Star Fashion 2025: ಸಮಂತಾ ಡಿಸೈನರ್ ಇಂಡೋ-ವೆಸ್ಟರ್ನ್ ಸೀರೆಯಲ್ಲಿ ನಟಿ ಕಾವ್ಯಾ ಶೆಟ್ಟಿ ಅತ್ಯಾಕರ್ಷಕ ಲುಕ್
Star Fashion 2025: ಬಹು ಭಾಷಾ ತಾರೆ ಕಾವ್ಯಾ ಶೆಟ್ಟಿ ಧರಿಸಿದ್ದ ಕ್ರಿಮ್ಸನ್ ರೆಡ್ ಶೇಡ್ನ ಇಂಡೋ-ವೆಸ್ಟರ್ನ್ ಶೈಲಿಯ ಸೀರೆಯು ಸದ್ಯ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ರೆಡಿ ಸೀರೆ? ನಟಿ ಕಾವ್ಯಾ ಹೇಳುವುದೇನು? ಡಿಸೈನರ್ ಯಾರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.



ಸಮಂತಾ ಡಿಸೈನರ್ ಇಂಡೋ-ವೆಸ್ಟರ್ನ್ ಸೀರೆಯಲ್ಲಿ ನಟಿ ಕಾವ್ಯಾ ಶೆಟ್ಟಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಹಾಟ್ ಕಲರ್ ಎಂದೇ ಹೇಳಲಾಗುವ ಕ್ರಿಮ್ಸನ್ ರೆಡ್ ಶೇಡ್ನ ಇಂಡೋ-ವೆಸ್ಟರ್ನ್ ಶೈಲಿಯ ರೆಡಿ ಸೀರೆಯಲ್ಲಿ ಬಹು ಭಾಷಾ ತಾರೆಯಾದ ಕಾವ್ಯಾ ಶೆಟ್ಟಿ, ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಸೀರೆ ಪ್ರಿಯರನ್ನು ಸೆಳೆದಿದೆ. ಜತೆಗೆ ಫಾಲೋವರ್ಗಳನ್ನು ಆಕರ್ಷಿಸಿದೆ.

ಇದು ಸಮಂತಾ ಅಪರ್ಣಾ ಡಿಸೈನರ್ವೇರ್
ಅಂದಹಾಗೆ, ಇದು ಸೆಲೆಬ್ರೆಟಿ ಡಿಸೈನರ್ ಅಪರ್ಣಾ ಸಮಂತ್ ಡಿಸೈನರ್ ಸೀರೆ! ಅವರೇ ಹೇಳುವಂತೆ, ನಟಿ ಕಾವ್ಯಾ ಶೆಟ್ಟಿ ಧರಿಸಿರುವ ಈ ಡಿಸೈನರ್ ರೆಡಿ ಸೀರೆಯು ಇಂಡೋ-ವೆಸ್ಟರ್ನ್ ವಿನ್ಯಾಸವನ್ನೊಳಗೊಂಡಿದೆ. ಈ ಡಿಸೈನರ್ವೇರ್ನ ವಿಶೇಷತೆ ಎಂದರೆ, ಕ್ರಿಮ್ಸನ್ ರೆಡ್ ಶೇಡ್ ಸ್ಟ್ರೆಚಬಲ್ ಫ್ಯಾಬ್ರಿಕ್ ಹೊಂದಿರುವುದು, ಸ್ಟೈಲಿಶ್ ಕಾರ್ಸೆಟ್ ಜತೆ ವಿನ್ಯಾಸಗೊಂಡಿರುವುದು ಎನ್ನುತ್ತಾರೆ.
ಅಲ್ಲದೇ, ಇದೊಂದು ಅಲ್ಟ್ರಾ ಲಕ್ಷುರಿ ಡಿಸೈನರ್ವೇರ್ ಇದಾಗಿದ್ದು, ಕಾವ್ಯಾ ಶೆಟ್ಟಿಯವರ ಬಾಡಿ ಮಾಸ್ ಇಂಡೆಕ್ಸ್ಗೆ ಹೊಂದುವಂತಿದೆ. ಅಲ್ಲದೇ, ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎಂದಿದ್ದಾರೆ.

ನಟಿ ಕಾವ್ಯಾ ಶೆಟ್ಟಿಯ ಡಿಸೈನರ್ ಸೀರೆ ಲವ್
ಈ ಸ್ಪೆಷಲ್ ಡಿಸೈನರ್ವೇರನ್ನು ಅತ್ಯಾಕರ್ಷಕವಾಗಿ ಸಿದ್ಧಪಡಿಸಿರುವುದು ಸ್ನೇಹಿತೆ ಅಪರ್ಣಾ ಸಮಂತಾರವರು. ನನ್ನ ಅಭಿಲಾಷೆಗೆ ತಕ್ಕಂತೆ ಇದನ್ನು ಡಿಸೈನ್ ಮಾಡಿರುವುದು ಖುಷಿ ತಂದಿದೆ. ಶ್ರೀಲಂಕಾ ಇವೆಂಟ್ವೊಂದರಲ್ಲಿ ಪಾಲ್ಗೊಳ್ಳಲು ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದೆ ಎಂದು ವಿಶ್ವವಾಣಿ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.

ಬ್ಯೂಟಿಫುಲ್ ಮೇಕೋವರ್
ಇನ್ನು, ಧರಿಸಿದ ಅರ್ನಾವ್ ಜ್ಯುವೆಲರಿ ಈ ಡಿಸೈನರ್ವೇರನ್ನು ಮತ್ತಷ್ಟು ಹೈಲೈಟ್ ಮಾಡಿದ್ದು, ಗ್ಲಾಮ್ ಮೇಕಪ್ ಹಾಗೂ ಸಾಫ್ಟ್ ಬೀಚ್ ವೇವ್ಸ್ ಹೇರ್ಡೂ ಈ ಲುಕ್ಗೆ ಸಾಥ್ ನೀಡಿದೆ. ಒಟ್ಟಾರೆ, ನನ್ನ ಈ ಲುಕ್ ಡಿಸೈನರ್ವೇರ್ನಿಂದಾಗಿ ಮತ್ತಷ್ಟು ಗ್ಲಾಮರಸ್ ಆಗಿಸಿದೆ ಎಂದಿದ್ದಾರೆ ಕಾವ್ಯಾ ಶೆಟ್ಟಿ.