Pralhad Joshi: ಅವೈಜ್ಞಾನಿಕ ಗ್ಯಾರೆಂಟಿಗಳಿಂದ ರಾಜ್ಯದ ಸಾಲವೀಗ ಬರೋಬ್ಬರಿ ₹63,000 ಕೋಟಿಗೆ ಏರಿಕೆ: ಜೋಶಿ ಆರೋಪ
Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯದ ಸಾಲವೀಗ ಬರೋಬ್ಬರಿ ₹63,000 ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಕಡಿತವಾಗಿದ್ದಲ್ಲದೆ, ಅಭಿವೃದ್ಧಿ ಸಹ ಕುಂಠಿತವಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯದ ಆದಾಯವನ್ನೇ ನುಂಗಿಬಿಟ್ಟಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಾರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ CAG ವರದಿಯೇ ಈ ವಾಸ್ತವವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್‌ನ ಐದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳು ರಾಜ್ಯದ ಆದಾಯ ವೆಚ್ಚದ ಶೇ.15 ರಷ್ಟನ್ನು ವ್ಯಯಿಸಿರುವುದನ್ನು ಉಲ್ಲೇಖಿಸಿದೆ ಎಂದಿದ್ದಾರೆ.
CAG ವರದಿ ಪ್ರಕಾರ ಅಧಿಕ ಆದಾಯದ ರಾಜ್ಯವಾಗಿದ್ದ ಕರ್ನಾಟಕ ಈಗ ಅವೈಜ್ಞಾನಿಕ ಗ್ಯಾರೆಂಟಿಗಳಿಂದಾಗಿ ಆದಾಯದಲ್ಲಿ ಖೋತಾ ಕಂಡಿದ್ದು, ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ದೂರಿರುವ ಸಚಿವರು, ರಾಜ್ಯ ಇನ್ನು ಆರ್ಥಿಕತೆಯಲ್ಲಿ ಸ್ಥಿರತೆ ಕಾಣಲು ಹಲವು ವರ್ಷಗಳೇ ಬೇಕಾಗಲಿದೆ ಎಂದು ಹೇಳಿದ್ದಾರೆ. 2023-24ನೇ ಹಣಕಾಸು ವರ್ಷದಲ್ಲಿ ₹46,623 ಕೋಟಿಗಳಿಂದ ₹65,522 ಕೋಟಿಗಳಿಗೆ ಹಣಕಾಸಿನ ಕೊರತೆ ಜತೆಗೆ ₹9,271 ಕೋಟಿ ಆದಾಯ ಕೊರತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸಾಲ ₹63,000 ಕೋಟಿಗೆ ಏರಿಕೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯದ ಸಾಲವೀಗ ಬರೋಬ್ಬರಿ ₹63,000 ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಕಡಿತವಾಗಿದ್ದಲ್ಲದೆ, ಅಭಿವೃದ್ಧಿ ಸಹ ಕುಂಠಿತವಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಆನ್‌ಲೈನ್ ಗೇಮಿಂಗ್‌ನಿಂದ ಬಳಕೆದಾರರಿಗೆ ಪ್ರತಿವರ್ಷ 20,000 ಕೋಟಿ ರೂ. ನಷ್ಟ; ಲೋಕಸಭೆಯಲ್ಲಿ ಮಂಡನೆಯಾದ ಆನ್‌ಲೈನ್ ಗೇಮಿಂಗ್ ವೇದಿಕೆಗಳ ನಿಯಂತ್ರಿಸುವ ಮಸೂದೆಯಲ್ಲಿ ಏನಿದೆ?
ಡೀಸೆಲ್, ಹಾಲು, ವಿದ್ಯುತ್, ಮೆಟ್ರೋ, ಬಿಎಂಟಿಸಿ ಸೇರಿದಂತೆ ಹಲವು ದಿನಬಳಕೆಗಳ ಬೆಲೆ ಏರಿಸಿ ಸಾರ್ವಜನಿಕರ ಜೀವನವನ್ನು ಬಲು ದುಬಾರಿಯಾಗಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಾರಬರಾಜು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.