Ugadi Fashion 2026: ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್
ಯುಗಾದಿ ಹಬ್ಬಕ್ಕೆ ಲಂಗ-ದಾವಣಿ ಧರಿಸಬೇಕೆಂದುಕೊಂಡಿದ್ದೀರಾ? ಹಾಗಾದಲ್ಲಿ ಈ ಸೀಸನ್ನಲ್ಲಿ ಯಾವ ಬಗೆಯವು ಟ್ರೆಂಡಿಯಾಗಿವೆ. ಲಂಗ-ದಾವಣಿ ಧರಿಸುವವರು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದರ ಬಗ್ಗೆ ಮಿಸೆಸ್ ಇಂಡಿಯಾ ಆಸ್ಟ್ರಲ್ ರನ್ನರ್ ಅಪ್ ನಿಶಾ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳು: ಡಾ. ನಿಶಾ ಮೈಸೂರು, ಮಿಸೆಸ್ ಇಂಡಿಯಾ ಆಸ್ಟ್ರಲ್ ರನ್ನರ್ ಅಪ್ 2025 -
ಯುಗಾದಿಗೆ ನೀವು ಲಂಗ-ದಾವಣಿ ಧರಿಸಬೇಕೆಂದು ಕೊಂಡಿದ್ದೀರಾ! ಹಾಗಾದಲ್ಲಿ ಈ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಲಂಗ-ದಾವಣಿ ಔಟ್ಫಿಟ್ ಬಗ್ಗೆ ತಿಳಿದುಕೊಳ್ಳಿ ಹಾಗೂ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದನ್ನು ಅರಿತುಕೊಳ್ಳಿ ಎನ್ನುತ್ತಾರೆ 2025 ರ ಮಿಸೆಸ್ ಇಂಡಿಯಾ ಆಸ್ಟ್ರಲ್ ರನ್ನರ್ ಅಪ್ ಡಾ. ನಿಶಾ.
2025 ರ ಮಿಸೆಸ್ ಇಂಡಿಯಾ ಆಸ್ಟ್ರಲ್ ರನ್ನರ್ ಅಪ್ ಡಾ. ನಿಶಾ ಅವರ ಪ್ರಕಾರ, ಒಂದಿಷ್ಟು ಅಂಶಗಳನ್ನು ಅಳವಡಿಸಿಕೊಂಡರೇ ಆಯಾ ಲಂಗ-ದಾವಣಿ ಡಿಸೈನ್ಗೆ ತಕ್ಕಂತೆ ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ.
ಯುಗಾದಿಯಲ್ಲಿ ಮರಳಿದ ಲಂಗ-ದಾವಣಿ
ಎಂದಿನಂತೆ ಹಬ್ಬಗಳು ಬಂದಾಗ ಲಂಗ-ದಾವಣಿ ನಾನಾ ಡಿಸೈನ್ನಲ್ಲಿ ಮರಳುತ್ತವೆ. ಈ ಬಾರಿ ಯುಗಾದಿಗೆ ಒಂದು ಡಿಸೈನ್ನದ್ದಲ್ಲ! ನಾನಾ ಡಿಸೈನ್ನ ಲಂಗ-ದಾವಣಿಗಳು ಬಂದಿವೆ. ಟ್ರೆಡಿಷನಲ್ ಬ್ರೋಕೆಡ್, ಬನಾರಸಿ ಲಂಗ-ದಾವಣಿ, ಇಂಡೋ-ವೆಸ್ಟರ್ನ್ ಲುಕ್ ನೀಡುವ ಲೆಹೆಂಗಾ ಸೈಲಿಯವು, ದೇಸಿ ಲುಕ್ ನೀಡುವ ರೇಷ್ಮೆ ಲಂಗ-ದಾವಣಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ನಿಶಾ.
ಟ್ರೆಡಿಷನಲ್ ಲಂಗ-ದಾವಣಿ ಲುಕ್
ಇನ್ನು, ಟ್ರೆಡಿಷನಲ್ ಲುಕ್ ನೀಡುವ ಬನಾರಸಿ, ಬ್ರೋಕೆಡ್ ಹಾಗೂ ರೇಷ್ಮೆಯ ಲಂಗ-ದಾವಣಿಯನ್ನು ಧರಿಸುವವರು ಆದಷ್ಟೂ ಟ್ರೆಡಿಷನಲ್ ಮೇಕಪ್ ಹಾಗೂ ಹೇರ್ಸ್ಟೈಲ್ ಮಾಡಬೇಕು. ಮೇಕೋವರ್ ಮಾಡರ್ನ್ ಲುಕ್ ನೀಡಬಾರದು. ನೋಡಲು ಹಬ್ಬದ ಲುಕ್ ನೀಡಬೇಕು. ಹಾಗಾಗಿ ಜ್ಯುವೆಲರಿಗಳನ್ನು ಕೂಡ ಟೆಂಪಲ್ ಹಾಗೂ ಆಂಟಿಕ್ ಜ್ಯುವೆಲರಿಗಳನ್ನು ಧರಿಸಬೇಕು. ಹಣೆಗೆ ಬಿಂದಿ ವದನದ ಕಳೆ ಹೆಚ್ಚಿಸಬಹುದು.
ಲೆಹೆಂಗಾ ಶೈಲಿಯ ಲಂಗ-ದಾವಣಿ ಲುಕ್
ಇತ್ತೀಚೆಗೆ ಟೀನೇಜ್ ಹುಡುಗಿಯರು ಗ್ಲಾಮರಸ್ ಆಗಿ ಕಾಣಿಸುವ ಇಂಡೋ-ವೆಸ್ಟರ್ನ್ ಲಂಗ-ದಾವಣಿಯನ್ನು ಆಯ್ಕೆ ಮಾಡಿ ಧರಿಸತೊಡಗಿದ್ದಾರೆ. ಈ ಡಿಸೈನರ್ವೇರ್ಗೆ ಟ್ರೆಡಿಷನಲ್ ಲುಕ್ ಬೇಕಾಗದು. ಕೊಂಚ ಮಾಡರ್ನ್ ಲುಕ್ ನೀಡುವ ಈ ಔಟ್ಫಿಟ್ಗೆ ಫ್ರೀ ಹೇರ್ಸ್ಟೈಲ್, ಸ್ಮೋಕಿ ಐ ಮೇಕಪ್ ಹಾಗೂ ಆಕ್ಸಿಡೈಸ್ಡ್ ಜ್ಯುವೆಲರಿಗಳನ್ನು ಧರಿಸಬಹುದು. ಲುಕ್ ಮತ್ತಷ್ಟು ಅತ್ಯಾಕರ್ಷಕವಾಗುವುದು.