Ugadi Shopping Tips 2026: ಯುಗಾದಿ ಎಥ್ನಿಕ್ವೇರ್ಸ್ ಶಾಪಿಂಗ್ಗೆ 5 ಸಿಂಪಲ್ ಟಿಪ್ಸ್
ಯುಗಾದಿ ಈ ಹಬ್ಬಕ್ಕೆ ಡಿಸೈನರ್ವೇರ್ ಅದರಲ್ಲೂ ಎಥ್ನಿಕ್ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಕುರಿತ ವಿವರ ಇಲ್ಲಿದೆ.
ಎಥ್ನಿಕ್ವೇರ್ಸ್ (ಚಿತ್ರಕೃಪೆ: ಮಿಂಚು) -
ಯುಗಾದಿ ಸಂಭ್ರಮದ ಹೊಸ ವರ್ಷದ ಹಬ್ಬ. ಈ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸುವವರೆಲ್ಲರೂ ಹೊಸ ಉಡುಗೆ-ತೊಡುಗೆಗಳನ್ನು ಕೊಂಡು ಧರಿಸುವುದು ಮೊದಲಿನಿಂದಲೂ ನಮ್ಮ ಆಚರಣೆಯಲ್ಲಿ ನಡೆದುಕೊಂಡು ಬಂದಿದೆ. ಈ ಹಬ್ಬಕ್ಕೆ ಡಿಸೈನರ್ವೇರ್ ಅದರಲ್ಲೂ ಎಥ್ನಿಕ್ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಯುಗಾದಿಗೆ ಟ್ರೆಂಡಿ ಉಡುಗೆಗಳ ಆಯ್ಕೆ ಮಾಡಿ
ಸದಾ ಒಂದೇ ಬಗೆಯ ಉಡುಗೆ-ತೊಡುಗೆಗಳನ್ನು ಧರಿಸುವ ಬದಲು ಈ ಬಾರಿಯ ಹಬ್ಬಕ್ಕೆ ಯಾವುದೆಲ್ಲಾ ಟ್ರೆಂಡಿಯಾಗಿದೆ? ಯಾವುದೆಲ್ಲಾ ಚಾಲ್ತಿಯಲ್ಲಿದೆ? ಎಂಬುದನ್ನು ಮೊದಲು ತಿಳಿದುಕೊಳ್ಳಿ. ಸೋಷಿಯಲ್ ಮೀಡಿಯಾದಲ್ಲಿ ಹಾಗೂ ನ್ಯೂಸ್ ಪೋರ್ಟಲ್ನಲ್ಲಿ ಟ್ರೆಂಡ್ ಬಗ್ಗೆ ತಿಳಿದುಕೊಳ್ಳಿ. ಶಾಪಿಂಗ್ ಮಾಡಿ.
ಲೇಡಿಸ್ವೇರ್ಗಳಲ್ಲಿ ಬಗೆಬಗೆಯ ಡಿಸೈನರ್ವೇರ್ಸ್
ಎಂದಿನಂತೆ ಲೇಡಿಸ್ವೇರ್ಗಳಲ್ಲಿ ವೈವಿಧ್ಯಮಯ ಡಿಸೈನರ್ವೇರ್ಸ್ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಈ ಸೀಸನ್ಗೆ ಹೊಂದುವಂತಹ ಶೈಲಿಯವನ್ನು ಆಯ್ಕೆ ಮಾಡಿ ಖರೀದಿಸಿ. ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಸೀರೆ, ಲೆಹೆಂಗಾ, ಸಲ್ವಾರ್ ಹೀಗೆ ಸಾಕಷ್ಟು ಅಪ್ಷನ್ ಲಭ್ಯ.
ಮೆನ್ಸ್ ಫ್ಯಾಷನ್ವೇರ್ಗಳ ಆಯ್ಕೆ ಸುಲಭ
ಮೆನ್ಸ್ ಎಥ್ನಿಕ್ವೇರ್ಸ್ನಲ್ಲಿ ಆಯ್ಕೆ ಸುಲಭ. ಯಾಕೆಂದರೇ ಅದೇ ಹೆಸರಲ್ಲಿ ಕೊಂಚ ಡಿಸೈನ್ ಬದಲಾವಣೆಯಲ್ಲಿ ದೊರಕುತ್ತವೆ. ಹಾಗಾಗಿ ಇತ್ತೀಚೆಗೆ ಟ್ರೆಂಡಿಯಾಗಿರುವ ಉಡುಗೆಗಳನ್ನು ಖರೀದಿಸಿ. ಸೌತ್ ಇಂಡಿಯನ್ ಲುಕ್ಗಾದಲ್ಲಿ ಪಂಚೆ-ಶಲ್ಯ, ನಾರ್ತ್ ಇಂಡಿಯನ್ ಲುಕ್ಗಾದಲ್ಲಿ ಶೆರ್ವಾನಿ, ಧೋತಿ-ಜುಬ್ಬಾ ಪೈಜಾಮ ಆಯ್ಕೆ ಮಾಡಿ, ಖರೀದಿಸಿ.
ಮಕ್ಕಳ ಔಟ್ಫಿಟ್ಸ್ ಆಯ್ಕೆ ಹೀಗಿರಲಿ
ಆದಷ್ಟೂ ಮಕ್ಕಳ ಔಟ್ಫಿಟ್ ಆಯ್ಕೆ ಮಾಡುವಾಗ ಕಂಫರ್ಟಬಲ್ವೇರ್ಸ್ಗೆ ಆದ್ಯತೆ ನೀಡಿ. ಯಾಕೆಂದರೇ, ತೀರಾ ಗ್ರ್ಯಾಂಡ್ ಆಗಿರುವ ಉಡುಪುಗಳು ಮಕ್ಕಳಿಗೆ ಕಿರಿಕಿರಿ ಉಂಟುಮಾಡಬಹುದು.
ಹಬ್ಬದ ಡಿಸ್ಕೌಂಟ್ಸ್-ರಿಯಾಯತಿ-ವಿನಾಯತಿ
ಫ್ಯಾಮಿಲಿ ಸಮೇತ ಶಾಪಿಂಗ್ ಮಾಡುವುದಾದಲ್ಲಿ ಅಥವಾ ಇಂತಿಷ್ಟು ಸಾವಿರ ರೂ. ಗಳ ಶಾಪಿಂಗ್ ಮಾಡುವುದಾದಲ್ಲಿ ಸಾಕಷ್ಟು ಕಡೆ ಡಿಸ್ಕೌಂಟ್ಸ್, ರಿಯಾಯತಿ-ವಿನಾಯಿತಿ ಆಫರ್ಗಳಿರುತ್ತವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ.