ಅಂತಿಮ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; ಪಂದ್ಯದಿಂದ ಹೊರಬಿದ್ದ ಬೆನ್ ಸ್ಟೋಕ್ಸ್
ಭಾರತ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಡ್ರಾ ಮಾಡಿಕೊಂಡ ಹನ್ನೊಂದು ತಂಡದಲ್ಲಿ ವೇಗಿಗಳಾದ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ ಮತ್ತು ಸ್ಪಿನ್ನರ್ ಲಿಯಾಮ್ ಡಾಸನ್ ಕೂಡ ಸ್ಥಾನ ಪಡೆದಿಲ್ಲ. ಜಾಕೋಬ್ ಬೆಥೆಲ್ ಅವರನ್ನು ತಂಡದಲ್ಲಿ ಸೇರಿಸಲಾಗಿದ್ದು, ಅವರಿಗೆ 6ನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಲಾಗಿದೆ.

ಲಂಡನ್: ಭಾರತ ವಿರುದ್ಧ ಗುರುವಾರ ಆರಂಭಗೊಳ್ಳಲಿರುವ 5ನೇ(IND vs ENG 5th Test) ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes ) ಭುಜದ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಓಲಿ ಪೋಪ್(Ollie Pope) ತಂಡವನ್ನು ಮುನ್ನಡೆಸಲಿದಾರೆ.
ಸ್ಟೋಕ್ಸ್ ಗಾಯಗೊಂಡ ಕಾರಣದಿಂದಲೇ ಆಲ್‌ರೌಂಡರ್ ಆಗಿರುವ ಜೇಮೀ ಓವರ್ಟನ್ ಅವರನ್ನು 5ನೇ ಪಂದ್ಯಕ್ಕೂ ಮುನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ ಓವರ್ಟನ್ ಆಡುವ ಬಳಗದಲ್ಲಿಯೂ ಸ್ಥಾನ ಪಡೆದಿದ್ದಾರೆ. ಸ್ಟೋಕ್ಸ್ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗುದರಲ್ಲಿ ಯಾವುದೇ ಅನುಮಾನ ಬೇಡ.
ಭಾರತ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಡ್ರಾ ಮಾಡಿಕೊಂಡ ಹನ್ನೊಂದು ತಂಡದಲ್ಲಿ ವೇಗಿಗಳಾದ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ ಮತ್ತು ಸ್ಪಿನ್ನರ್ ಲಿಯಾಮ್ ಡಾಸನ್ ಕೂಡ ಸ್ಥಾನ ಪಡೆದಿಲ್ಲ. ಜಾಕೋಬ್ ಬೆಥೆಲ್ ಅವರನ್ನು ತಂಡದಲ್ಲಿ ಸೇರಿಸಲಾಗಿದ್ದು, ಅವರಿಗೆ 6ನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಲಾಗಿದೆ.
5ನೇ ಪಂದ್ಯಕ್ಕೆ ಇಂಗ್ಲೆಂಡ್ ಆಡುವ ಬಳಗ
ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವೀ.ಕಿ.), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್, ಜೋಶ್ ಟಂಗ್.
ಇದನ್ನೂ ಓದಿ IND vs ENG: ಭಾರತಕ್ಕೆ ಓವಲ್‌ನಲ್ಲಿ ಗೆಲುವು ಒಲಿದರಷ್ಟೇ ಸರಣಿ ಸಮಬಲ