೆ ತೆರಳಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶನಿವಾರ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಏರ್ ಲೈನ್ಸ್ ವಿಮಾನವನ್ನು ಶೋಧಿಸಲಾಯಿತು. ವಿಮಾನ ಸಂಪೂರ್ಣ ಪರಿಶೀಲನೆಯ ಅನಂತರ ಟೇಕ್-ಆಫ್‌ಗೆ ಅನುಮತಿ ನೀಡಲಾಯಿತು.