ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಭಾನುವಾರದ ಈ ದಿನ ಚಂದ್ರ ದರ್ಶನದಿಂದ ಯಾವ ರಾಶಿಗೆ ಉತ್ತಮ ಫಲವಿದೆ ಗೊತ್ತಾ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರತಿಪತಿಥಿ, ಪೂರ್ವ ಫಲ್ಗುಣಿ ನಕ್ಷತ್ರದ ಆಗಸ್ಟ್ 24ನೇ ತಾರೀಖಿನ ಈ ದಿನದಂದು ಚಂದ್ರ ದರ್ಶನದ ಶುಭ ಫಲ ಇರಲಿದೆ. ಈ ದಿನ ಚಂದ್ರ ದರ್ಶನ ಮಾಡಿದರೆ ಚೌತಿ ಚಂದ್ರ ದರ್ಶನದ ದೋಷದಿಂದ ಪರಿಹಾರ ಕಾಣಬಹುದು. ಹಾಗಾಗಿ ಈ ದಿನ ಚಂದ್ರದರ್ಶನ ಮಾಡಿದರೆ ಬಹಳ ಒಳ್ಳೆಯದ್ದಾಗಿದ್ದು ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ದಿನ ಭವಿಷ್ಯ ಭಾನುವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರತಿಪತಿಥಿ, ಪೂರ್ವ ಫಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಚಂದ್ರ ದರ್ಶನದ ದಿನವಾಗಿದ್ದು ಮೇಷ ಮೇಷ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗಲಿದೆ. ಹೆಚ್ಚು ಕ್ರಿಯಾತ್ಮಕವಾಗಿ ಇರುವ ದಿನ ಇದಾಗಲಿದೆ‌. ದಾಂಪತ್ಯ, ಪ್ರೇಮ, ಪ್ರೀತಿ ವಿಚಾರದಲ್ಲಿ ಕೆಲವು ವೈಮನಸ್ಸು ಮೂಡಲಿದೆ. ಹಾಗಿದ್ದರೂ ಈ ದಿನ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರು ಬಹಳ ಗೊಂದಲದ ದಿನವಾಗಿದೆ. ಸಂಸಾರ, ಆಸ್ತಿ- ಪಾಸ್ತಿ ವ್ಯವಹಾರ, ತಾಯಿಯ ಆರೋಗ್ಯ ಇತ್ಯಾದಿಯಲ್ಲಿ ಸಾಕಷ್ಟು ಸಮಸ್ಯೆ ಇರಲಿದ್ದು ಅದೇ ಯೋಚನೆ ನಿಮ್ಮನ್ನು ಕಾಡಲಿದೆ. ಅಧಿಕ ಯೋಚನೆ ಕೆಲಸ ಕಡಿಮೆಯಾಗುವ ದಿನ ಇದಾಗಿದೆ. ಹೀಗಾಗಿ ಎಲ್ಲ ಕೆಲಸ ಕಾರ್ಯಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಮುನ್ನಡೆಯುವುದು ಉತ್ತಮ ಎನ್ನಬಹುದು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧ್ಯ ವಾಗಲಿದೆ. ಕಮ್ಯುನಿಕೇಶನ್ ಮಿಡಿಯಾ, ಟಿವಿ, ರೇಡಿಯೋ ಇತ್ಯಾದಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಅಂದು ಕೊಂಡ ಕೆಲಸ ಕಾರ್ಯ ನಿರ್ವಿಘ್ನವಾಗಿ ಸಾಗಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕೂಡ ಈ ದಿನ ಸಂಸಾರ, ಆರೋಗ್ಯ ಇತ್ಯಾದಿ ವಿಚಾರದಲ್ಲಿ ಹೆಚ್ಚಿನ ಗಮನವಹಿಸಬೇಕು. ಮನಸ್ಸಿಗೆ ನೆಮ್ಮದಿಕೊಡುವ ಸಂಗತಿಗಳೊಂದಿಗೆ ನೀವು ಹೆಚ್ಚು ಬೆರೆತರೆ ದಿನಾಂತ್ಯದಲ್ಲಿ ಶುಭವಾಗಲಿದೆ. ಹಳೆ ವೈಮಮಸ್ಸು, ಸಂಬಂಧದ ಒಡಕುಗಳು ದೂರಾಗಿ ಎಲ್ಲ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಉತ್ತಮವಾಗಿ ಇರಲಿದೆ‌. ವ್ಯಾಪಾರ , ವ್ಯವಹಾರದಲ್ಲಿ ಪ್ರಗತಿ ಸಾಧ್ಯವಿದೆ‌.