Cannes Fashion 2026: 2026ರ ಕಾನ್ಸ್ನ ಕಳೆ ಹೆಚ್ಚಿಸಿದ ಐಶ್ವರ್ಯಾ ರೈ
ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಕಾನ್ಸ್ ಫೆಸ್ಟಿವಲ್ನ ಕಳೆ ಹೆಚ್ಚಿಸಿದ್ದಾರೆ. ಅವರು ಧರಿಸಿದ್ಧ ಸ್ಪೆಷಲ್ ಡಿಸೈನರ್ವೇರ್ಗಳು ಹೇಗಿದ್ದವು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ. -
ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ 2026 ರ ಕಾನ್ಸ್ ಫಿಲ್ಮ್ ಫೆಸ್ಟಿವಲ್ನ ಕಳೆ ಹೆಚ್ಚಿಸಿದ್ದಾರೆ.
ಅಭಿಮಾನಿಗಳ ಮನ ಗೆದ್ದ ಐಶು ಡಿಸೈನರ್ವೇರ್ಸ್
ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಐಶ್ವರ್ಯಾ ರೈ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಕಾನ್ಸ್ ಫೆಸ್ಟಿವಲ್ನ ರಂಗು ಹೆಚ್ಚಿಸಿದ್ದಾರೆ. ಎಂದಿನಂತೆ ಅಭಿಮಾನಿಗಳನ್ನು ತಮ್ಮ ವಿಶೇಷ ಡಿಸೈನರ್ವೇರ್ ಹಾಗೂ ಲುಕ್ನಿಂದಲೇ ಆಕರ್ಷಿಸಿದ್ದಾರೆ.
ಫಸ್ಟ್ ಡೇ ಐಶ್ವರ್ಯಾ ಲುಕ್
ಮೊದಲ ದಿನ ಸೆಲೆಬ್ರೆಟಿ ಡಿಸೈನರ್ ಅಮಿತ್ ಅಗರ್ವಾಲ್ ಡಿಸೈನ್ ಮಾಡಿದ ಶಿಮ್ಮರಿಂಗ್ ಸಫೈರ್ ಬ್ಲ್ಯೂ ಡಿಸೈನರ್ ಮೆರ್ಮೈಡ್ ಅಸ್ಸೆಮ್ಮಿಟ್ರಿಕ್ ಡಿಸೈನ್ನ ಗೌನ್ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ ಅವರ ಈ ಗೌನ್ ಸಿದ್ಧಪಡಿಸಲು ಸರಿ ಸುಮಾರು 1500 ಗಂಟೆಗಳು ಬೇಕಾಯಿತಂತೆ. ಹಾಗೆಂದಿದ್ದಾರೆ ಸ್ಟೈಲಿಸ್ಟ್ಗಳು.
ಐಶ್ವರ್ಯಾ ರೈ 2ನೇ ದಿನದ ಲುಕ್
ಇನ್ನು, ಎರಡನೇಯ ದಿನ ಐಶ್ವರ್ಯಾ, ಸ್ಯಾಟಿನ್ ಸಿಲ್ಕ್ ಕ್ರೇಪ್ನ ಬ್ಲಶ್ ಪಿಂಕ್ ಕಲರ್ನ ಕೇಪ್ ಹಾಗೂ ಎಂಬೋಸಿಂಗ್ನಂತಹ ಡಿಸೈನ್ ಹೊಂದಿರುವ ಸ್ಟ್ರಾಪ್ಲೆಸ್ ಬಾಡೀಸ್ ಗೌನ್ನಲ್ಲಿ ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಫ್ಯಾಷನ್ ಪ್ರೇಮಿಗಳನ್ನು ಸೆಳೆದರು. ಅವರ ಸಿಂಪಲ್ ಮೇಕಪ್ ಹಾಗೂ ಹೇರ್ಸ್ಟೈಲ್ ಎಂದಿನಂತೆ ಅವರ ಸೌಂದರ್ಯಕ್ಕೆ ಸಾಥ್ ನೀಡಿದ್ದವು.
ಮಗಳೊಂದಿಗೆ ಕಾಣಿಸಿಕೊಂಡ ಐಶ್ವರ್ಯಾ ರೈ
ಪ್ರತಿ ಬಾರಿಯೂ ಮಗಳೊಂದಿಗೆ ಕಾನ್ಸ್ಗೆ ಆಗಮಿಸುವ ಐಶ್ವರ್ಯಾ ರೈ, ಈ ಬಾರಿ, ಎರಡನೇ ಬಾರಿಯ ಲುಕ್ನಲ್ಲಿ ಮಗಳು ಆರಾಧನಾಳೊಂದಿಗೆ ಪೋಸ್ ಕೂಡ ನೀಡಿದರು. ಆರಾಧನಾ ಸ್ಯಾಟೀನ್ ರೆಡ್ ಕೇಪ್ ಗೌನ್ನಲ್ಲಿ ಅಮ್ಮನೊಂದಿಗೆ ಪೋಸ್ ನೀಡಿದರು. ಇದು ಈ ಬಾರಿ ವಿಶೇಷವಾಗಿತ್ತು.