ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಸಾತ್ವಿಕ್-ಚಿರಾಗ್ ಜೋಡಿ; ಸೋತು ಹೊರಬಿದ್ದ ಪ್ರಣಯ್
ದಿನದ ಮಹಿಳಾ ಸಿಂಗಲ್ಸ್ ವಿಭಾಗದ ಫ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇಶವಾಸಿಗಳಾದ ಪಿ.ವಿ. ಸಿಂಧು ಮತ್ತು ಉನ್ನತಿ ಹೂಡಾ ಮುಖಾಮುಖಿಯಾಗಲಿದಾರೆ. ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಟೊಮೋಕಾ ಮಿಯಝಾಕಿ ಅವರನ್ನು 21-15, 8-21, 21-17ರಿಂದ ಪರಾಭವಗೊಳಿಸಿದ್ದರು.


ಗ್ವಾಂಗ್‌ಝೊ (ಚೀನಾ): ಗುರುವಾರ ನಡೆದ ಚೀನಾ ಓಪನ್ ಸೂಪರ್ 1000 ಟೂರ್ನಮೆಂಟ್‌ನಲ್ಲಿ(China Open) ಭಾರತದ ಅಗ್ರಮಾನ್ಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ(Satwik-Chirag) ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್(HS Prannoy) ಸೋತು ತಮ್ಮ ಸವಾಲು ಮುಗಿಸಿದ್ದಾರೆ.
ಚಾಂಗ್‌ಝೌನಲ್ಲಿ ನಡೆದ ಫ್ರೀ ಕ್ವಾರ್ಟರ್ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೇರಿಕೊಂಡು ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೋ ಮತ್ತು ಬಾಗಸ್ ಮೌಲಾನಾ ಅವರನ್ನು 21-19, 21-19 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು. ಪಂದ್ಯ 46 ನಿಮಿಷಗಳಲ್ಲಿ ಅಂತ್ಯ ಕಂಡಿತು.
ವಿಶ್ವದ 9 ನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ ನಿರಾಶಾದಾಯಕ ಪ್ರದರ್ಶನ ತೋರುವ ಮೂಲಕ ಸೋಲು ಕಂಡರು. ಅವರು ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧದ ಹೋರಾಟದಲ್ಲಿ ಸೋತರು. ಮೊದಲ ಗೇಮ್‌ನಲ್ಲಿ 21-18 ಅಂತರದಿಂದ ಗೆದ್ದ ಪ್ರಣಯ್ ಆ ಬಳಿಕ ಸಂಪೂರ್ಣ ಲಯ ಕಳೆದುಕೊಂಡರು. ಎದುರಾಳಿ ಆಟಗಾರ ಹಲವು ತಪ್ಪುಗಳಿಂದಲೇ ಅಂಕ ಗಳಿಸಿದ ಪ್ರಣಯ್ ಸತತ ಎರಡು ಗೇಮ್ ಸೋತು ಹೊರಬಿದ್ದರು. ಸೋಲಿನ ಅಂತರ 21-18, 15-21, 8-21. ಪ್ರಣಯ್ ಅವರ ನಿರ್ಗಮನವು ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನವನ್ನು ಕೊನೆಗೊಳಿಸಿತು.
ಇದನ್ನೂ ಓದಿ IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!
ದಿನದ ಮಹಿಳಾ ಸಿಂಗಲ್ಸ್ ವಿಭಾಗದ ಫ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇಶವಾಸಿಗಳಾದ ಪಿ.ವಿ. ಸಿಂಧು ಮತ್ತು ಉನ್ನತಿ ಹೂಡಾ ಮುಖಾಮುಖಿಯಾಗಲಿದಾರೆ. ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಟೊಮೋಕಾ ಮಿಯಝಾಕಿ ಅವರನ್ನು 21-15, 8-21, 21-17ರಿಂದ ಪರಾಭವಗೊಳಿಸಿದ್ದರು. 17 ವರ್ಷದ ಉನ್ನತಿ ಹೂಡಾ ಸ್ಕಾಟ್ಲೆಂಡ್‌ನ ಕಿಸ್ಟಿ ಗಿಲ್ಮೋರ್ ಅವರನ್ನು 21-11, 21-16 ಅಂತರದಿಂದ ಮಣಿಸಿದ್ದರು.