ವಿಮಾನವನ್ನು ಹೊಡೆದುರುಳಿಸಿದ ಸನ್ನೆಯ ಮೂಲಕ ಹ್ಯಾರಿಸ್ ರೌಫ್‌ಗೆ ತಿರುಗೇಟು ಕೊಟ್ಟ ಬುಮ್ರಾ!
2025ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದದ್ವು. ಈ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು. ಅಂದ ಹಾಗೆ ಈ ಪಂದ್ಯದಲ್ಲಿ ಹ್ಯಾರಿಸ್ ರೌಫ್‌ಗೆ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ತಿರುಗೇಟು ನೀಡಿದ್ದಾರೆ.

ಹ್ಯಾರಿಸ್ ರೌಫ್‌ಗೆ ತಿರುಗೇಟು ಕೊಟ್ಟ ಜಸ್‌ಪ್ರೀತ್ ಬುಮ್ರಾ. -

ದುಬೈ: ಏಷ್ಯಾ ಕಪ್ (Asia Cup 2025 ಟೂರ್ನಿಯ ಸೂಪರ್-4ರ ಪಂದ್ಯದ ವೇಳೆ ಭಾರತ ತಂಡವನ್ನು ಕೆರಳಿಸಲು ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ (Haris Rauf) ವಿಮಾನವನ್ನು ಹೊಡೆದುರುಳಿಸುವ ರೀತಿ ಸನ್ನೆ ಮಾಡಿದ್ದರು. ಭಾರತದೊಂದಿಗಿನ ಇತ್ತೀಚಿನ ಯುದ್ಧದಲ್ಲಿ ಪಾಕಿಸ್ತಾನ ಆರು ರಫೇಲ್ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಅವರು ಇಲ್ಲಿ ಹೇಳಿದಂತಿದೆ. ಆದರೆ, ಈ ಹೇಳಿಕೆ ಇನ್ನೂ ದೃಢಪಟ್ಟಿಲ್ಲ. ಹ್ಯಾರಿಸ್ ರೌಫ್ ಅವರ ಈ ಅವಹೇಳನಕಾರಿ ಸನ್ನೆಗಾಗಿ ಐಸಿಸಿ ದಂಡ ವಿಧಿಸಿತ್ತು ಮತ್ತು ಅವರ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 30 ರಷ್ಟು ದಂಡವನ್ನು ವಿಧಿಸಲಾಗಿತ್ತು. ಆದರೂ, ಏಷ್ಯಾ ಕಪ್ ಫೈನಲ್ ಪಂದ್ಯದ ವೇಳೆ ಜಸ್‌ಪ್ರೀತ್ ಬುಮ್ರಾ (Jasprit Bumrah) ಕೂಡ ಅದೇ ರೀತಿ ಸಂಭ್ರಮಿಸಿದ ಹ್ಯಾರಿಸ್ ರೌಫ್‌ಗೆ ಕೌಂಟರ್ ನೀಡಿದ್ದಾರೆ.
ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ 19ನೇ ಓವರ್ ಅನ್ನು ಜಸ್‌ಪ್ರೀತ್ ಬುಮ್ರಾ ಬೌಲ್ ಮಾಡಿದ್ದರು. ಈ ಓವರ್‌ನ ಐದನೇ ಎಸೆತದಲ್ಲಿ ಹ್ಯಾರಿಸ್ ರೌಫ್ ಸ್ಟ್ರೈಕ್‌ನಲ್ಲಿದ್ದರು. ಬುಮ್ರಾ ಅವರು ಯಾರ್ಕರ್ ಅನ್ನು ಎಸೆದಿದ್ದರು ಹಾಗೂ ಅದನ್ನು ಆಡುವಲ್ಲಿ ಹ್ಯಾರಿಸ್ ರೌಫ್ ಎಡವಿದ್ದರು. ಅಂದರೆ ಸಮಯಕ್ಕೆ ಸರಿಯಾಗಿ ಆ ಚೆಂಡನ್ನು ತಡೆಯುವಲ್ಲಿ ವಿಫಲರಾದರು. ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಕ್ಲೀನ್ ಬೌಲ್ಡ್ ಆಯಿತು. ಈ ವೇಳೆ ಬುಮ್ರಾ, ವಿಮಾನವನ್ನು ಹೊಡೆದುರುಳಿಸಿದ ರೀತಿ ಕೈ ಸನ್ನೆ ಮಾಡಿದರು. ಆ ಮೂಲಕ ಹ್ಯಾರಿಸ್ ರೌಫ್‌ಗೆ ಅವರದೇ ಶೈಲಿಯಲ್ಲಿ ತಿರುಗೇಟು ನೀಡಿದರು. ನಂತರ ಮೊಹಮ್ಮದ್ ನವಾಝ್ ಅವರನ್ನು ಕೂಡ ಬುಮ್ರಾ ಔಟ್ ಮಾಡಿದರು.
IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್ ಗೆದ್ದು ಸಂಭ್ರಮಿಸಿದ ಭಾರತ!
ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಕೊನೆಯ ಓವರ್‌ಗಳಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಪಾಕಿಸ್ತಾನ ತಂಡವನ್ನು 146 ರನ್‌ಗಳಿಗೆ ಆಲ್‌ಔಟ್ ಮಾಡಲು ಭಾರತಕ್ಕೆ ನೆರವು ನೀಡಿದರು. ಆದಾಗ್ಯೂ, ಬೌಲರ್ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಈ ಸಮಯದಲ್ಲಿ ಸಾಹಿಬ್‌ಝಾದ ಫರ್ಹಾನ್ ಟೀಮ್ ಇಂಡಿಯಾ ಬೌಲರ್‌ಗಳನ್ನು ದಂಡಿಸಿದರು. ಅದರಲ್ಲಿಯೂ ವಿಶೇಷವಾಗಿ ಜಸ್‌ಪ್ರೀತ್ ಬುಮ್ರಾ ವಿರದ್ಧವೂ ಪ್ರಾಬಲ್ಯ ಮೆರೆದರು. ಆ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು.
Jasprit Bumrah literally did the Rafael celebration after getting Haris Rauf's wicket 😭🔥
— a (@athahaharv) September 28, 2025
Inject this into my veinsssss. #INDvPAK #IndianCricket #IndiaVsPakistanpic.twitter.com/NQPb2mCdLF
ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಬುಮ್ರಾ ಎಸೆತದಲ್ಲಿ ಫರ್ಹಾನ್ ಸಿಕ್ಸರ್ ಬಾರಿಸಿದ್ದರು. ಇದು ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಬುಮ್ರಾ ವಿರುದ್ಧ ಫರ್ಹಾನ್ ಬಾರಿಸಿದ ಮೂರನೇ ಸಿಕ್ಸರ್ ಆಗಿದೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಬುಮ್ರಾ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸಾಹಿಬ್‌ಝಾದ ಫರ್ಹನ್ ಬರೆದಿದ್ದಾರೆ.
INDIA ARE CHAMPIONS! 🥳
— AsianCricketCouncil (@ACCMedia1) September 28, 2025
🇮🇳 maintain their unbeaten run in the tournament and are deserved champions and Asian Kings! 👑#INDvPAK #DPWorldAsiaCup2025 #Final #ACC pic.twitter.com/vpVdRhsfQs
9ನೇ ಏಷ್ಯಾ ಕಪ್ ಗೆದ್ದ ಭಾರತ
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 147 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, ತಿಲಕ್ ವರ್ಮಾ (69*) ಹಾಗೂ ಶಿವಂ ದುಬೆ (33) ಅವರ ಬ್ಯಾಟಿಂಗ್ ಬಲದಿಂದ 19.4 ಓವರ್‌ಗಳಿಗೆ 150 ರನ್‌ಗಳನ್ನು ಕಲೆ ಹಾಕಿ 5 ವಿಕೆಟ್ ಗೆಲುವು ಪಡೆಯಿತು. ಆ ಮೂಲಕ ಟೀಮ್ ಇಂಡಿಯಾ 9ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು.