ಬೀದಿ ನಾಯಿಯನ್ನು ಕೊಂದ ವ್ಯಕ್ತಿಯ ಬಂಧನ
shivamogga crime: ಪರವಾನಿಗೆ ಇಲ್ಲದ ಬಂದೂಕಿನಿಂದ ಬೀದಿ ನಾಯಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದಿದೆ. ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದ ನಿವಾಸಿ ಲಿಂಗಮೂರ್ತಿ ಬಂಧಿತ ಆರೋಪಿಯ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.