ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BJP MP Ravi Kishan: ಬಿಹಾರ ಚುನಾವಣಾ ಪ್ರಚಾರ- ಬಿಜೆಪಿ ಸಂಸದ ರವಿ ಕಿಶನ್‌ಗೆ ಕೊಲೆ ಬೆದರಿಕೆ

Bihar election campaign: ಬಿಹಾರ ಚುನಾವಣಾ ಪ್ರಚಾರ ಭಾಷಣದಲ್ಲಿ ಭಾಗಿಯಾಗಿರುವ ಬಿಜೆಪಿ ಸಂಸದ ರವಿ ಕಿಶನ್ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಅಪರಿಚಿತನೊಬ್ಬ ಕರೆ ಮಾಡಿ ತಮಗೆ ಕೊಲೆ ಬೆದರಿಕೆ ಹಾಕಿದ್ದಾನೆ, ತಮ್ಮ ತಾಯಿಯ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಮತ್ತು ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾನೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ರವಿ ಕಿಶನ್ ಅವರು ಶುಕ್ರವಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸಂಸದನಿಗೆ ಕೊಲೆ ಬೆದರಿಕೆ

-

ಪಟನಾ: ಚುನಾವಣಾ ಪ್ರಚಾರ (Bihar polls campaign) ಭಾಷಣ ಮಾಡಿರುವುದಕ್ಕೆ ಬಿಜೆಪಿಯ (BJP) ಗೋರಖ್‌ಪುರದ ಸಂಸದನಿಗೆ (Gorakhpur MP) ಕೊಲೆ ಬೆದರಿಕೆ (death threat) ಹಾಕಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಬಿಹಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವುದಕ್ಕೆ ಬಿಜೆಪಿ ಸಂಸದ ರವಿ ಕಿಶನ್ (BJP MP Ravi Kishan) ಅವರಿಗೆ ಅಪರಿಚಿತನೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅವರ ತಾಯಿ ಮತ್ತು ಶ್ರೀರಾಮನಿಗೆ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾನೆ. ಈ ಕುರಿತು ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಸಂಸದ ರವಿ ಕಿಶನ್ ಅವರು ಶುಕ್ರವಾರ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕೊಲೆ ಬೆದರಿಕೆ ಕರೆ ಹಾಕಿದ್ದಾರೆ. ತಮ್ಮ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿನಾಡಿನಲ್ಲಿ ಕನ್ನಡದ ದುಸ್ಥಿತಿ: ಭಾಷಾ ಬೆಳವಣಿಗೆಗೆ ಸವಾಲು

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಟ, ರಾಜಕಾರಣಿ ರವಿ ಕಿಶನ್, ಅಪರಿಚಿತನಿಂದ ಬಂದಿರುವ ಬೆದರಿಕೆಯು ತಮ್ಮ ಘನತೆಯ ಮೇಲೆ ಮಾತ್ರವಲ್ಲ ನಂಬಿಕೆ ಮತ್ತು ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಮೇಲೆ ನಡೆಸಿದ ದಾಳಿಯಾಗಿದೆ. ಇತ್ತೀಚೆಗೆ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ನಿಂದನೀಯ ಭಾಷೆಯನ್ನು ಬಳಸಿ ಮಾತನಾಡಿದ್ದಾನೆ. ನನ್ನ ತಾಯಿ ಮತ್ತು ಶ್ರೀರಾಮನನ್ನು ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಾನೆ. ಇದು ನನ್ನ ವೈಯಕ್ತಿಕ ಘನತೆಯ ಮೇಲೆ ಮಾತ್ರವಲ್ಲ ನಮ್ಮ ನಂಬಿಕೆ ಮತ್ತು ಭಾರತೀಯ ಸಂಸ್ಕೃತಿಯ ಮೂಲ ಅಂಶಗಳ ಮೇಲಿನ ನೇರ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಇದು ದ್ವೇಷ ಮತ್ತು ಅರಾಜಕತೆಯನ್ನು ಹರಡುವ ಪ್ರಯತ್ನ ಎಂದಿರುವ ರವಿ ಕಿಶನ್, ಇದನ್ನು ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೈದ್ಧಾಂತಿಕ ಸಂಕಲ್ಪದಿಂದ ಎದುರಿಸಬೇಕು. ಬೆದರಿಕೆಗಳನ್ನು ನನ್ನ ಕೆಲಸ ಮತ್ತು ನಂಬಿಕೆಗಳನ್ನು ತಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಯಾಣ ಕಷ್ಟಕರವಾಗಿದೆ. ಆದರೆ ತಾವು ಪರಿಣಾಮಗಳನ್ನು ಲೆಕ್ಕಿಸದೆ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧರಾಗಿರುತ್ತೇವೆ. ಸಾರ್ವಜನಿಕ ಸೇವೆ, ರಾಷ್ಟ್ರೀಯತೆ ಮತ್ತು ಧರ್ಮದ ಹಾದಿಯಲ್ಲಿ ನಡೆಯುವುದು ನನಗೆ ರಾಜಕೀಯ ತಂತ್ರವಲ್ಲ. ಅದು ಜೀವನದ ಸಂಕಲ್ಪ. ನಾನು ಎಷ್ಟೇ ಬೆಲೆ ತೆರಬೇಕಾಗಿ ಬಂದರೂ ಯಾವುದೇ ಪರಿಸ್ಥಿತಿಯಲ್ಲಿಯೂ ನಾನು ಈ ಹಾದಿಯಲ್ಲಿ ದೃಢವಾಗಿ ಉಳಿಯುತ್ತೇನೆ. ಈ ಮಾರ್ಗವು ಕಷ್ಟಕರವಾಗಿದೆ. ಆದರೆ ಇದರಲ್ಲಿಯೇ ನಾನು ನನ್ನ ಜೀವನವನ್ನು ಅರ್ಥಪೂರ್ಣವೆಂದು ನೋಡುತ್ತೇನೆ. ನನಗೆ ಈ ಹೋರಾಟವು ಸ್ವಾಭಿಮಾನ, ನಂಬಿಕೆ ಮತ್ತು ಕರ್ತವ್ಯವನ್ನು ಕಾಪಾಡುವ ಸಂಕೇತವಾಗಿದೆ ಮತ್ತು ಕೊನೆಯವರೆಗೂ ನಾನು ದೃಢನಿಶ್ಚಯ ಮತ್ತು ಶ್ರದ್ಧೆಯಿಂದ ಇರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK 12: ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್‌ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ

ಸಂಸದರಿಗೆ ಬೆದರಿಕೆ ಹಾಕಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೋರಖ್‌ಪುರ ನಗರ ಎಸ್‌ಪಿ ಅಭಿಹ್ನವ್ ತ್ಯಾಗಿ, ಬಿಹಾರ ಚುನಾವಣಾ ಪ್ರಚಾರದ ಸಮಯದಲ್ಲಿ ಸಂಸದರು ಭಾಷಣ ಮಾಡಿರುವುದಕ್ಕೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಸಂಸದರ ಖಾಸಗಿ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ ರಾಮಗಢ ತಾಲ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023 ರ ಸೆಕ್ಷನ್ 302, 351(3), ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.