ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ.1ರಂದು 'hmt ಕನ್ನಡಿಗ' ಕೈಗಡಿಯಾರಗಳ ಲೋಕಾರ್ಪಣೆ; ಕನ್ನಡ ಹೋರಾಟಗಾರರಿಗೆ ಆಹ್ವಾನ ಕೊಟ್ಟ ಎಚ್‌ಡಿಕೆ

HD Kumaraswamy: ಬೆಂಗಳೂರಿನಲ್ಲಿ ನ.1ರಂದು ಭಾನುವಾರ ಹಮ್ಮಿಕೊಳ್ಳಲಾಗಿರುವ 'hmt ಕನ್ನಡಿಗ' ಕೈಗಡಿಯಾರಗಳ ಲೋಕಾರ್ಪಣೆಗೆ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸುವ ಉದ್ದೇಶದಿಂದ ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಿಂದಲೇ ಕನ್ನಡಪರ ಹೋರಾಟಗಾರ ಸಭೆಯನ್ನು ಉದ್ದೇಶಿಸಿ ಆನ್‌ಲೈನ್ ವೇದಿಕೆಯ ಮೂಲಕ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನೀವೆಲ್ಲರೂ ಒಂದಾಗಬೇಕು ಎಂಬುದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ.

ನವೆಂಬರ್‌ 1ರಂದು ʼhmt ಕನ್ನಡಿಗʼ ಕೈಗಡಿಯಾರಗಳ ಲೋಕಾರ್ಪಣೆ

-

Profile
Siddalinga Swamy Oct 31, 2026 7:51 PM

ನವದೆಹಲಿ, ಅ.31: ಹರಿದು ಹಂಚಿಹೋಗಿರುವ ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ನಾಡಿನ ಹಿತಕ್ಕಾಗಿ ಒಂದು ವೇದಿಕೆಯಡಿ ಬಂದು ಒಂದಾಗಬೇಕು, ನಿಮ್ಮ ದನಿ ಒಂದೇ ಆಗಿರಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಲಹೆ ನೀಡಿದರು. ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿರುವ 'hmt ಕನ್ನಡಿಗ' ಕೈಗಡಿಯಾರಗಳ (HMT Kannadiga watches) ಲೋಕಾರ್ಪಣೆಗೆ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸುವ ಉದ್ದೇಶದಿಂದ ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಿಂದಲೇ ಕನ್ನಡಪರ ಹೋರಾಟಗಾರ ಸಭೆಯನ್ನು ಉದ್ದೇಶಿಸಿ ಆನ್‌ಲೈನ್ ವೇದಿಕೆಯ ಮೂಲಕ ಮಾತನಾಡಿದ ಸಚಿವರು; ನೀವೆಲ್ಲರೂ ಒಂದಾಗಬೇಕು ಎಂಬುದು ನನ್ನ ಕಳಕಳಿಯ ಮನವಿ ಎಂದರು.

ಕರ್ನಾಟಕ ಸಮೃದ್ಧ ರಾಜ್ಯದ ತೆರಿಗೆ ಹಣ ಪೋಲಾಗುತ್ತಿದೆ. ನಮ್ಮ ಸಂಪತ್ತು ದುರುಪಯೋಗ ಆಗುತ್ತಿದೆ. ಅದನ್ನು ನಾವು ತಡೆಯಬೇಕು. ಕನ್ನಡ ರಕ್ಷಣೆಯಲ್ಲಿ ನಿಮ್ಮ ಪಾತ್ರ ದೊಡ್ಡದು. ನೀವೆಲ್ಲ ಹರಿದು ಹಂಚಿ ಹೋಗಿದ್ದೀರಿ. ನೀವು ಒಂದಾದರೆ ದೊಡ್ಡ ಶಕ್ತಿ ಆಗುತ್ತದೆ. ಒಂದಾಗುವ ಸಂಕಲ್ಪ ಮಾಡಿ ಒಂದು ಧ್ವನಿಯಾಗಬೇಕು. ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಒಂದಾಗುವ ಪಣ ತೊಡಬೇಕು. ನಿಮ್ಮ ನೋವುಗಳಿಗೆ ಸ್ಪಂದಿಸುತ್ತೇನೆ. ನೀವು ಹೆದರಬೇಡಿ, ನಿಮ್ಮೊಂದಿಗೆ ನಾನು ಇದ್ದೇನೆ ಎಂದರು.

ನಾಳೆ ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ತಪ್ಪದೇ ಭಾಗಿಯಾಗಬೇಕು ಎಂದು ಕೋರುತ್ತೇನೆ. ರಾಜ್ಯೋತ್ಸವದಲ್ಲಿ ನಾವೆಲ್ಲರೂ ಭಾಗಿಯಾಗೋಣ. ತಾವೆಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಲ್ಲಾ ಮುಖಂಡರನ್ನು ಸಚಿವರು ಆಹ್ವಾನಿಸಿದರು.

25 ಸಂಘಟನೆಗಳ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತಿ ಇದ್ದ ಈ ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ ಸಚಿವರು, ಕೆಲ ಸೂಕ್ಷ್ಮವಾದ ವಿಚಾರಗಳು ಇದ್ದಾವೆ. ನನ್ನದೇ ಆದ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ನಾಡಿನ ಸ್ವಾಭಿಮಾನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ನನ್ನ ಇಲಾಖೆಯಿಂದ hmt ಕನ್ನಡಿಗ ಕೈಗಡಿಯಾರಗಳ ನಾಳೆ ಲೋಕಾರ್ಪಣೆ ಮಾಡುತ್ತಿದ್ದೇವೆ. ಒಂದು ಕಾಲದಲ್ಲಿ ಈ ಕಾರ್ಖಾನೆ ಚೆನ್ನಾಗಿತ್ತು. ಅದಕ್ಕೆ ಮರಳಿ ವೈಭವ ತಂದುಕೊಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇನೆ ಎಂದರು.‌

ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಪಡೆದ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

hmt ಕನ್ನಡಿಗ ವಾಚುಗಳನ್ನು ನಾಳೆ ನಾವು ನಿಮ್ಮ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡುತ್ತಿದ್ದೇವೆ. ನಿಮ್ಮ ಸಹಕಾರ ಇರಲಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೋರಿದರು.