ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೊದಲನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್‌ ಬದಲು ವಾಷಿಂಗ್ಟನ್‌ ಆಡಬೇಕೆಂದ ಆಕಾಶ ಚೋಪ್ರಾ!

ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಏಕದಿನ ಪಂದ್ಯದ ಭಾರತ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ ಅವರ ಬದಲು ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ಸಲಹೆ ನೀಡಿದ್ದಾರೆ ಹಾಗೂ ಇದಕ್ಕೆ ಕಾರಣವೇನೆಂದು ಕೂಡ ಅವರು ವಿವರಿಸಿದ್ದಾರೆ.

ಪರ್ತ್‌ನಲ್ಲಿ ಕುಲ್ದೀಪ್‌ ಬದಲು ವಾಷಿಂಗ್ಟನ್‌ ಆಡಬೇಕೆಂದ ಚೋಪ್ರಾ!

ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಬೇಕೆಂದು ಆಕಾಶ್‌ ಚೋಪ್ರಾ ಆಗ್ರಹಿಸಿದ್ದಾರೆ. -

Profile Ramesh Kote Oct 18, 2025 6:15 PM

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳ ನಡುವಣ ಮೊದಲನೇ ಏಕದಿನ ಪಂದ್ಯ ಅಕ್ಟೋಬರ್‌ 19 ರಂದು ಭಾನುವಾರ ಪರ್ತ್‌ನ ಅಪ್ಟಸ್‌ ