BJP controversy: ಮುಸ್ಲಿಮರ ಮತ ಅಗತ್ಯವಿಲ್ಲ ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಸಂಸದರೊಬ್ಬರು ಈಗ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಬಿಜೆಪಿಯ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಅವರು ಮುಸ್ಲಿಮರನ್ನು ನಮಕ್ ಹರಾಮ್‌ಗಳು ಎಂದು ಕರೆದಿದ್ದಾರೆ.

-

ಪಾಟ್ನಾ: ವಿಧಾನಸಭಾ ಚುನಾವಣೆಯ (Bihar Assembly election) ಕಣ ರಂಗೇರುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ನಾಲಗೆಯನ್ನು ಹರಿಯಬಿಟ್ಟು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದ ಹಿರಿಯ ನಾಯಕರು ಮುಜುಗರ ಪಡುವಂತಾಗಿದೆ. ಇದೀಗ ಮುಸ್ಲಿಮರ (Muslim) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಸಂಸದರೊಬ್ಬರು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಬಿಜೆಪಿಯ (BJP controversy) ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Union Minister Giriraj Singh) ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಅವರು ಮುಸ್ಲಿಮರನ್ನು ನಮಕ್ ಹರಾಮ್‌ಗಳು ಎಂದು ಕರೆದಿದ್ದಾರೆ.
ಮುಸ್ಲಿಮರ ಕುರಿತಾಗಿ ಗಿರಿರಾಜ್ ಸಿಂಗ್ ಅವರ 'ನಮಕ್ ಹರಾಮ್' ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆ:
मौलवी साहब, हमें नमक हरामों का वोट नहीं चाहिए: गिरिराज सिंह, केंद्रीय मंत्री pic.twitter.com/64d58MU8V3
— Nidhi Shree (@NidhiShreeJha) October 19, 2025
ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಶನಿವಾರ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೇಗುಸರಾಯ್‌ನ ಬಿಜೆಪಿ ಸಂಸದ ಗಿರಿರಾಜ್ ಸಿಂಗ್, ನಮಕ್ ಹರಾಮ್‌ಗಳ ಮತ ನಮಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಒಮ್ಮೆ ನಾನು ಮೌಲ್ವಿ ಅವರನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿದ್ದೀರಾ ಎಂದು ಕೇಳಿದಾಗ ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಅಂತಹ ಕಾರ್ಡ್‌ಗಳನ್ನು ಹಿಂದೂ- ಮುಸ್ಲಿಂ ಆಧಾರದ ಮೇಲೆ ವಿತರಿಸಲಾಗಿದೆಯೇ ಎಂದು ನಾನು ಕೇಳಿದೆ. ಅದಕ್ಕೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು ಎಂದರು.
ನೀವು ನನಗೆ ಮತ ಹಾಕಿದ್ದೀರಾ ಎಂದು ನಾನು ಕೇಳಿದಾಗ, ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಆದರೆ ನಾನು ಅವರನ್ನು ಖುದಾ ಮೇಲೆ ಪ್ರಮಾಣ ಮಾಡುವಂತೆ ಕೇಳಿದಾಗ ಅವರು ಇಲ್ಲ ಎಂದು ಹೇಳಿದರು. ಮುಸ್ಲಿಮರು ಎಲ್ಲ ಕೇಂದ್ರ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ ನಮಗೆ ಮತ ಹಾಕಬೇಡಿ... ಅಂತಹ ಜನರನ್ನು 'ನಮಕ್ ಹರಾಮ್' ಎಂದು ಕರೆಯಲಾಗುತ್ತದೆ. ನಾನು ಅಂತಹ ನಮಕ್ ಹರಾಮ್ ಮತಗಳನ್ನು ಬಯಸುವುದಿಲ್ಲ ಎಂದು ತಿಳಿಸಿದರು.
ಬಿಹಾರದ ಒಟ್ಟಾರೆ ಅಭಿವೃದ್ಧಿಗಾಗಿ ಎನ್‌ಡಿಎ ಸರ್ಕಾರವು ಬಹಳಷ್ಟು ಮೂಲಸೌಕರ್ಯ ಕಾರ್ಯಗಳನ್ನು ಮಾಡಿದೆ ಎಂದ ಸಿಂಗ್, ಬಿಹಾರದಲ್ಲಿ ರಸ್ತೆಗಳನ್ನು ಎನ್‌ಡಿಎ ನಾಯಕರು ಮತ್ತು ಕಾರ್ಯಕರ್ತರಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ನಿರ್ಮಿಸಲಾಗಿದೆ. ಬಿಹಾರ ಈಗ ಬದಲಾಗಿದೆ. ಎನ್‌ಡಿಎ ಸರ್ಕಾರ ಸಮಾಜದ ಪ್ರತಿಯೊಂದು ವರ್ಗಕ್ಕೂ ಕೆಲಸ ಮಾಡುತ್ತದೆ. ಆದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು.
ಇದನ್ನೂ ಓದಿ: ದೀಪಾವಳಿಯಂದು ದೀಪ ಹಚ್ಚೋದ್ಯಾಕೆ? ಹಿಂದುಗಳ ಆಚರಣೆ ವಿರುದ್ಧ ನಾಲಗೆ ಹರಿಯಬಿಟ್ಟ ಅಖಿಲೇಶ್ ಯಾದವ್; ವಿಎಚ್‌ಪಿ ತಿರುಗೇಟು
ಗಿರಿರಾಜ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ರಾಜ್ಯ ಘಟಕದ ವಕ್ತಾರ ಮೃತ್ಯುಂಜಯ್ ತಿವಾರಿ, ಬಿಜೆಪಿ ನಾಯಕರು ಹಿಂದೂ- ಮುಸ್ಲಿಂ ಹೊರತುಪಡಿಸಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗಲೆಲ್ಲ ಅವರು ಹಿಂದೂ-ಮುಸ್ಲಿಂ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುತ್ತಾರೆ ಮತ್ತು ಜನರ ಗಮನವನ್ನು ಪ್ರಮುಖ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಾರೆ ಎಂದು ದೂರಿದ್ದಾರೆ.