IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!
IND vs ENG: ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಕರುಣ್ ನಾಯರ್ ಅವರನ್ನು ಕೈ ಬಿಡಲಾಗಿದೆ. ಅವರ ಸ್ಥಾನಕ್ಕೆ ಸಾಯಿ ಸುದರ್ಶನ್‌ಗೆ ಅವಕಾಶವನ್ನು ನೀಡಲಾಗಿದೆ. ಇದೀಗ ಕರುಣ್ ನಾಯರ್ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ನಾಲ್ಕನೇ ಟೆಸ್ಟ್ ಪಂದ್ಯದಿಂದ ಕರುಣ್ ನಾಯರ್ ಅವರನ್ನು ಕೈ ಬಿಡಲಾಗಿದೆ.

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ (IND vs ENG) ಜುಲೈ 23 ರಂದು ಬುಧವಾರ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಭಾರತ ತಂಡ ತನ್ನ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆಗಳನ್ನು ಮಾಡಿಕೊಂಡಿದೆ. ಔಟ್ ಆಫ್ ಫಾರ್ಮ್ ಕರುಣ್ ನಾಯರ್ ಸ್ಥಾನಕ್ಕೆ ಸಾಯಿ ಸುದರ್ಶನ್‌ಗೆ ಅವಕಾಶವನ್ನು ನೀಡಲಾಗಿದೆ. ಗಾಯಾಳುಗಳಾದ ನಿತೀಶ್‌ಕುಮಾರ್ ರೆಡ್ಡಿ ಹಾಗೂ ಆಕಾಶ್ ದೀಪ್ ಅವರ ಸ್ಥಾನಗಳಿಗೆ ಕ್ರಮವಾಗಿ ಶಾರ್ದುಲ್ ಠಾಕೂರ್ ಹಾಗೂ ಅನ್ಶುಲ್ ಕಾಂಬೋಜ್‌ಗೆ ಪ್ಲೇಯಿಂಗ್ Xiಗೆ ಬಂದಿದ್ದಾರೆ. ಅಂದ ಹಾಗೆ ಕರುಣ್ ನಾಯರ್‌ಗೆ ಅವಕಾಶ ನೀಡದ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನು ನಡೆಸುತ್ತಿದ್ದಾರೆ.
2017ರಲ್ಲಿ ಕರುಣ್ ನಾಯರ್ ಭಾರತ ತಂಡದ ಪರ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿ ದಾಖಲೆಯನ್ನು ಬರೆದಿದ್ದರು. ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಆದರೆ, ಅವರು ನಂತರದ ಪಂದ್ಯಗಳಲ್ಲಿ ವಿಫಲರಾದ ಕಾರಣ ತಂಡದಿಂದ ಕೈ ಬಿಡಲಾಗಿತ್ತು.
IND vs ENG: ತಮ್ಮ ವೇಗದ ಎಸೆತದ ಮೂಲಕ ಯಶಸ್ವಿ ಜೈಸ್ವಾಲ್ ಬ್ಯಾಟ್ ಮುರಿದ ಕ್ರಿಸ್ ವೋಕ್ಸ್!
2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡದ ಪರ ಆಡಿದ್ದ 16 ಇನಿಂಗ್ಸ್‌ಗಳಿಂದ 53.93ರ ಸರಾಸರಿಯಲ್ಲಿ 863 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ನಾಲ್ಕು ಶತಕಗಳು ಹಾಗೂ ಎರಡು ಅರ್ಧಶತಕಗಳನ್ನು ಕೂಡ ಗಳಿಸಿದ್ದರು. ನಂತರ ಇದೇ ಲಯವನ್ನು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ಮುಂದುವರಿಸಿ ಎಂಟು ಇನಿಂಗ್ಸ್‌ಗಳಿಂದ 779 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಐದು ಶತಕಗಳು ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದರು. ಅಲ್ಲದೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿಯೂ ದ್ವಿಶತಕವನ್ನು ಗಳಿಸಿದ್ದರು. ಇದರ ಫಲವಾಗಿ ಅವರು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶವನ್ನು ಪಡೆದಿದ್ದರು.
Today was Shubman Gill's chance to back karun who was down but deserved one more chance. He should have picked Karun Nair. Chance missed to earn the respect when it comes to making tough decisions as a leader.
