ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಬಿಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸಲು ಶ್ರಮಿಸೋಣ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಕರೆ

BY Vijayendra: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ, ರಾಜ್ಯದ ಜನತೆಯ ಪರವಾಗಿ ಶುಭ ಕೋರಿದರು. ಈ ವೇಳೆ ಜಿಬಿಎ ಚುನಾವಣೆ ಬಗ್ಗೆ ಅವರು ಮಾತನಾಡಿದ್ದಾರೆ.

ಜಿಬಿಎ ಚುನಾವಣೆಯಲ್ಲೂ ಗೆಲುವಿಗಾಗಿ ಶ್ರಮಿಸೋಣ: ವಿಜಯೇಂದ್ರ

ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶುಭ ಕೋರಿದ ಬಿ.ವೈ. ವಿಜಯೇಂದ್ರ. -

Profile
Siddalinga Swamy Mar 18, 2026 7:46 PM

ಬೆಂಗಳೂರು, ಮಾ.18: ಮುಂದೆಯೂ ಬಿಜೆಪಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ರಾಜ್ಯದ ಜನರಿಗೂ ಒಳಿತಾಗಬೇಕು, ಪಕ್ಷದ ಕಾರ್ಯಕರ್ತರಿಗೂ ಒಳಿತಾಗಬೇಕೆಂಬ ಇಚ್ಛಾಶಕ್ತಿ ಇಟ್ಟುಕೊಂಡವರು ಡಿ.ವಿ. ಸದಾನಂದಗೌಡರು (DV Sadananda Gowda) ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ರಾಜ್ಯ ಬಿಜೆಪಿ, ರಾಜ್ಯದ ಜನತೆಯ ಪರವಾಗಿ ಶುಭ ಕೋರಿದರು. ಪಕ್ಷದ ಅಭಿಮಾನಿಗಳು, ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಇದ್ದೀರಿ. ಡಿ.ವಿ. ಸದಾನಂದಗೌಡರು ನಮ್ಮೆಲ್ಲರಿಗೂ ಪ್ರೇರಣೆ ಎಂದು ತಿಳಿಸಿದರು.

ʼವಿಜಯೇಂದ್ರ ಅವರೇ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬರುವ ದಿನಗಳಲ್ಲಿ ಬಿಜೆಪಿ ವಿಜಯಪತಾಕೆ ಮತ್ತೊಮ್ಮೆ ರಾಜ್ಯದಲ್ಲಿ ಹಾರಬೇಕು. ಇದಕ್ಕಾಗಿ ನಾವು- ನೀವು ಸೇರಿ ಸಂಘಟನೆಯನ್ನು ಬಲಪಡಿಸೋಣ, ಒಟ್ಟಿಗೆ ಪ್ರವಾಸ ಮಾಡೋಣʼ ಎಂಬ ಮಾತುಗಳನ್ನು ಸದಾನಂದಗೌಡರು ಹೇಳಿದ್ದಾರೆ ಎಂದು ಅವರು ನೆನಪಿಸಿಕೊಂಡರು.‌

ಸಭಾಧ್ಯಕ್ಷರು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ: ವಿಜಯೇಂದ್ರ

ಡಿ.ವಿ. ಸದಾನಂದಗೌಡರ ಮಾರ್ಗದರ್ಶನ- ಆಶೀರ್ವಾದದೊಂದಿಗೆ ನಾವೆಲ್ಲರೂ ಒಟ್ಟಾಗಿ, ಒಂದಾಗಿ ಪಕ್ಷವನ್ನು ಬಲಪಡಿಸಲು ಹೆಜ್ಜೆಯನ್ನು ಮುಂದೆ ಇಡೋಣ. ಮುಂಬರುವ ಜಿ.ಬಿ.ಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸುವ ನಿಟ್ಟಿನಲ್ಲಿ ಶ್ರಮ ಹಾಕೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಶಾಸಕರು, ಪ್ರಮುಖರು ಉಪಸ್ಥಿತರಿದ್ದರು.