ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ದಾಖಲೆ ಬರೆದ ಪ್ರಧಾನಿ

ಮನೆಮನೆಗೂ ವಿದ್ಯುತ್ ಹಾಗೂ ಅಡುಗೆ ಅನಿಲ ಕಲ್ಪಿಸುವ ಕಾರ್ಯದಲ್ಲಿ ಭಾರಿ ಪ್ರಗತಿ ಆಗಿದೆ. ಹೆದ್ದಾರಿಗಳು ಹಾಗೂ ರೈಲ್ವೆ ಜಾಲಗಳು ಸಾಕಷ್ಟು ವಿಸ್ತರಿಸಿದ್ದು, ಮೂಲ ಸೌಕರ‍್ಯದಲ್ಲಿ ಪ್ರಗತಿ ಯಾಗಿದೆ. ಭಾರತ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ವಹಿಸಿಕೊಂಡಿದ್ದು, ಸೌರ ಶಕ್ತಿ ಉತ್ಪಾದನೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ.

Vishwavani Editorial: ದಾಖಲೆ ಬರೆದ ಪ್ರಧಾನಿ

-

Profile
Ashok Nayak Jun 10, 2026 9:41 AM

ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ಪದವಿಯಲ್ಲಿ ದಾಖಲೆ ಬರೆದಿದ್ದಾರೆ. ಹುದ್ದೆಯಲ್ಲಿ 12 ವರ್ಷ ಪೂರೈಸಿ ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರನ್ನು ಮೀರಿಸಿ ಅತಿ ದೀರ್ಘ ಕಾಲ ದೇಶವನ್ನಾಳಿದ ಪ್ರಧಾನಿ ಎನಿಸಿಕೊಂಡಿದ್ದಾರೆ. ಅವರ ಆಡಳಿತದ ಕಾಲ ಭಾರತದ ಉನ್ನತಿಯ ಕಾಲ ಎನ್ನಲು ಅಡ್ಡಿಯಿಲ್ಲ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ತಮ್ಮ ಧ್ಯೇಯಮಂತ್ರವನ್ನು ನನಸಾಗಿಸುವ, ವಿಕಸಿತ ಭಾರತದತ್ತ ಹೆಜ್ಜೆ ಹಾಕುವ ನಡಿಗೆಯಲ್ಲಿ ಅವರು ವಿಚಲಿತರಾಗಿಲ್ಲ. ಅವರ ಡಿಜಿಟಲ್ ಇಂಡಿಯಾ ಕನಸು ಬಹುತೇಕ ಸಾಕಾರಗೊಳ್ಳುತ್ತಿದೆ.

ಮನೆಮನೆಗೂ ವಿದ್ಯುತ್ ಹಾಗೂ ಅಡುಗೆ ಅನಿಲ ಕಲ್ಪಿಸುವ ಕಾರ್ಯದಲ್ಲಿ ಭಾರಿ ಪ್ರಗತಿ ಆಗಿದೆ. ಹೆದ್ದಾರಿಗಳು ಹಾಗೂ ರೈಲ್ವೆ ಜಾಲಗಳು ಸಾಕಷ್ಟು ವಿಸ್ತರಿಸಿದ್ದು, ಮೂಲ ಸೌಕರ‍್ಯ ದಲ್ಲಿ ಪ್ರಗತಿಯಾಗಿದೆ. ಭಾರತ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ವಹಿಸಿ ಕೊಂಡಿದ್ದು, ಸೌರಶಕ್ತಿ ಉತ್ಪಾದನೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Vishwavani Editorial: ಕಿರಿಯ ಪ್ರತಿಭೆಗಳ ಮಿಂಚು

‘ಮೇಕ್ ಇನ್ ಇಂಡಿಯಾ’ವನ್ನು ಪ್ರಮುಖ ಹಂತಕ್ಕೆ ಕೊಂಡೊಯ್ದು ಶೇ.65ರಷ್ಟು ರಕ್ಷಣಾ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದಿಸಿ, ಬಹಳಷ್ಟನ್ನು ರಫ್ತು ಮಾಡುತ್ತಿದೆ. ವೈಜ್ಞಾ ನಿಕವಾಗಿ ಇಸ್ರೋದ ಸಾಹಸಗಳು ಗಮನ ಸೆಳೆದಿವೆ. ಆದರೆ ಮೋದಿಯವರ ಆಡಳಿತ ಟೀಕೆ, ವಿಮರ್ಶೆಗಳಿಂದ ಹೊರತಾಗಿಲ್ಲ. ಅಮೆರಿಕ- ಇಸ್ರೇಲ್- ಇರಾನ್ ಯುದ್ಧದ ಸಂದರ್ಭದಲ್ಲಿ ಭಾರತದ ಹಿತಾಸಕ್ತಿಯನ್ನು ನಿಭಾಯಿಸಲು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂಬ ಟೀಕೆ ಇದೆ.

ಸುಸ್ಥಿರ ಇಂಧನದ ಮೂಲಕ ಸ್ವಾವಲಂಬನೆ ಸಾಧಿಸಬೇಕು, ಇ-ವಾಹನ ಪ್ರಗತಿ ಸಾಧಿಸಬೇಕು ಎಂಬ ಮಾತು ಮಾತಾಗಿಯಷ್ಟೇ ಉಳಿದಿದೆ. ಜಿಎಸ್‌ಟಿಯಲ್ಲಿ ತಮ್ಮ ಪಾಲನ್ನು ಕೊಡಿ ಎಂಬ ರಾಜ್ಯಗಳ ಅಹವಾಲನ್ನು ಕೇಂದ್ರ ಕೇಳಿಸಿಕೊಂಡಿಲ್ಲ. ಡಿಮಾನಿಟೈಸೇಷನ್ ತಂದ ರೀತಿ ಹಾಗೂ ಕೊರೊನಾ ಕಾಲವನ್ನು ನಿಭಾಯಿಸಿದ ರೀತಿಯ ಬಗ್ಗೆ ಕಟು ಟೀಕೆಗಳಿವೆ.

ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ. ಮಣಿಪುರದಲ್ಲಿ ಆಂತರಿಕ ದಂಗೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ನೀಟ್‌ನಂಥ ಉನ್ನತ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ ಯಾಗುತ್ತಿದೆ. ಗಲ್ವಾನ್ ಸಂಘರ್ಷ, ಪುಲ್ವಾಮಾ ದಾಳಿ, ಪೆಹಲ್ಗಾಂ ದಾಳಿ ಇತ್ಯಾದಿಗಳ ಸಂದರ್ಭದಲ್ಲಿ ಭಾರತದ ಭದ್ರತೆ ಪ್ರಶ್ನೆಗೊಳಗಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ವಿದೇಶಿ ವಿನಿಮಯ ಸಂಗ್ರಹ ಸಾಕಷ್ಟಿಲ್ಲ. ಆಪರೇಶನ್ ಸಿಂದೂರ್ ಬಗ್ಗೆ ಸ್ಪಷ್ಟ ಚಿತ್ರಣ ನೀಡಿಲ್ಲ. ಇವುಗಳಿಗೆಲ್ಲ ನರೇಂದ್ರ ಮೋದಿಯವರು ಇನ್ನಷ್ಟು ಉತ್ತರದಾಯಿ ಯಾಗಿ ಸ್ಪಂದಿಸಿದರೆ ಚೆನ್ನಾಗಿರುತ್ತದೆ.