— Mohammad Kaif (@MohammadKaif) July 23, 2025
ಆದರೆ, ಭಾರತ ತಂಡದ ಪರ ಇಂಗ್ಲೆಂಡ್ ಪ್ರವಾಸದ ಮೂರು ಟೆಸ್ಟ್ ಪಂದ್ಯಗಳ ಆರು ಇನಿಂಗ್ಸ್‌ಗಳಿಂದ ಕರುಣ್ ನಾಯರ್ ಗಳಿಸಿದ್ದು ಕೇವಲ 131 ರನ್‌ಗಳನ್ನು ಗಳಿಸಿದ್ದರು. ಅವರು ಕೆಲ ಇನಿಂಗ್ಸ್‌ಗಳಲ್ಲಿ ಉತ್ತಮ ಆರಂಭ ಪಡೆದರೂ ಇದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಇದನ್ನೇ ಮಾಜಿ ಕ್ರಿಕೆಟಿಗರು ಕೂಡ ಹೇಳಿದ್ದರು. ಒಂದು ಕಾಲದಲ್ಲಿ ಆತ್ಮೀಯ ಕ್ರಿಕೆಟ್...ಮತ್ತೊಂದು ಅವಕಾಶ ಕೊಡು ಎಂದು ಮನವಿ ಮಾಡಿದ್ದ ಕರುಣ್ ನಾಯರ್, ಇದೀಗ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಕೈ ಚೆಲ್ಲಿಕೊಂಡಿದ್ದಾರೆ. ಅದರಂತೆ ನಾಲ್ಕನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ XIನಿಂದ ಹೊರ ನಡೆದಿದ್ದಾರೆ.
Shri Karun Nair Ji has got many opportunities to serve our country in various capacities, including as number 3 for India. Wishing him good health.
— Varun (@wizardrincewind) July 23, 2025
ಕರುಣ್ ನಾಯರ್ ಬಗ್ಗೆ ಅಭಿಮಾನಿಗಳು ಪ್ರತಿಕ್ರಿಯೆ
"ಕರುಣ್ ನಾಯರ್ ಅವಕಾಶವನ್ನು ಪಡೆದಿದ್ದರು ಹಾಗೂ ಆತ್ಮೀಯ ಟೆಸ್ಟ್ ಕ್ರಿಕೆಟ್ ಅವರನ್ನು ಮತ್ತೊಮ್ಮೆ ಕೈ ಬಿಟ್ಟಿದೆ!!! ಅದು ಅವಮಾನಕರ ಸಂಗತಿ, ಅವರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿಲ್ಲ," ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾರೆ.
1. Shubman Gill missed the opportunity to support Karun Nair, who deserved another chance.
— BharatRashtraVoice✊🚩 (@Quantum_akr) July 23, 2025
2. This decision could have earned him respect as a leader in making tough choices.
"ಪತ್ರಿಕಾಗೋಷ್ಠಿಯಲ್ಲಿ ಕರುಣ್ ನಾಯರ್ ಅವರನ್ನು ಬೆಂಬಲಿಸಿದ ಹೊರತಾಗಿಯೂ ಅವರನ್ನು ಕೈ ಬಿಡಲಾಗಿದೆ. ಆದರೆ, ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ," ಎಂದು ಮತ್ತೊಬ್ಬ ಅಭಿಮಾನಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
"ಇಂದು ಶುಭಮನ್ ಗಿಲ್ ಅವರಿಗೆ ಕರುಣ್ ಅವರನ್ನು ಬೆಂಬಲಿಸುವ ಅವಕಾಶ ಸಿಕ್ಕಿತ್ತು, ಅವರು ವಿಫಲರಾಗಿದ್ದಾರೆ. ಆದರೆ ಇನ್ನೊಂದು ಅವಕಾಶಕ್ಕೆ ಅವರು ಅರ್ಹರಾಗಿದ್ದರು. ಶುಭಮನ್ ಗಿಲ್, ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಬೇಕಿತ್ತು. ನಾಯಕನಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೌರವ ಗಳಿಸುವ ಅವಕಾಶ ತಪ್ಪಿಹೋಯಿತು," ಎಂದು ಮೊಹಮ್ಮದ್ ಕೈಪ್ ಟ್ವೀಟ್ ಮಾಡಿದ್ದಾರೆ.