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಉತ್ತಮವಾಗಿ ಇರಲಿದೆ. ಇಷ್ಟಾರ್ಥ ಸಿದ್ಧಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಂದು ಕೆಲವು ಅನಿರೀಕ್ಷಿತ ಘಟನೆ ನಿಮಗೆ ಗೊಂದಲ ಗೊಳ್ಳುವ ಪರಿಸ್ಥಿತಿ ಎಡೆಮಾಡುವ ಸಾಧ್ಯತೆ ಕೂಡ ಇದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವ ಕಾರಣ ಅನೇಕ ಕಾರ್ಯಕ್ಷೇತ್ರದಲ್ಲಿ ಸುಲಭವಾಗಿ ನೀವು ಯಶಸ್ಸು ಪಡೆಯಬಹುದು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಬಹಳ ಈ ದಿನ ಬಹಳ ಕಷ್ಟಕರವಾದ ದಿನ ವಾಗಿದೆ. ಇಂದು ಕೆಲವು ಅನಿರೀಕ್ಷಿತ ಘಟನೆ ನಿಮಗೆ ಗೊಂದಲ ಗೊಳ್ಳುವ ಪರಿಸ್ಥಿತಿ ಎಡೆ ಮಾಡುವ ಸಾಧ್ಯತೆ ಕೂಡ ಇದೆ. ನಿಮಗೆ ಮುಖ್ಯವಾದ ಕೆಲವು ಸಂಬಂಧಗಳು ನಿಮ್ಮಿಂದ ದೂರಾಗುತ್ತದೆ ಎಂಬ ಭಯ ನಿಮ್ಮನ್ನು ಕಾಡಲಿದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ ಎಲ್ಲ ಗೊಂದಲ ಶೀಘ್ರವೇ ಪರಿಹಾರ ಆಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ದಿನ ಬಹಳ ಉತ್ತಮವಾಗಿ ಇರಲಿದೆ. ಇಂದು ಈ ರಾಶಿ ಅವರಿಗೆ ಭಾಗ್ಯೋದಯ ಆಗುತ್ತದೆ ಎಂದು ಹೇಳಬಹುದು. ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರದಿಂದ ಧನಾಗಮ, ಯಾವುದೇ ಕಾರ್ಯಕ್ಷೇತ್ರದಲ್ಲಿ ಮನಸ್ಸಿಟ್ಟು ಮಾಡಿದರೆ ಒಳ್ಳೆಯ ಫಲ ನಿಮಗೆ ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಬಹಳ ಕಾರ್ಯಕ್ಷೇತ್ರದಲ್ಲಿ ಸ್ವಲ್ಪಗೊಂದಲ ಉಂಟಾಗುವ ದಿನ ಇದಾಗಲಿದೆ. ಮುಖ್ಯವಾದ ಕೆಲಸ ಕಾರ್ಯಕ್ಕೆ ನೀವು ಅಧಿಕ ಒತ್ತು ನೀಡಿದ್ದರು ನಿಮ್ಮನ್ನು ಯಾರು ಕೂಡ ಬೆಂಬಲಿಸದೇ ಇರುವ ಸಾಧ್ಯತೆ ಇದೆ. ಹೀಗಾಗಿ ಕೆಲವು ಮಾನಸಿಕ ಸಮಸ್ಯೆ, ಹತಾಶೆ, ಬೇಸರ ಎಲ್ಲ ಉಂಟಾಗುವ ಸಾಧ್ಯತೆ ಇದೆ. ಆದರೆ ಅಂದುಕೊಂಡ ಕೆಲಸ ಕಾರ್ಯ ನಿಗಧಿತ ಸಮಯಕ್ಕು ಮೊದಲೇ ಮುಗಿಸಿದರೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಇಂದು ಅವರಿಗೆ ಭಾಗ್ಯೋದಯ ವಾಗುವ ದಿನ ಎಂದೇ ಹೇಳಬಹುದು. ನಿಮಗೆ ಭಾಗ್ಯೋದಯವಾಗಲು ಹಿರಿಯರ ಆಶೀರ್ವಾದ ಅಗತ್ಯವಾಗಿದೆ. ಹಿರಿಯರೊಂದಿಗೆ ವ್ಯವಹರಿಸುವಾಗ ದಾಕಷ್ಟು ಜಾಗೃತಿ, ನಯ, ವಿನಯತೆ ಇರುವುದು ಬಹಳ ಮುಖ್ಯ. ನಿಮ್ಮ ಜೀವನವನ್ನು ನಿಮಗೆ ಬೇಕಾದಂತೆ ಮುನ್ನಡೆಸಲು ಬೇಕಾದ ಅಷ್ಟು ಸಹಕಾರಗಳು ಕೂಡ ನಿಮಗೆ ಸಿಗಲಿದೆ.

