ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಸರ್ವಕಾಲಿಕ ಶ್ರೇಷ್ಠ ಟಿ20ಐ ಪ್ಲೇಯಿಂಗ್‌ XI ಆರಿಸಿದ ದಿನೇಶ್‌ ಕಾರ್ತಿಕ್!‌

ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಟಿ20ಐ ಪ್ಲೇಯಿಂಗ್‌ XI ಅನ್ನು ಕಟ್ಟಿದ್ದಾರೆ. ಅಚ್ಚರಿಯೇನೆಂದರೆ ದಿನೇಶ್‌ ಕಾರ್ತಿಕ್‌ ಅವರ ತಂಡದಲ್ಲಿ ವಿರಾಟ್‌ ಕೊಹ್ಲಿಯವರಿಗೆ ಸ್ಥಾನವನ್ನು ನೀಡಲಾಗಿಲ್ಲ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಟಿ20ಐ ಪ್ಲೇಯಿಂಗ್‌ XI ಕಟ್ಟಿದ ಕಾರ್ತಿಕ್‌!

ಭಾರತದ ಸಾರ್ವಕಾಲಿಕ ಶ್ರೇಷ್ಠ ಟಿ20 ಪ್ಲೇಯಿಂಗ್‌ XI ಆರಿಸಿದ ದಿನೇಶ್‌ ಕಾರ್ತಿಕ್‌. -

Profile Ramesh Kote Sep 6, 2025 9:00 PM

ದುಬೈ: ಬಹುನಿರೀಕ್ಷಿತ 2025ರ ಏಷ್ಯಾಕಪ್‌ (Asia Cup 2025) ಟೂರ್ನಿಯು ಸೆಪ್ಟೆಂಬರ್‌ 9ರಂದು ಯುಎಇನಲ್ಲಿ ಆರಂಭವಾಗಲಿದೆ. ಈಗಾಗಲೇ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ಸೂರ್ಯಕುಮಾರ್‌ ಯಾದವ್‌ ಅವರ ನೇತೃತ್ವದಲ್ಲಿ 15 ಮಂದಿ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು (India) ಪಗ್ರಕಟಿಸಿದೆ. ಇದರ ನಡುವೆ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲವನ್ನು ಕೆರಳಿಸುದೆ. ಹಲವು ಮಾಜಿ ಆಟಗಾರರು ತಮ್ಮ ತಮ್ಮ ಪ್ಲೇಯಿಂಗ್‌ XI ಪ್ರಕಟಿಸುತ್ತಿದ್ದಾರೆ. ಅದರಂತೆ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ (Dinesh Karthik) ಭಾರತ ತಂಡದ ಸರ್ವಕಾಲಿಕ ಶ್ರೇಷ್ಠ ಟಿ20ಐ ಪ್ಲೇಯಿಂಗ್‌ XI ಅನ್ನು ಹೆಸರಿಸಿದ್ದಾರೆ. ಅಚ್ಚರಿಯೇನೆಂದರೆ ದಿನೇಶ್‌ ಕಾರ್ತಿಕ್‌ ಅವರ ತಂಡದಲ್ಲಿ ವಿರಾಟ್‌ ಕೊಹ್ಲಿಯವರಿಗೆ ಸ್ಥಾನ ನೀಡಿಲ್ಲ.

ಈ ಬಗ್ಗೆ ಕ್ರಿಕ್‌ಬಜ್‌ನ ವಿಡಿಯೊವೊಂದರಲ್ಲಿ ಮಾತನಾಡಿ ದಿನೇಶ್‌ ಕಾರ್ತಿಕ್‌, ಸಾರ್ವಕಾಲಿಕ ಶ್ರೇಷ್ಠ ಟಿ20 ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡಿದ್ದಾರೆ. ಅವರು ಆರಂಭಿಕ ಬ್ಯಾಟರ್‌ಗಳನ್ನಾಗಿ ಅಭಿಷೇಕ್‌ ಶರ್ಮಾ ಮತ್ತು 2024 ಟಿ20 ವಿಶ್ವಕಪ್‌ ವಿಜೇತ ನಾಯಕ ರೋಹಿತ್‌ ಶರ್ಮಾ ಅವರನ್ನು ಆರಿಸಿದ್ದಾರೆ. 3ನೇ ಕ್ರಮಾಂಕದ ಆಯ್ಕೆ ವಿರಾಟ್‌ ಕೊಹ್ಲಿಯವರ ಬದಲಿಗೆ ತನ್ನನ್ನೇ ದಿನೇಶ್‌ ಕಾರ್ತಿಕ್‌ ಆರಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಹಾಲಿ ಟಿ20ಐ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ರವರನ್ನು ಆಯ್ಕೆ ಮಾಡಿದ್ದಾರೆ.

