ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅನೈತಿಕ ಸಂಬಂಧಕ್ಕೆ ಗರ್ಭಿಣಿ ಸೇರಿ ಇಬ್ಬರು ಬಲಿ; ಇದು ಊಹೆಗೂ ಮೀರಿದ ಟ್ರಯಾಂಗಲ್‌ ಲವ್‌ ಸ್ಟೋರಿ

ಅನೈತಿಕ ಸಂಬಂಧಕ್ಕೆ ಗರ್ಭಿಣಿ ಸೇರಿ ಇಬ್ಬರು ಅಸುನೀಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪರಪುರುಷನ ಜತೆ ಅನೈತಿಕ ಸಂಬಂಧ ಬೆಳೆಸಿದ್ದ ಮಹಿಳೆಯಿಂದ ಇಷ್ಟೆಲ್ಲ ರಾದ್ಧಾಂತವಾಗಿದೆ.

ಅನೈತಿಕ ಸಂಬಂಧಕ್ಕೆ ಗರ್ಭಿಣಿ ಸೇರಿ ಇಬ್ಬರು ಬಲಿ

ಎಐ ಚಿತ್ರ -

Ramesh B Ramesh B Oct 19, 2025 8:25 PM

ದೆಹಲಿ, ಅ. 19: ಅನೈತಿಕ ಸಂಬಂಧ ಯಾವತ್ತಿದ್ದರೂ ಅಪಾಯಕಾರಿ. ಈ ವಿಚಾರ ಪದೆ ಪದೇ ಸಾಬೀತಾಗುತ್ತಲೇ ಇದೆ. ತಪ್ಪು ಎಂದು ಗೊತ್ತಿದ್ದರೂ ಪರ ಪುರುಷ/ಮಹಿಳೆಯ ವ್ಯಾಮೋಹಕ್ಕೆ ಒಳಗಾಗುವವರ ಸಂಖ್ಯೆ ಕಡಿಮೆಯೇನಿಲ್ಲ (Crime News). ಅಂತಹದ್ದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಗರ್ಭಿಣಿ ಸೇರಿ ಇಬ್ಬರು ಅಸುನೀಗಿದರೆ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪರಪುರುಷನ ಜತೆ ಅನೈತಿಕ ಸಂಬಂಧ ಬೆಳೆಸಿದ್ದ ಮಹಿಳೆಯಿಂದ ಇಷ್ಟೆಲ್ಲ ರಾದ್ಧಾಂತವಾಗಿದೆ.

ಮಧ್ಯ ದೆಹಲಿಯ ರಾಮ ನಗರದಲ್ಲಿ ಗರ್ಭಿಣಿಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿದ್ದು, ಆತನನ್ನು ಆಕೆಯ ಪತಿ ಕೊಂದಿದ್ದಾನೆ. ಘಟನೆಯಲ್ಲಿ ಪತಿಗೆ ಗಂಭೀರ ಗಾಯವಾಗಿದೆ. ಮೃತರನ್ನು ಶಾಲಿನಿ (22) ಮತ್ತು ಆಕೆಯ ಪ್ರಿಯಕರ, ರೌಡಿ ಶೀಟರ್‌ ಆಶು ಆಲಿಯಾಸ್‌ ಶೈಲೇಂದ್ರ (34) ಎಂದು ಗುರುತಿಸಲಾಗಿದೆ. ಶಾಲಿನಿ ಪತಿ ಆಕಾಶ್‌ (23) ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.



ಈ ಸುದ್ದಿಯನ್ನೂ ಓದಿ: ಅತ್ತೆಯೊಂದಿಗೆ ಅನೈತಿಕ ಸಂಬಂಧ: ವಿಡಿಯೊ ವೈರಲ್‌ ಮಾಡುವ ಬೆದರಿಕೆ ಹಾಕಿದವನ ಕಥೆ ಮುಗಿಸಿದ ಕಿಲಾಡಿ ಅಮ್ಮ-ಮಗಳು

