ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Krishna Janmashtami 2025: ಜನ್ಮಾಷ್ಟಮಿಗೆ ಕೃಷ್ಣನಂತೆ ಫ್ಯಾನ್ಸಿ ಡ್ರೆಸ್ ಮಾಡುವವರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್

Krishna Janmashtami 2025: ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳ ಫ್ಯಾನ್ಸಿ ಡ್ರೆಸ್ ಮಾಡುವವರು ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿದಲ್ಲಿ, ಅತಿ ಸುಲಭವಾಗಿ ಮಕ್ಕಳನ್ನು ಮುದ್ದು ಕೃಷ್ಣನಂತೆ ಬಿಂಬಿಸಬಹುದು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ಸ್. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಕೃಷ್ಣನಂತೆ ಫ್ಯಾನ್ಸಿ ಡ್ರೆಸ್ ಮಾಡುವವರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೃಷ್ಣ ಜನ್ಮಾಷ್ಟಮಿಗೆ ಫ್ಯಾನ್ಸಿ ಡ್ರೆಸ್ ಮಾಡುವವರು ಒಂದಿಷ್ಟು ಟಿಪ್ಸ್ ಫಾಲೋ ಮಾಡಿದಲ್ಲಿ, ನೋಡಲು ಆಕರ್ಷಕವಾಗಿ ಬಿಂಬಿಸಬಹುದು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್. ಹೌದು, ಈಗಾಗಲೇ ಗೋಕುಲಾಷ್ಟಮಿಯ ದಿನ ಹಾಗೂ ಹಬ್ಬದ ಹಿಂದೆ-ಮುಂದೆ ನಡೆಯುವ ಈ ಸ್ಪರ್ಧೆಗಳಲ್ಲಿ, ಹಾಲುಗಲ್ಲದ ಕಂದಮ್ಮಗಳಿಂದ ಹಿಡಿದು ಟೀನೇಜ್ ಮಕ್ಕಳವರೆಗೂ ಲೆಕ್ಕವಿಲ್ಲದಷ್ಟು ಮಕ್ಕಳು ಭಾಗವಹಿಸುವುದು ಕಾಮನ್. ಅಂತಹವರಿಗೆ ಸದುಪಯೋಗವಾಗುವಂತಹ ಒಂದಿಷ್ಟು ಸಿಂಪಲ್ ಸಲಹೆಗಳನ್ನು ಕಿಡ್ಸ್ ಸ್ಟೈಲಿಸ್ಟ್‌ಗಳು ನೀಡಿದ್ದಾರೆ.

Krishna Janmashtami 2025 1

ಸೂಕ್ತ ರೀತಿಯಲ್ಲಿ ಪ್ರೀ ಪ್ಲಾನ್ ಮಾಡಿ

ನಿಮ್ಮ ಮಗ/ಮಗಳಿಗೆ ಯಾವ ಬಗೆಯ ಕೃಷ್ಣನ ಡ್ರೆಸ್ ಹಾಕಲು ಬಯಸುವಿರಿ! ಎಂಬುದನ್ನು ನಿರ್ಧರಿಸಿ. ಕೃಷ್ಣನ ಉಡುಪು, ಆಕ್ಸೆಸರೀಸ್ ಯಾವುದು? ನಿಮ್ಮ ಮಗುವಿಗೆ ಬೆಸ್ಟ್ ಎಂಬುದನ್ನು ಮೊದಲೇ ಡಿಸೈಡ್ ಮಾಡಿ, ಪ್ರೀ ಪ್ಲಾನ್ ಮಾಡಿ.

