ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Hundred: ದಿ ಹಂಡ್ರೆಡ್‌ ಕ್ರಿಕೆಟ್‌ ಲೀಗ್‌ಗೂ ಕಾಲಿಟ್ಟ ಐಪಿಎಲ್‌ ಫ್ರಾಂಚೈಸಿ

"ದಿ ಹಂಡ್ರೆಡ್" ಎನ್ನುವುದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆಯೋಜಿಸಲಾದ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇದನ್ನು ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಆಯೋಜಿಸಿದೆ. ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತವೆ. ಮಹಿಳಾ ಮತ್ತು ಪುರುಷರ ತಂಡಗಳು ಒಳಗೊಂಡಿದೆ

ದಿ ಹಂಡ್ರೆಡ್‌ ಕ್ರಿಕೆಟ್‌ ಲೀಗ್‌ಗೂ ಕಾಲಿಟ್ಟ ಐಪಿಎಲ್‌ ಫ್ರಾಂಚೈಸಿ

Profile Abhilash BC Jul 31, 2025 12:55 PM

ಲಂಡನ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಫ್ರಾಂಚೈಸಿಗಳು(ipl franchise) ಜಾಗತಿಕವಾಗಿ ವಿಸ್ತರಿಸುತ್ತಿವೆ. ಈಗಾಗಲೇ SA20, CPL, ಮತ್ತು ILT20 ನಂತಹ T20 ಲೀಗ್‌ಗಳಲ್ಲಿ ಹೂಡಿಕೆ ಮಾಡುತ್ತಿರುವ ಫ್ರಾಂಚೈಸಿಗಳು ಇದೀಗ ಇಂಗ್ಲೆಂಡ್‌ನ ಪ್ರತಿಷ್ಠಿತ 'ದಿ ಹಂಡ್ರೆಡ್‌'(The Hundred) ಕ್ರಿಕೆಟ್‌ ಲೀಗ್‌ನಲ್ಲಿ ತಂಡಗಳ ಪಾಲುದಾರಿಕೆ ಪಡೆದಿವೆ. ಇದನ್ನು ಹಂಡ್ರೆಡ್‌ ಆಯೋಜಕರಾದ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ದೃಢಪಡಿಸಿದೆ.

ನಾಲ್ಕು ಫ್ರಾಂಚೈಸಿಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ನಾರ್ಥರ್ನ್‌ ಸೂಪರ್‌ ಚಾರ್ಜಸ್‌ ತಂಡದ ಶೇ.100 ಮಾಲಿಕತ್ವ ಪಡೆದಿದೆ. ಉಳಿದಂತೆ ಜಿಎಂಆರ್‌ ಗ್ರೂಫ್‌(ಡೆಲ್ಲಿ ಕ್ಯಾಪಿಟಕ್ಸ್‌) ಸದರ್ನ್‌ ಬ್ರೇವ್‌ ತಂಡದ ಶೇ.49ರಷ್ಟು ಶೇರು ಖರೀದಿಸಿದೆ. ಆರ್‌ಪಿಜಿಎಸ್‌ ಗ್ರೂಪ್‌(ಲಕ್ನೋ ಸೂಪರ್‌ ಜೈಂಟ್ಸ್‌) ಮ್ಯಾಂಚೆಸ್ಟರ್‌ ಒರಿಜಿನಲ್ಸ್‌ನ ಶೇ.70 ಪಾಲುದಾರಿಕೆ ಪಡೆದಿದೆ.

ರಿಲಯನ್ಸ್‌ ಗ್ರೂಪ್‌(ಮುಂಬೈ ಇಂಡಿಯನ್ಸ್‌) ಓವಲ್‌ ತಂಡ ಶೇ.49ರಷ್ಟು ಪಾಲು ಪಡೆದಿದೆ. ಸದ್ಯ ಇರದ ಒಪ್ಪಂದ ಮಾತುಕತೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. "ದಿ ಹಂಡ್ರೆಡ್" ಎನ್ನುವುದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆಯೋಜಿಸಲಾದ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇದನ್ನು ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಆಯೋಜಿಸಿದೆ. ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತವೆ. ಮಹಿಳಾ ಮತ್ತು ಪುರುಷರ ತಂಡಗಳು ಒಳಗೊಂಡಿದೆ. ಭಾರತೀಯ ಆಟಗಾರರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯ ಟೂರ್ನಿ ಆಗಸ್ಟ್‌ 5ಕ್ಕೆ ಆರಂಭಗೊಳ್ಳಲಿದೆ.

ಇದನ್ನೂ ಓದಿ IND vs ENG 5th Test: ಭಾರತ ಪರ 4 ಬದಲಾವಣೆ ಸಾಧ್ಯತೆ; ಕರುಣ್‌ಗೆ ಮತ್ತೊಂದು ಅವಕಾಶ

"ಈ ತಂಡ ನಿಮ್ಮದೇ, ಆರೆಂಜ್ ಆರ್ಮಿ," ಎಂದು SRH ನ ಅಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳು ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಾರನ್ ಹೇಳಿದ್ದಾರೆ. "ಇಂಗ್ಲೆಂಡ್ ಯಾವಾಗಲೂ ಕ್ರಿಕೆಟ್‌ನ ಶಕ್ತಿ ಕೇಂದ್ರವಾಗಿದೆ. ಆದ್ದರಿಂದ ಅವರು ಹೂಡಿಕೆಗೆ ತೆರೆದಾಗ, ಅವರ ಕ್ರಿಕೆಟ್ ಪರಂಪರೆಯ ಭಾಗವಾಗುವುದು ಸ್ಪಷ್ಟ ಆಯ್ಕೆಯಾಗಿತ್ತು" ಎಂದು ಮಾರನ್‌ ತಿಳಿಸಿದ್ದಾರೆ.