Tradition: ಪುರುಷರು ಈ 5 ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ
ದೇಶಾದ್ಯಂತ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಬಹುತೇಕ ದೇವಾಲಯ, ಆಲಯದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ವಿಶೇಷ ದೇವಾಲಯಗಳಲ್ಲಿ ಮಾತ್ರ ಪುರುಷರಿಗೆ ನಿಷೇಧ ಹೇರಲಾಗಿದೆ. ಕೆಲವೊಂದು ಸಮಯ, ಸಂದರ್ಭಗಳಲ್ಲಿ ಈ ದೇಗುಲಗಳಿಗೆ ಪುರುಷರ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಆ ದೇವಾಲಯಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.



ವಿಶಿಷ್ಟ ಆಚರಣೆ
ಭಾರತದಲ್ಲಿನ ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಆಚರಣೆಗಳನ್ನು ಹೊಂದಿದೆ. ಬಹುತೇಕ ದೇವಾಲಯಗಳಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ದೇಗುಲಗಳಲ್ಲಿ ಪುರುಷರಿಗೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಸಂಪೂರ್ಣ ನಿರ್ಬಂಧವಿದೆ.

ಕನ್ಯಾಕುಮಾರಿ ದೇವಾಲಯ
ತಮಿಳುನಾಡಿನಲ್ಲಿರುವ ಕನ್ಯಾಕುಮಾರಿ ದೇವಾಲಯದಲ್ಲಿ ಕನ್ಯಾಕುಮಾರಿ ದೇವಿಯನ್ನು ಯುವ, ಕನ್ಯೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಸಂಪ್ರದಾಯ ಅವಳನ್ನು ಪಾರ್ವತಿ ಅಥವಾ ಲಕ್ಷ್ಮೀ ದೇವಿಯ ಅವತಾರವೆನ್ನುತ್ತದೆ. ಇಲ್ಲಿ ವಿವಾಹಿತ ಪುರುಷರು ಗರ್ಭಗುಡಿಗೆ ಪ್ರವೇಶಿಸುವಂತಿಲ್ಲ. ಮಹಿಳೆಯರು ಮುಕ್ತವಾಗಿ ಪೂಜೆ ಮಾಡಲು ಅವಕಾಶವಿದೆ.

ಭಗವತಿ ದೇವಾಲಯ
ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಕಲ್ ಭಗವತಿ ದೇವಾಲಯವು ಭದ್ರಕಾಳಿ ದೇವಿಗೆ ಸಮರ್ಪಿತವಾಗಿದೆ. ಅಟ್ಟುಕಲ್ ಅಮ್ಮ ಅಥವಾ ಕಣ್ಣಗಿ ಎಂದು ಕರೆಯಲಾಗುವ ಇಲ್ಲಿನ ದೇವಿಗೆ ನಡೆಸುವ ಅಟ್ಟುಕಲ್ ಪೊಂಗಲ ಹಬ್ಬದ ಸಮಯದಲ್ಲಿ ಪುರುಷರು ಬರುವಂತಿಲ್ಲ.

ಚಕ್ಕುಲತುಕಾವು ದೇವಾಲಯ
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿರುವ ಚಕ್ಕುಲತುಕಾವು ದೇವಾಲಯ ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಇಲ್ಲಿ ನಡೆಯುವ ನಾರಿ ಪೂಜಾ ಹಬ್ಬದ ಸಮಯದಲ್ಲಿ ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಾಮಾಖ್ಯ ದೇವಾಲಯ
ಅಸ್ಸಾಂನ ಗುವಾಹಟಿಯ ನೀಲಾಚಲ ಬೆಟ್ಟಗಳ ಮೇಲಿರುವ ಕಾಮಾಖ್ಯ ದೇವಾಲಯದ ವಾರ್ಷಿಕ ಅಂಬುಬಾಚಿ ಮೇಳದ ಸಮಯದಲ್ಲಿ ವಿವಾಹಿತ ಪುರುಷರಿಗೆ ದೇವಾಲಯದ ಪ್ರವೇಶಕ್ಕೆ ಅನುಮತಿ ಇಲ್ಲ. ಈ ವೇಳೆ ದೇವಿಗೆ ಮುಟ್ಟಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಮಹಿಳೆಯರು ದೇವಾಲಯದ ಒಳಗೆ ಬಂದು ಪ್ರಾರ್ಥಿಸಬಹುದಾಗಿದೆ.

ಮಾ ರಾಜ ರಾಜೇಶ್ವರಿ ದೇವಿ ದೇವಾಲಯ
ಬಿಹಾರದ ಮಾ ದೇವಾಲಯದಲ್ಲಿ ದುರ್ಗಾದೇವಿಯ ಪ್ರತಿರೂಪವಾದ 18 ಕೈಗಳಿರುವ ಮಾ ರಾಜ ರಾಜೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಇಲ್ಲಿಯೂ ದೇವಿಗೆ ಮುಟ್ಟು ಬಂದಾಗ ಪುರುಷರ ಪ್ರವೇಶವನ್ನು ನಿಷೇಧಿಸಲಾಗುತ್ತದೆ.