ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಆಟಗಾರರ ನಡೆ ಶ್ಲಾಘನೀಯ

ಆರಂಭದಲ್ಲಿ ಪಂದ್ಯವನ್ನೇ ಬಹಿಷ್ಕರಿಸಲು ಹಕ್ಕೊತ್ತಾಯ ಕೇಳಿ ಬಂದಿತ್ತು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಕಟೆಕಟೆ ಏರಿತ್ತು. ಪಂದ್ಯಕ್ಕೆ ತಡೆ ನೀಡಲು ಬರುವುದಿಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬಳಿಕ ಪಂದ್ಯ ನಡೆಯಿತು. ಆದರೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸಹಜ ವಾಗಿರುವ ‘ಬೆಂಬಲ’ ದೇಶದ ಹಲವೆಡೆ ಇರಲಿಲ್ಲ

Vishwavani Editorial: ಆಟಗಾರರ ನಡೆ ಶ್ಲಾಘನೀಯ

-

Ashok Nayak Ashok Nayak Sep 16, 2025 11:03 AM

ಪಹಲ್ಗಾಮ್ ದಾಳಿಯ ಬಳಿಕ ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ’ ಎನ್ನುವ ಸಂದೇಶ ವನ್ನು ಭಾರತ ಪಾಕಿಸ್ತಾನಕ್ಕೆ ರವಾನಿಸಿದ ಬಳಿಕ ಕೇಂದ್ರ ಸರಕಾರದ ಕ್ರಮವನ್ನು ದೇಶವಾಸಿ ಗಳೆಲ್ಲರೂ ಬೆಂಬಲಿಸಿದ್ದರು. ಬಳಿಕ ಆಪರೇಷನ್ ಸಿಂದೂರ ಕಾರ‍್ಯಾಚರಣೆ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದಾಗ ಭಾರತೀಯರೆಲ್ಲರೂ ಒಂದಾಗಿ ಬೆಂಬಲಕ್ಕೆ ನಿಂತಿದ್ದರು.

ಇದೇ ರೀತಿ ಲೆಜೆಂಡ್ಸ್ ಕಪ್‌ನಲ್ಲಿ ಪಾಕಿಸ್ತಾನದ ಎದುರು ಆಡದೇ ಇಡೀ ಟೂರ್ನಿಯನ್ನೇ ಬಿಟ್ಟು ಕೊಟ್ಟ ಬಿಸಿಸಿಐ ಕ್ರಮವನ್ನೂ ಕ್ರೀಡಾಪ್ರೇಮಿಗಳು ಬೆಂಬಲಿಸಿದ್ದರು. ಆದರೆ ದುಬೈನಲ್ಲಿ ನಡೆಯು ತ್ತಿರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪುರುಷ ತಂಡ ಕಣ ಕ್ಕಿಳಿಯಲು ಅನುಮತಿ ನೀಡಿದ ಬಿಸಿಸಿಐ ಕ್ರಮ ಮತ್ತು ಇದಕ್ಕೆ ಅನುಮತಿಸಿದ ಕೇಂದ್ರದ ನಡೆ ದೇಶಾ ದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Vishwavani Editorial: ಬೇಲಿಯೇ ಹೊಲವನ್ನು ಮೇಯ್ದರೆ!

ಆರಂಭದಲ್ಲಿ ಪಂದ್ಯವನ್ನೇ ಬಹಿಷ್ಕರಿಸಲು ಹಕ್ಕೊತ್ತಾಯ ಕೇಳಿ ಬಂದಿತ್ತು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಕಟೆಕಟೆ ಏರಿತ್ತು. ಪಂದ್ಯಕ್ಕೆ ತಡೆ ನೀಡಲು ಬರುವುದಿಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬಳಿಕ ಪಂದ್ಯ ನಡೆಯಿತು. ಆದರೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸಹಜವಾಗಿರುವ ‘ಬೆಂಬಲ’ ದೇಶದ ಹಲವೆಡೆ ಇರಲಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಮ್ಮೆ ಜಯಭೇರಿ ಬಾರಿಸಿದೆ.

ಆದರೀಗ ಚರ್ಚೆಗೆ ಗ್ರಾಸವಾಗಿರುವುದು ಭಾರತ ತಂಡ ಹಾಗೂ ಆಟಗಾರರ ನಡೆ. ಪಂದ್ಯ ಗೆಲ್ಲು ತ್ತಿದ್ದಂತೆ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರತ್ತ ನೋಡದೇ, ಹಸ್ತಲಾಘವ ಮಾಡದೆ ತಮ್ಮಷ್ಟಕ್ಕೆ ತಾವು ಪೆವಿಲಿಯನ್‌ನತ್ತ ನಡೆದಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಂದ್ಯದ ಟಾಸ್ ವೇಳೆ ಪಾಕ್ ನಾಯಕನನ್ನು ನೋಡದಿರುವ ಮೂಲಕ, ಪಂದ್ಯದ ವೇಳೆ ಪಾಕಿಸ್ತಾನದ ಯಾವುದೇ ಆಟಗಾರರ ಜತೆ ಸಂವಹನ ನಡೆಸದೇ ಭಾರತೀಯ ಆಟಗಾರರು ಉಗ್ರ ಪೋಷಕ ರಾಷ್ಟ್ರ ದ ವಿರುದ್ಧ ಭಾರತೀಯರ ಆಕ್ರೋಶವನ್ನು ತೋರ್ಪಡಿಸಿದ್ದಾರೆ.

ಭಾರತೀಯ ಆಟಗಾರರ ಈ ನಡೆ ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಪಾಕ್ ಆಕ್ಷೇಪಿಸಿದೆ. ಆದರೆ ಮಾನವೀಯತೆಗೆ ಬೆಲೆ ಕೊಡದ ರಾಷ್ಟ್ರದ ಜತೆ ಕ್ರೀಡಾ ಸ್ಪೂರ್ತಿ ಮೆರೆಯುವ ಅಗತ್ಯವಿಲ್ಲ. ದೇಶದ ರಕ್ಷಣೆ, ಹಿತಾಸಕ್ತಿ, ಅಖಂಡತೆ ಎಲ್ಲವನ್ನೂ ಮೀರಿದ್ದು. ಈ ಸಂದೇಶವನ್ನು ಭಾರತೀಯ ತಂಡ ರವಾನಿಸಿದೆ.