ಆಯಾ ಥೀಮ್‌ಗೆ ತಕ್ಕಂತೆ ಸಿಂಗರಿಸಿ

ಕೆಲವೊಂದು ಫ್ಯಾನ್ಸಿ ಡ್ರೆಸ್ ಕಾನ್ಸೆಪ್ಟ್‌ಗಳಲ್ಲಿ ಥೀಮ್ ಅಥವಾ ಕಾನ್ಸೆಪ್ಟ್ ನೀಡಿರುತ್ತಾರೆ. ಅಲ್ಲದೇ ಮಕ್ಕಳಿಗೆ ವಯಸ್ಸಿನ ಮಿತಿಯೂ ಇರುತ್ತದೆ. ಮೊದಲೇ ಆ ಬಗ್ಗೆ ತಿಳಿದುಕೊಂಡು ಥೀಮ್‌ಗೆ ತಕ್ಕಂತೆ ಅಲಂಕರಿಸಿ.

Krishna Janmashtami 2025 2

ವಯಸ್ಸಿಗೆ ಅನುಗುಣವಾಗಿ ಡ್ರೆಸ್ ಮಾಡಿ

ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಯಾವ ಬಗೆಯ ಕೃಷ್ಣನ ಡ್ರೆಸ್ ಹಾಕಬಹುದು ಎಂಬುದನ್ನು ಯೋಚಿಸಿ. ನಿಮ್ಮ ಮಗು ಮುದ್ದು ಮುದ್ದಾಗಿದ್ದಲ್ಲಿ, ಬೆಣ್ಣೆ ಕೃಷ್ಣ, ತರ್ಲೆಯಾಗಿದ್ದಲ್ಲಿ ತುಂಟ ಕೃಷ್ಣ, ಎತ್ತರವಾಗಿದ್ದಲ್ಲಿ ಬೆಣ್ಣೆ ಮಡಕೆ ಹೊಡೆಯುವ ಕೃಷ್ಣ ಹೀಗೆ ಮಕ್ಕಳ ಬಾಡಿ ಟೈಪ್ ನೋಡಿಕೊಂಡು ನಿರ್ಧರಿಸಿ.

ಕೃಷ್ಣನ ಆಕ್ಸೆಸರೀಸ್ ಅತಿ ಮುಖ್ಯ

ಕೃಷ್ಣನ ಫ್ಯಾನ್ಸಿ ಡ್ರೆಸ್ ಮಾಡುವಾಗ ಅತಿ ಮುಖ್ಯವಾದುದು ಗೋಪಾಲಕನ ನವಿಲುಗರಿ, ಕೊಳಲು, ಮುತ್ತಿನ ಹಾರಗಳು, ಕೀರೀಟ ಹಾಗೂ ಶಲ್ಯ ಹೊಂದಿದ ಸಿಲ್ಕ್ನ ಧೋತಿ. ಇವುಗಳನ್ನು ಧರಿಸಲೇಬೇಕು. ಆಗಿದ್ದಾಗ ಮಾತ್ರ ಘನಶ್ಯಾಮನಂತೆ ಕಾಣಲು ಸಾಧ್ಯ.

Krishna Janmashtami 2025 3

ಕೃಷ್ಣನ ಔಟ್‌ಫಿಟ್ಸ್ ಬಾಡಿಗೆಗೆ ಲಭ್ಯ

ಸಾಕಷ್ಟು ಫ್ಯಾನ್ಸಿ ಡ್ರೆಸ್ ದೊರೆಯುವ ಸ್ಥಳದಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ನಾನಾ ಬಗೆಯ ಕೃಷ್ಣನ ಫ್ಯಾನ್ಸಿ ಡ್ರೆಸ್‌ಗಳು ದಿನದ ಲೆಕ್ಕದಲ್ಲಿ ಬಾಡಿಗೆಗೆ ದೊರೆಯುತ್ತವೆ. ಕಂಪ್ಲೀಟ್ ಪ್ಯಾಕೇಜ್ ರೂಪದಲ್ಲಿ ಉಡುಪಿನಿಂದಿಡಿದು ಆಕ್ಸೆಸರೀಸ್‌ಗಳು ಲಭ್ಯ. ಇವುಗಳ ಸದುಪಯೋಗಪಡಿಸಿಕೊಳ್ಳಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Krishna Janmastami 2025: ಎಲ್ಲೆಡೆ ಶುರುವಾಯ್ತು ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್