IND vs PAK: ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆಯ ವಿವರ!
IND vs PAK Match Preview: ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟಂಬರ್ 14 ರಂದು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

2025ರ ಏಷ್ಯಾ ಕಪ್ ಪಂದ್ಯಕ್ಕೆ ಭಾರತ-ಪಾಕಿಸ್ತಾನ ಸಜ್ಜು. -

ದುಬೈ: ಯುಎಇ ವಿರುದ್ದ 9 ವಿಕೆಟ್‌ಗಳ ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಭಾರತ (India) ತಂಡ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ದ ಕಠಿಣ ಸವಾಲು ಎದುರಾಗಲಿದೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಏಷ್ಯಾ ಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ (IND vs PAK) ಉಭಯ ತಂಡಗಳು ಕಾದಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಗುಂಪು ಹಂತದ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಬಿಟ್ಟರೆ ಇನ್ನುಳಿದ ಯಾವುದೇ ತಂಡದಿಂದ ಕಠಿಣ ಸವಾಲು ಎದುರಾಗುವುದಿಲ್ಲ. ಪಾಕ್ ಎದುರು ಗೆದ್ದರೆ ಭಾರತ ಸುಲಭವಾಗಿ ಸೂಪರ್ 4ಕ್ಕೆ ಪ್ರವೇಶ ಮಾಡಲಿದೆ.
ಸೆಪ್ಟಂಬರ್ 10 ರಂದು ಇದೇ ಅಂಗಣದಲ್ಲಿ ಭಾರತ ತಂಡ, ಕ್ರಿಕೆಟ್ ಶಿಶು ಯುಎಇ ವಿರುದ್ಧ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಯುಎಇ ತಂಡ, ಕೇವಲ 57 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಕುಲ್ದೀಪ್ ಯಾದವ್ 4 ವಿಕೆಟ್ ಕಿತ್ತಿದ್ದರೆ, ಶಿವಂ ದುಬೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ, 4.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತ್ತು.
Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್ ಗಿಲ್!
ಇನ್ನು ಪಾಕಿಸ್ತಾನ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಒಮನ್ ವಿರುದ್ದ 93 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಲ್ಮಾನ್ ಅಘಾ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಒಮನ್ ತಂಡ 67 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಪಾಕ್ ಪರ ಮೊಹಮ್ಮದ್ ಹ್ಯಾರಿಸ್ ಅವರು 43 ಎಸೆತಗಳಲ್ಲಿ 66 ರನ್‌ಗಳನ್ನು ಕಲೆ ಹಾಕಿದ್ದರು. ಸೈಯಮ್ ಆಯುಬ್, ಸೂಫಿಯನ್ ಮುಖೀಮ್ ಹಾಗೂ ಫಹೀಮ್ ಅಶ್ರಫ್ ಅವರು ತಲಾ ಎರಡೆರಡು ವಿಕೆಟ್ ಕಿತ್ತಿದ್ದರು.
ಟಿ20ಐ ಸ್ವರೂಪದಲ್ಲಿ ಇತ್ತೀಚೆಗೆ ಭಾರತ ತಂಡ ಅತ್ಯುತ್ತಮ ಫಾರ್ಮ್ ಅನ್ನು ಹೊಂದಿದೆ. ಹಾಗಾಗಿ ಪಾಕಿಸ್ತಾನ ಎದುರು ಭಾರತ ತಂಡ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕೆ ಇಳಿಯಲಿದೆ. ಆದರೆ, ಪಾಕಿಸ್ತಾನ ತಂಡ ಅತ್ಯಂತ ಅಪಾಯಕಾರಿ ತಂಡಬವಾಗಿದ್ದು, ಟೀಮ್ ಇಂಡಿಯಾ ಬಹಳಾ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
Asia Cup 2025: ತಾವು ಖರೀದಿಸಿದ ಮೊಟ್ಟ ಮೊದಲ ಕಾರು ಯಾವುದೆಂದು ರಿವೀಲ್ ಮಾಡಿದ ಶುಭಮನ್ ಗಿಲ್!
ಪಂದ್ಯದ ವಿವರ
ಭಾರತ vs ಪಾಕಿಸ್ತಾನ
ಏಷ್ಯಾ ಕಪ್ 2025
ದಿನಾಂಕ: ಸೆಪ್ಟಂಬರ್ 14, 2025
ಸಮಯ: ರಾತ್ರಿ: 08: 00
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ಸ್
ಪಿಚ್ ರಿಪೋರ್ಟ್
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುವ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಂಯೋಜನೆಯನ್ನು ಹೊಂದಿದೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಇರಲಿದೆ. ಒಮ್ಮೆ ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡ ಬಳಿಕ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಹೊಸ ಬ್ಯಾಟ್ಸ್‌ಮನ್‌ಗಳು ಪಿಚ್‌ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ನಾಯಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳಬಹುದು.
Asia Cup 2025: ಪಾಕ್ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ
ಮುಖಾಮುಖಿ ದಾಖಲೆ
ಒಟ್ಟು ಆಡಿದ ಪಂದ್ಯಗಳು: 13
ಭಾರತದ ಗೆಲುವು: 10
ಪಾಕಿಸ್ತಾನದ ಗೆಲುವು: 03
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿ,ಕೀ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ಪಾಕಿಸ್ತಾನ: ಸಹಿಝಾದ್ ಫರ್ಹಾನ್, ಸೈಯಮ್ ಆಯುಬ್, ಮೊಹಮ್ಮದ್ ಹ್ಯಾರಿಸ್ (ವಿ.ಕೀ), ಫಖಾರ್ ಝಮಾನ್, ಸಲ್ಮಾನ್ ಅಲಿ ಅಘಾ (ನಾಯಕ), ಹಸನ್ ನವಾಝ್, ಮೊಹಮ್ಮದ್ ನವಾಝ್, ಫಹೀಮ್ ಅಶ್ರಫ್, ಶಾಹೀನ್ ಶಾ ಅಫ್ರಿದಿ, ಸೂಫಿಯನ್ ಮುಖೀಮ್, ಅಬ್ರಾರ್ ಅಹ್ಮದ್