ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಮರ ನಿಂತು ಶಾಂತಿ ನೆಲೆಸಲಿ

ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿ, ತೈಲ ಪೂರೈಕೆ ಅಸ್ತವ್ಯಸ್ತವಾಗಿತ್ತು. ಇದರಿಂದ ಹಣದುಬ್ಬರ, ಅವಶ್ಯಕ ವಸ್ತುಗಳ ಬೆಲೆಯೇರಿಕೆ ಉಂಟಾಗಿತ್ತು. ಸಮರಕ್ಕೆ ಮಂಗಳ ಹಾಡುವುದರೊಂದಿಗೆ ತೈಲ ಪೂರೈಕೆ ಸುಗಮವಾಗಿ ಬೆಲೆಯೂ ಇಳಿಯಲಿ ಎಂದು ನಾವು ಆಶಿಸಬಹುದು.

ಸಮರ ನಿಂತು ಶಾಂತಿ ನೆಲೆಸಲಿ

-

Profile
Ashok Nayak Jun 16, 2026 2:11 PM

ಅಮೆರಿಕ ಹಾಗೂ ಇರಾನ್ ನಡುವಿನ ಮಹಾ ಸಮರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮೂರುವರೆ ತಿಂಗಳುಗಳ ಕಾಲ ಜಗತ್ತು ಈ ಯುದ್ಧದಿಂದಾಗಿ ಅಗ್ನಿಕುಂಡದ ಮೇಲೆ ನಿಂತಂತೆ ನಿಂತಿತ್ತು. ಇರಾನ್ ಜೊತೆ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಪಾಕಿಸ್ತಾನವೂ ಇದನ್ನು ಅನುಮೋದಿಸಿದೆ.

ಅಮೆರಿಕದ ಪ್ರಕಾರ, ಹಾರ್ಮುಜ್ ಜಲಸಂಶಿಯೂ ತಕ್ಷಣವೇ ತೆರೆಯಲಿದೆ ಹಾಗೂ ಅದು ಸುಂಕ ಮುಕ್ತವಾಗಲಿದೆ. ಈ ಸುದ್ದಿ ಹರಡುತ್ತಿದ್ದಂತೆ ಕಚ್ಚಾ ತೈಲದ ಬೆಲೆ ಇಳಿದಿದ್ದು, ಮಾರುಕಟ್ಟೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ ಸುಮಾರು 5%ರಷ್ಟು ಕುಸಿದಿದೆ. ಇಸ್ರೇಲ್- ಇರಾನ್ ಹಾಗೂ ಅಮೆರಿಕ ಈ ಮೂರೂ ದೇಶಗಳ ಮೂರ್ಖತನದಿಂದಾಗಿ ಇಡೀ ಜಗತ್ತು ಆಪತ್ತು ಅನುಭವಿಸುವಂತಾಗಿತ್ತು.

ಇದನ್ನೂ ಓದಿ: Vishwavani Editorial: ಶಾಲಾ ಕಟ್ಟಡಗಳ ಅಸುರಕ್ಷತೆ

ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿ, ತೈಲ ಪೂರೈಕೆ ಅಸ್ತವ್ಯಸ್ತವಾಗಿತ್ತು. ಇದರಿಂದ ಹಣದುಬ್ಬರ, ಅವಶ್ಯಕ ವಸ್ತುಗಳ ಬೆಲೆಯೇರಿಕೆ ಉಂಟಾಗಿತ್ತು. ಸಮರಕ್ಕೆ ಮಂಗಳ ಹಾಡುವುದರೊಂದಿಗೆ ತೈಲ ಪೂರೈಕೆ ಸುಗಮವಾಗಿ ಬೆಲೆಯೂ ಇಳಿಯಲಿ ಎಂದು ನಾವು ಆಶಿಸಬಹುದು. ಆದರೆ ಇದು ಉಂಟು ಮಾಡಿರುವ ಆರ್ಥಿಕ ಬಿಕ್ಕಟ್ಟು ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ.

ಗ್ರಾಹಕ ಮಾರುಕಟ್ಟೆಯಲ್ಲಿ ಏರಿದ ಅವಶ್ಯಕ ವಸ್ತುಗಳ ಬೆಲೆಗಳು ಇಳಿದ ಉದಾಹರಣೆ ಈ ಹಿಂದೆ ಇಲ್ಲ. ಪ್ರತೀ ಯುದ್ಧವೂ ಜಗತ್ತಿನ ಮೇಲೆ ಆಳವಾದ ಗಾಯವನ್ನು ಮೂಡಿಸುತ್ತದೆ. ಮಧ್ಯಪ್ರಾಚ್ಯ ದಲ್ಲಿ ದಾಳಿಗಳಿಂದ ಧ್ವಂಸವಾದ ಮೂಲಸೌಕರ್ಯಗಳನ್ನು ಕಟ್ಟಲು ಭಾರಿ ಬೆಲೆ ತೆರಬೇಕಾಗಿದೆ. ದರ ಸುಂಕವನ್ನು ಜಗತ್ತಿನ ಬೇರೆ ದೇಶಗಳೂ ಕಟ್ಟಬೇಕಾಗುತ್ತದೆ. ಇದರಿಂದ ನಾವು, ಮುಖ್ಯವಾಗಿ ಅಮೆರಿಕ ಕಲಿಯಬೇಕಾದ ಪಾಠ ಇದೆ.

ಅಮೆರಿಕ ಯುದ್ಧವನ್ನು ಪ್ರಾರಂಭಿಸುತ್ತದೆ. ಆದರೆ ಗೆದ್ದು ಅದನ್ನು ಮುಗಿಸಿದ ಉದಾಹರಣೆ ಎಲ್ಲೂ ಇಲ್ಲ. ವಿಯೆಟ್ನಾಂ, ಅಫ್ಘಾನಿಸ್ತಾನ ಹೀಗೆ ಎಲ್ಲ ಕಡೆಯೂ ಅದಕ್ಕೆ ಮುಖಭಂಗವೇ ಆಗಿದೆ. ಆದರೂ ಅದು ಅನ್ಯರ ವ್ಯವಹಾರದಲ್ಲಿ ಮೂಗು ತೂರಿಸುವ ತನ್ನ ಚಾಳಿ ಬಿಡುವುದಿಲ್ಲ. ಜೊತೆಗೇ ಅಣ್ವಸ ಹೊಂದುವ ತನ್ನ ಮಹತ್ವಾಕಾಂಕ್ಷೆಯನ್ನು ಇರಾನ್ ಬಿಡದೇ ಹೋದರೆ, ಹಳೆಯ ದ್ವೇಷಗಳನ್ನು ಆಗಾಗ ಕೆಣಕುವ ಚಾಳಿಯನ್ನು ಇಸ್ರೇಲ್ ಬಿಡದೇ ಹೋದರೆ ಬಿಕ್ಕಟ್ಟು ಮುಂದುವರಿಯಲಿದೆ. ಶಾಂತಿಯೇ ಅಭಿವೃದ್ಧಿಯ ಸೋಪಾನ. ಸಮರ ಸರ್ವನಾಶದ ಬೀಜ. ಇದನ್ನು ಎಲ್ಲರೂ ಬೇಗ ಅರಿತಷ್ಟು ಒಳ್ಳೆಯದು.