ಘಟನೆ ಹಿನ್ನೆಲೆ

ಕೆಲವು ವರ್ಷಗಳ ಹಿಂದೆ ಆಟೋ ಚಾಲಕ ಆಕಾಶ್‌ ಜತೆ ಶಾಲಿನಿ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ ಬಳಿಕ ಶಾಲಿನಿ ಸ್ಥಳೀಯ ಗೂಂಡಾ ಆಶು ಜತೆ ಅನೈತಿಕ ಸಂಬಂಧ ಬೆಳೆಸಿದಳು. ಜತೆಗೆ ಗರ್ಭಿಣಿಯೂ ಆದಳು. ಕೆಲವು ದಿನಗಳಿಂದ ಮತ್ತೆ ಪತಿಯ ಜತೆಗೆ ವಾಸಿಸಲು ಆರಂಭಿಸಿದಳು. ಇದರಿಂದ ಕುಪಿತನಾದ ಆಶು ಆಕೆ ಗರ್ಭಿಣಿ ಎಂಬುದನ್ನೂ ನೋಡದೆ ಕೊಲೆ ಮಾಡಿದ್ದಾನೆ.

ಶನಿವಾರ (ಅ. 18) ಆಕಾಶ್‌ ಮತ್ತು ಶಾಲಿನಿ ಕಾರ್ಯ ನಿಮಿತ್ತ ಕುತುಬ್‌ ರೋಡ್‌ಗೆ ತೆರಳಿದ್ದರು. ಇವರನ್ನು ಹಿಂಬಾಲಿಸಿಕೊಂಡು ಬಂದ ಆಶು ಚಾಕುವಿನಿಂದ ದಾಳಿ ನಡೆಸಿದ. ಮೊದಲು ಆಕಾಶ್‌ಗೆ ಚುಚ್ಚಿ ಬಳಿಕ ಆಟೋದಲ್ಲಿದ್ದ ಶಾಲಿನಿ ಮೇಲೂ ದಾಳಿ ಮಾಡಿದ. ಈ ವೇಳೆ ಪತ್ನಿಯನ್ನು ಕಾಪಾಡಲು ಆಕಾಶ್‌ ಧಾವಿಸಿದ. ಆಶು ಕೈಲಿದ್ದ ಚಾಕು ತೆಗೆದು ಆತನಿಗೇ ಚುಚ್ಚಿದ.

ಹೀಗೆ ಮೂವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಶಾಲಿನಿ ಸಹೋದರ ರೋಹಿತ್‌ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಆಸ್ಪತ್ರೆಯಲ್ಲಿ ಶಾಲಿನಿ ಮತ್ತು ಆಶು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಗಂಭೀರ ಗಾಯಗೊಂಡಿರುವ ಆಕಾಶ್‌ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಶಾಲಿನಿ ತಾಯಿ ಹೇಳಿದ್ದೇನು?

ವಿಚಿತ್ರ ಎಂದರೆ ಶಾಲಿನಿ ಈಗ ಗರ್ಭ ಧರಿಸಿರುವುದು ತನ್ನಿಂದ ಎಂದು ಆಶು ಮತ್ತು ಆಕಾಶ್‌ ಇಬ್ಬರೂ ಹೇಳಿಕೊಂಡಿದ್ದಾರೆ. ಇನ್ನು ಘಟನೆ ಬಗ್ಗೆ ಶಾಲಿನಿ ತಾಯಿ ಶೈಲಾ ಮಾತನಾಡಿ, ʼʼಆಕಾಶ್‌ ಮತ್ತು ಶಾಲಿನಿ ಮಧ್ಯೆ ಕೆಲವು ವರ್ಷಗಳ ಹಿಂದೆ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಆಕೆ ಆಶು ಕಡೆ ಆಕರ್ಷಿತಳಾಗಿದ್ದಳು. ಕೆಲವು ಸಮಯ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅದಾದ ಬಳಿಕ ಆಕಾಶ್‌ ಮತ್ತು ಶಾಲಿನಿ ಒಂದಾಗಿದ್ದರು. ಶಾಲಿನಿ ಬಿಟ್ಟು ಹೋಗಿದ್ದರಿಂದ ಕುಪಿತನಾಗಿ ಆಶು ದಾಳಿ ನಡೆಸಿದ್ದ.