Zohran Mamdani: ರೆಟ್ರೋ ಸ್ಟೈಲ್ನಲ್ಲಿ ಪತ್ನಿ ಜೊತೆ ಖ್ಯಾತ ರಾಜಕೀಯ ಮುಖಂಡನ ಫೋಟೋಶೂಟ್!
ಸೆಲೆಬ್ರಿಟಿಗಳು ಮದುವೆಯಾದರೆ ಅವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುವುದು ಸಾಮಾನ್ಯ. ಅಂತೆಯೇ ಅಮೇರಿಕನ್ ರಾಜಕಾರಣಿ, ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರು ಇತ್ತೀಚೆಗಷ್ಟೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಉಗಾಂಡಾದಲ್ಲಿರುವ ತಮ್ಮ ಎಸ್ಟೇಟ್ನಲ್ಲಿ ಮೂರು ದಿನಗಳ ಕಾಲ ಈ ವಿವಾಹ ಕಾರ್ಯಕ್ರಮವನ್ನು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಆಯೋಜಿಸಿದ್ದರು. ಕಾರ್ಯ ಕ್ರಮಕ್ಕೆ ಮಿಲಿಟರಿ ಭದ್ರತೆ, ಫೋನ್-ಜಾಮಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಸದ್ಯ ಇವರ ವಿವಾಹದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.



ಮಮ್ದಾನಿ ಅವರು ಸಿರಿಯನ್ ಮೂಲದ ಕಲಾವಿದ ರಾಮ ದುವಾಜಿ ಅವರೊಂದಿಗೆ ಲವ್ ರಿಲೇಶನ್ ಶಿಪ್ ಇರುವ ಸುದ್ದಿ ಈ ಹಿಂದೆ ಹರಿದಾಡಿತ್ತು. ಮಮ್ದಾನಿ ಮತ್ತು ದುವಾಜಿ ಡೇಟಿಂಗ್ ಮಾಡುತ್ತಿದ್ದು ಆಸ್ಟೋರಿಯಾದಲ್ಲಿ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಗಾಸಿಪ್ ಹರಿದಾಡಿತ್ತು. ಇದರ ಬೆನ್ನಲ್ಲೆ 2024ನೇ ಡಿಸೆಂಬರ್ನಲ್ಲಿ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಗಣ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಎರಡು ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಎಸ್ಟೇಟ್ ನಲ್ಲಿ ಹಚ್ಚ ಹಸಿರಿನ ವಿಕ್ಟೋರಿಯಾ ಸರೋವರದಲ್ಲಿ ಮಮ್ದಾನಿ ಮತ್ತು ರಾಮ ದುವಾಜಿ ಅವರು ವಿವಾಹವಾಗಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಅವರ ಕೆಲವು ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇವರಿಬ್ಬರು ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿ ಕೊಂಡಿದ್ದರು. ಟ್ರೈನ್ ಒಂದರಲ್ಲಿ ಪ್ಯಾಸೆಂಜರ್ ನಡುವೆಯೇ ಮಮ್ದಾನಿ ಮತ್ತು ರಾಮ ದುವಾಜಿ ಅವರು ರೊಮ್ಯಾಂಟಿಕ್ ಆಗಿ ನಿಂತಿರುವುದನ್ನು ಕಾಣಬಹುದು.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ಮಮ್ದಾನಿ ಮತ್ತು ರಾಮ ದುವಾಜಿ ಅವರು ಸ್ಟ್ರಿಟ್ ಸೈಡ್ ನಲ್ಲಿ ರೊಮ್ಯಾಂಟಿಕ್ ಲುಕ್ ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೊ ಇದಾಗಿದ್ದು ಹಳೆ ಕಾಲದ ರೆಟ್ರೋ ಸ್ಟೈಲ್ ನಲ್ಲಿ ಇಬ್ಬರು ಕಂಗೊಳಿಸಿದ್ದಾರೆ.

ಇನ್ನೊಂದು ಫೋಟೊದಲ್ಲಿ ಮಮ್ದಾನಿ ಮತ್ತು ರಾಮ ದುವಾಜಿ ಅವರು ಪ್ಯಾಲೆಸ್ ಫೋಟೊ ಬ್ಯಾಕ್ ಗ್ರೌಂಡ್ ಮುಂದೆ ಫೋಟೊ ತೆಗೆಸಿಕೊಂಡಿದ್ದಾರೆ. ಮಮ್ದಾನಿ ಅವರು ಮಂಡಿಯೂರಿ ದುವಾಜಿ ಅವರಿಗೆ ಪ್ರಪೋಸ್ ಮಾಡುತ್ತಿದ್ದು ಇವರಿಬ್ಬರ ಲುಕ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ಮಮ್ದಾನಿ ಮತ್ತು ರಾಮ ದುವಾಜಿ ಅವರು ಕ್ಯೂಟ್ ಲುಕ್ ನಿಂದ ಗಮನ ಸೆಳೆದಿದ್ದಾರೆ. ಇಬ್ಬರು ಕೂಡ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಕ್ಯಾಂಡಿಡ್ ಫೋಟೊಗೆ ಪೋಸ್ ನೀಡಿದ್ದಾರೆ. ರಾಮ ದುವಾಜಿ ಅವರು ವೈಟ್ ಕಲರ್ ವೆಡ್ಡಿಂಗ್ ಸ್ಕರ್ಟ್ ಮೇಲೆ ಬ್ಲ್ಯಾಕ್ ಕಲರ್ ಓವರ್ ಲಾಂಗ್ ಜಾಕೆಟ್ ತೊಟ್ಟಿದ್ದು ಹೆಚ್ಚು ಗ್ಲಾಮರಸ್ ಆಗಿ ಕಂಡಿದ್ದಾರೆ.