ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ರಾಶಿಯವರಿಗೆ ಇಂದು ಸಂಗಾತಿಯಿಂದಲೇ ದೊರೆಯಲಿದೆ ಸಹಕಾರ

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಅಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 22ನೇ ತಾರೀಖಿನ ಮಂಗಳವಾರದಂದು, ತ್ರಯೋದಶಿ ತಿಥಿ, ಮೃಗಶಿರ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ರಾಶಿ ಭವಿಷ್ಯ ಹೀಗಿದೆ...

ಈ ರಾಶಿಯವರಿಗೆ ಇಂದು ಅವರ ಸಂಗಾತಿಯಿಂದಲೇ ಒಳಿತು

Horoscope

Profile Pushpa Kumari Jul 22, 2025 6:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ತ್ರಯೋದಶಿ ತಿಥಿ, ಮೃಗಶಿರ ನಕ್ಷತ್ರದಲ್ದಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಮೇಷ ರಾಶಿ: ಇಂದು ಮೃಗಶಿರ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಸಂಸಾರದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ‌. ಮಧ್ಯಾಹ್ನ ನಂತರ ಆತ್ಮ ವಿಶ್ವಾಸ ಚೆನ್ನಾಗಿ ಇರಲಿದ್ದು ಬಂಧು-ಬಾಂಧವರು, ಅಣ್ಣ-ತಮ್ಮಂದಿರು ಮನಸ್ಸಿಗೆ ಸಮಾಧಾನಕರ ವಿಚಾರವನ್ನು ನೀಡಲಿದ್ದಾರೆ. ಹಾಗೆಯೇ ಇಂದು ನಿಮಗೆ ಪಿಕ್‌ನಿಕ್, ಟ್ರಿಪ್ ಇತ್ಯಾದಿ ಪ್ರಯಾಣ ಮಾಡುವ ಭಾಗ್ಯ ಸಿಗಬಹುದು.

ವೃಷಭ ರಾಶಿ: ವೃಷಭ ರಾಶಿಯವರು ಇಂದು ಮಧ್ಯಾಹ್ನವರೆಗೂ ಬಹಳ ಸಂತೋಷದಿಂದ ಇರುತ್ತಾರೆ. ನಿಮಲ್ಲಿ ಇದ್ದಂತಹ ಕೆಲವು ಸಮಸ್ಯೆಗಳು ಇಂದು ನಿವಾರಣೆಯಾಗಲಿದೆ. ನಿಮ್ಮ ಖುಷಿಯ ವಿಚಾರವನ್ನು ಮನೆಯವರೊಂದಿಗೂ ಹಂಚಿಕೊಂಡು ನೆಮ್ಮದಿಯ ವಾತಾವರಣದಲ್ಲಿ ಇರುವಂತಹ ದಿನವಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಧ್ಯಾಹ್ನವರೆಗೆ ಮನಸ್ಸಿಗೆ ಅನೇಕ ಕ್ಷೇಷ, ಮಾನಸಿಕ ಕಿರಿಕಿರಿ ಉಂಟಾಗಬಹುದು. ಮಧ್ಯಾಹ್ನ ಬಳಿಕ ಈ ಸಮಸ್ಯೆಗಳೆಲ್ಲ ನಿವಾರಣೆ ಆಗಿ ನೆಮ್ಮದಿ ಪ್ರಾಪ್ತಿ ಆಗಲಿದೆ.

ಕಟಕ ರಾಶಿ: ಕಟಕ ರಾಶಿಯವರು ಸ್ನೇಹಿತರೊಂದಿಗೆ‌ ಬಹಳ ಉತ್ತಮ ಸಮಯ ಕಳೆಯಲಿದ್ದಾರೆ. ಆದರೆ ಕೆಲವೊಂದು ಸ್ನೇಹಿತರಿಂದ ನಿಮಗೆ ನೋವು ಉಂಟಾಗಬಹುದು. ಆದರೆ ಕೆಲವೇ ದಿನಗಳಲ್ಲಿ ಈ ನೋವು ಪರಿಹಾರ ಕಾಣಲಿದ್ದು ಯಾವುದೇ ಚಿಂತೆ ಮಾಡದೇ ಇರುವುದು ಉತ್ತಮ. ಆದರೆ ಕೆಲಸ, ವ್ಯವಹಾರ ಇತ್ಯಾದಿ ಬಗ್ಗೆ ಇಂದು ಮುಖ್ಯ ನಿರ್ಧಾರ ಕೈಗೊಳ್ಳುವ ಮುನ್ನ ಜಾಗೃತೆ ವಹಿಸಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ,ಕಿರಿಕಿರಿ ಹೆಚ್ಚಾಗಿರಲಿದೆ. ಮಧ್ಯಾಹ್ನ ಮೇಲೆ ಮನಸ್ಸಿಗೆ ನಿರಾಳ ಅನುಭವ ಉಂಟುಮಾಡಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಾಣಲಿದ್ದು, ಉತ್ತಮ ದಿನವಾಗಲಿದೆ.

ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರಿಗೆ ಅದೃಷ್ಟದಲ್ಲಿ ಕೊರತೆ ಇರಬಹುದು ಎನ್ನುವ ಮನೋಭಾವನೆ ಕಾಡಬಹುದು. ಆದರೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಗೌರವ ಕಂಡು ಬರಲಿದೆ. ಇತರರಿಂದ ಪ್ರಶಂಸೆಯು ಪ್ರಾಪ್ತಿಯಾಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಮನಸ್ಸಿಗೆ ನಾನಾ ರೀತಿಯ ಕ್ಷೇಷಗಳು ಕಾಡ ಬಹುದು. ನಿಮಗೆ ಬೇಕಾದವರಿಂದ ಯಾವುದೇ ರೀತಿಯ ಸಹಕಾರ ಸಿಗದೆ ಇರಬಹುದು‌. ಆದರೆ ನಿಮ್ಮ ಆತ್ಮವಿಶ್ವಾಸದಿಂದ ಯಾವುದೇ ರೀತಿಯಲ್ಲಿ ದುಃಖಿತರಾಗದೆ ದೃಢವಾಗಿ ಇರುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನದವರೆಗೂ ಎಲ್ಲ ರೀತಿಯ ಸಹಕಾರ ಪ್ರತಿ ಯೊಬ್ಬರಿಂದಲೂ ಸಿಗಬಹುದು. ಆದರೆ ಸ್ವಲ್ಪ ಸಮದಲ್ಲೇ ಇದು ಬದಲಾಗಬಹುದು. ಇದರಿಂದ ನಿಮಗೆ ಮನಸ್ಸಿಗೆ ನೋವುಂಟಾಗಬಹುದು. ಅತೀ ಪ್ರೀತಿಪಾತ್ರರಿಂದ ಇಂದು ಬೇಸರವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಇರಬೇಕಾಗುತ್ತದೆ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರಿ ಅದೃಷ್ಟ- ಆದರೆ ಈ ಅನಾಹುತಗಳ ಅರಿವಿರಲಿ!

ಧನಸ್ಸು ರಾಶಿ: ಈ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಲಿದ್ದು ಯಶಸ್ಸನ್ನು ಕಾಣಲಿದ್ದೀರಿ. ಎಲ್ಲರೂ ನಿಮ್ಮ ಕಾರ್ಯ ವೈಖರಿಯನ್ನು ಹೊಗಳಲಿದ್ದಾರೆ. ನಿಮ್ಮ ಪ್ರೀತಿಪಾತ್ರರಿಂದ, ಸಂಗಾತಿಯಿಂದ ಉತ್ತಮ ಬೆಂಬಲವೂ ನಿಮಗೆ ಸಿಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸಣ್ಣ ಪುಟ್ಟ ಕಿರಿ- ಕಿರಿ ನೋವು ಕಾಡುವ ಸಾಧ್ಯತೆ ಇದೆ. ನಿಮ್ಮ ಕ್ರಿಯಾತ್ಮಕ ಯೋಚನೆಯ ಬಗ್ಗೆ ಋಣಾತ್ಮಕವಾಗಿ ಹೀಯಾಳಿಸುವವರು ಇರುತ್ತಾರೆ. ಆದರೂ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಹಾಗೆಯೇ ಶುಭಕರವಾದ ದಿನ ನಿಮ್ಮದಾಗಲಿದೆ.

ಕುಂಭ ರಾಶಿ: ಕುಂಭರಾಶಿ ಅವರಿಗೆ ಸಂಸಾರದ ಜವಾಬ್ದಾರಿ ಹೆಚ್ಚಾಗಲಿದೆ. ಮಕ್ಕಳ ಬಗ್ಗೆ ಪೋಷ ಕರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ‌. ನಿಮ್ಮಲ್ಲಿ ಇಂದು ಬದಲಾವಣೆಯೂ ಕಂಡು ಬಂದು ಯಶಸ್ಸನ್ನು ಕಾಣಲಿದ್ದೀರಿ.

ಮೀನ ರಾಶಿ: ಮೀನ ರಾಶಿಯವರು ಇಂದು ಕೆಲಸ ಕಾರ್ಯದಲ್ಲಿ ತುಂಬ ಬ್ಯುಸಿ ಇರಲಿದ್ದೀರಿ‌. ಅದರ ಜತೆ ನೀವು ಸಂಸಾರದ ಕಡೆಯೂ ಗಮನ ನೀಡಬೇಕು. ಹಾಗಾಗಿ ಕೆಲಸ ಹಾಗೂ ಸಂಸಾರ ಎರಡಕ್ಕೂ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ದಿನ ನಿತ್ಯ ಭಗವದ್ಗೀತಾ ಶೋಕ್ಷ ಪಠಣ ಮಾಡುವ ಅಭ್ಯಾಸ ಮಾಡಿಕೊಳ್ಳಿ.