Star Monsoon Fashion 2025: ನಟಿ ಮೌನ ಗುಡ್ಡೆಮನೆ ಮಾನ್ಸೂನ್ ಟ್ರಾವೆಲ್ ಫ್ಯಾಷನ್ ಝಲಕ್
Actress Mouna Guddemane: ಸ್ನೇಹಿತೆಯರೊಂದಿಗೆ ಸಕಲೇಶಪುರಕ್ಕೆ ತೆರಳಿದ್ದ ನಟಿ ಮೌನ ಗುಡ್ಡೆಮನೆ, ಸಿಂಪಲ್ ಮಾನ್ಸೂನ್ ಟ್ರಾವೆಲ್ ಫ್ಯಾಷನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೋ ಆರ್ಡ್ ಸೆಟ್ ಜತೆಗೆ ಜಾಕೆಟ್ ಧರಿಸಿರುವ ಅವರು ಕಲರ್ಫುಲ್ ರೈನ್ಕೋಟ್ನಲ್ಲೂ ಹಂಗಾಮ ಎಬ್ಬಿಸಿದ್ದಾರೆ. ಅವರ ಲುಕ್ ಹೇಗಿತ್ತು? ಇಲ್ಲಿದೆ ವಿವರ.

ಚಿತ್ರಗಳು: ಮೌನ ಗುಡ್ಡೆಮನೆ, ನಟಿ.


ಗಮನ ಸೆಳೆದ ಫ್ಯಾಷನ್ ಲುಕ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼರಾಮಾಚಾರಿʼ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿರುವ ನಟಿ ಮೌನ ಗುಡ್ಡೆಮನೆಯ ಮಾನ್ಸೂನ್ ಟ್ರಾವೆಲ್ ಫ್ಯಾಷನ್ ಲುಕ್ ಅಭಿಮಾನಿಗಳನ್ನು ಸೆಳೆದಿದೆ.

ಸ್ನೇಹಿತೆಯರೊಂದಿಗೆ ಹಂಗಾಮ
ಹೌದು, ಈ ಮಳೆಗಾಲದಲ್ಲಿ ಮಾನ್ಸೂನ್ ಫ್ಯಾಷನ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಅವರು ತಮ್ಮ ಸ್ನೇಹಿತೆಯರೊಂದಿಗೆ ಸಕಲೇಶಪುರದಲ್ಲಿ ಎಂಜಾಯ್ ಮಾಡಿದ್ದಾರೆ. ಈ ಲುಕ್ನ ಫೋಟೊಗಳು ಇದೀಗ ಅವರ ಫಾಲೋವರ್ಗಳನ್ನು ಸೆಳೆದಿದೆ.

ಮೌನ ಸೀರೆ ಫ್ಯಾಷನ್
ಈಗಾಗಲೇ ʼರಾಮಾಚಾರಿʼ ಸೀರಿಯಲ್ ಮೂಲಕ ಮನೆಮಾತಾಗಿರುವ ಮೌನ ಗುಡ್ಡೆಮನೆ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ಮೂಲಕ ತಮ್ಮದೇ ಆದ ಸೀರೆಯಲ್ಲಿನ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಮಹಿಳಾ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿದ್ದಾರೆ. ಮೌನ ಧರಿಸುವ ಒಂದೊಂದು ಸೀರೆಯೂ ಮಹಿಳಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇರುತ್ತದೆ.

ಸೀರೆಗಳ ಫೋಟೊಶೂಟ್
ಮೌನ ಕೂಡ ಪ್ರತಿ ಎಪಿಸೋಡ್ನಲ್ಲಿ ಉಟ್ಟಿರುವ ಬಹುತೇಕ ಎಲ್ಲ ಸೀರೆಗಳ ಫೋಟೊಶೂಟ್ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಜತೆಗೆ ಆ ಸೀರೆಯ ಬ್ಲೌಸ್ ಡಿಸೈನರ್ನಿಂದಿಡಿದು ಸ್ಟೈಲಿಂಗ್, ಮೇಕಪ್ ಮಾಡಿದವರ ಹೆಸರನ್ನು ಮೆನ್ಷನ್ ಮಾಡುತ್ತಲೇ ಇರುತ್ತಾರೆ. ಇದು ಅವರ ಉತ್ಸಾಹವನ್ನು ತೋರಿಸುವುದಲ್ಲದೇ ಕೃತಜ್ಞತಾ ಮನೋಭಾವವನ್ನು ಬಿಂಬಿಸುತ್ತದೆ. ಇದು ಅವರ ಸೀರೆ ಫ್ಯಾಷನ್ ಕುರಿತ ಪ್ರೇಮವನ್ನು ವ್ಯಕ್ತಪಡಿಸುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಮೌನ ಗುಡ್ಡೆಮನೆ ಟ್ರಾವೆಲ್ ಲುಕ್
ಅಂದಹಾಗೆ, ನಟಿ ಮೌನ ಗುಡ್ಡೆಮನೆ ಆಗಾಗ್ಗೆ ವೆಸ್ಟರ್ನ್ ಔಟ್ಫಿಟ್ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಈ ಮಾನ್ಸೂನ್ನಲ್ಲಿ ಸಕಲೇಶಪುರದಲ್ಲಿ ಸ್ನೇಹಿತೆಯರೊಂದಿಗೆ ಸಮಯ ಕಳೆಯುವಾಗಲೂ ಅಷ್ಟೇ! ಸಿಂಪಲ್ ಜಾಗರ್ಸ್ ಶೈಲಿಯ ಕೋ ಆರ್ಡ್ ಸೆಟ್ ಹಾಗೂ ಜಾಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಮಾನ್ಸೂನ್ ಲುಕ್ಗೆ ಸೈ ಎಂದಿದ್ದಾರೆ. ಅವರು ಅಷ್ಟಕ್ಕೆ ಸುಮ್ಮನಾಗಿಲ್ಲ! ಮಳೆಯನ್ನು ಎಂಜಾಯ್ ಮಾಡಿದ್ದಾರೆ. ಸ್ನೇಹಿತೆಯರೊಂದಿಗೆ ಕಲರ್ಫುಲ್ ರೈನ್ಕೋಟ್ ಧರಿಸಿ, ಮಳೆಯಲ್ಲಿ ಮಿಂದಿದ್ದಾರೆ. ಇದು ಅವರ ಟ್ರಾವೆಲ್ ಫ್ಯಾಷನ್ಗೆ ಸಾಕ್ಷಿ ಎಂದಿದ್ದಾರೆ ಫ್ಯಾಷನ್ ಮಿಮರ್ಶಕರು.