ಇದನ್ನು ಓದಿ:Daily Horoscope: ಆಶ್ಲೇಷಾ ನಕ್ಷತ್ರದ ಈ ದಿನ ಈ ರಾಶಿಯವರಿಗೆಲ್ಲ ಶುಭ ದಿನ

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬಹಳ ಕಷ್ಟಕರವಾಗಿರಲಿದೆ. ದಾಂಪತ್ಯ, ಸ್ನೇಹ ಸಂಬಂಧದಲ್ಲಿ ವೈಮನಸ್ಸು ಮೂಡಲಿದೆ. ಮುಖ್ಯವಾದ ಕೆಲವು ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಲಿದೆ. ಕ್ಲಿಷ್ಟಕರವಾದ ದಿನವಾಗಿದೆ. ಈ ದಿನ ಕುಟುಂಬ, ಕಚೇರಿ ಇತರ ವ್ಯಾಪಾರ ವ್ಯವ ಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ಕೆಲವೊಂದಿಷ್ಟು ಮನಸ್ಥಾಪ ಉಂಟಾ ಗಲಿದ್ದು ಎಲ್ಲವನ್ನು ಆಯಾ ಕಾಲಕ್ಕೆ ಬಗೆಹರಿಸಿ ಕೊಳ್ಳಬೇಕು. ನೀವು ಎಲ್ಲರಿಂದ ನಿರ್ಲಕ್ಷ್ಯಕ್ಕೆ ಒಳಪಡುತ್ತಿದ್ದೀರಿ ಎಂಬ ಭಾವನೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ ಹೀಗಾಗಿ ಯಾವುದೇ ವಿಚಾರಕ್ಕೂ ಹೆಚ್ಚು ನೊಂದುಕೊಳ್ಳದೆ ಮುನ್ನಡೆಯಬೇಕು.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಎಲ್ಲರಿಂದ ಪ್ರೀತಿ , ವಿಶ್ವಾಸ ಸಹಕಾರ ನಿಮಗೆ ಪ್ರಾಪ್ತಿಯಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ, ಉತ್ತಮ ಸ್ನೇಹ ಸಂಬಂಧಕ್ಕೆ ಬಲ, ಕಾರ್ಯದಲ್ಲಿ ಯಶಸ್ಸು ನಿಮಗೆ ಸಿಗಲಿದೆ‌. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿಯಾಗಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕೂಡ ಸಿಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿ, ಧನಾಗಮವಾಗಲಿದೆ. ಅಂದು ಕೊಂಡ ಕೆಲಸ ಕಾರ್ಯ ಉತ್ತಮ ವಾಗಿ ಸಾಗಲಿದೆ. ನಿಮಗೆ ಕೇಡು ಬಯಸುವ ಯಾವ ಕಾರ್ಯಗಳಿಗೂ ಇಂದು ಜಯ ಸಿಗಲಾರದು. ಸಾಮಾ ಜಿಕ ರಂಗದಲ್ಲಿ ಕಚೇರಿ ಕೆಲಸದಲ್ಲಿ ಗೌರವ ಕೂಡ ಪ್ರಾಪ್ತಿಯಾಗಲಿದೆ.