Asia Cup 2025: ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಮದನ್‌ ಲಾಲ್‌!

ಸೂರ್ಯಕುಮಾರ್‌ 2021ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟಿ20ಐಗೆ ಪದಾರ್ಪಣೆ ಮಾಡಿ ಅತ್ಯತ್ತಮ ಪ್ರದರ್ಶನ ನೀಡುತ್ತಿದ್ದಾರೆ. 34ರ ವಯಸ್ಸಿನ ಸೂರ್ಯಕುಮಾರ್‌ ಯಾದವ್‌, ಈಗಾಗಲೇ 2598ರನ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ದಿನೇಶ್‌ ಕಾರ್ತಿಕ್‌ 2007ರ ಟಿ-20 ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಆರು ಸಿಕ್ಸರ್‌ ಸಿಡಿಸಿ ಅಪರೂಪದ ದಾಖಲೆ ಮಾಡಿದ್ದ ಯುವರಾಜ್‌ ಸಿಂಗ್‌ ಅವರನ್ನು 5ನೇ ಕ್ರಮಾಂಕಕ್ಕೆ ಆರಿಸಿದ್ದಾರೆ. ಇನ್ನು 6ನೇ ಕ್ರಮಾಂಕದಲ್ಲಿ ಹಾಲಿ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಸ್ಥಾನ ಪಡೆದರೆ, 7ನೇ ಕ್ರಮಾಂಕದಲ್ಲಿ ಕ್ಯಾಪ್ಟನ್‌ ಕೂಲ್‌ ಎಂ ಎಸ್‌ ಧೋನಿಯನ್ನು ಆರಿಸಿ ನಾಯಕತ್ವವನ್ನು ನೀಡಲಾಗಿದೆ.

ಎಂಎಸ್‌ ಧೋನಿ ಭಾರತವನ್ನು 2007ರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮುನ್ನಡೆಸಿದ್ದರು. ಈ ವೇಳೆ ದಿನೇಶ್‌ ಕಾರ್ತಿಕ್‌ ಕೂಡ ತಂಡದ ಭಾಗವಾಗಿದ್ದರು. ವಿಕೆಟ್‌ ಕೀಪರ್‌ ದಂತಕಥೆ ಧೋನಿಯವರು ಭಾರತವನ್ನು 72 ಟಿ-20ಐ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ 42 ಪಂದ್ಯಗಳಲ್ಲಿ ಗೆಲುವು ಮತ್ತು 28 ಪಂದ್ಯಗಳಲ್ಲಿ ಸೋಲು ಮತ್ತು 2 ಪಂದ್ಯಗಳು ಫಲಿತಾಂಶ ಕಂಡಿಲ್ಲ.

Asia Cup 2025: ಏಷ್ಯಾಕಪ್‌ ಎಲ್ಲ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ

8ನೇ ಕ್ರಮಾಂಕದಲ್ಲಿ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌, ನಂತರ ಜಸ್‌ಪ್ರೀತ್‌ ಬುಮ್ರಾ, (ಟೀಮ್‌ ಇಂಡಿಯಾ ಪರ 89 ವಿಕೆಟ್‌ ಕಬಳಿಸಿದ್ದಾರೆ) ಬಳಿಕ ಭುವನೇಶ್ವರ್‌ ಕುಮಾರ್‌, (87 ಪಂದ್ಯಗಳಲ್ಲಿ 90 ವಿಕೆಟ್‌ ಉರುಳಿಸಿದ್ದಾರೆ) ತಮ್ಮ ಕೊನೆಯ ಬೌಲಿಂಗ್‌ ಆಯ್ಕೆಯನ್ನು ಸ್ಪಿನ್‌ಗೆ ಮಣೆ ಹಾಕಿರುವ ಕಾರ್ತಿಕ್‌, ಯುವ ಸ್ಪಿನ್ನರ್‌ ವರುಣ ಚಕ್ರವರ್ತಿಗೆ ಸ್ಥಾನ ನೀಡಿದ್ದಾರೆ.

ದಿನೇಶ್ ಕಾರ್ತಿಕ್ ಅವರ ಸಾರ್ವಕಾಲಿಕ ಶ್ರೇಷ್ಠ ಭಾರತ ಟಿ20I ಪ್ಲೇಯಿಂಗ್‌ XI: ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ

ಏಷ್ಯಾಕಪ್‌ 2025ಕ್ಕೆ ಭಾರತ ತಂಡ: ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ. ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.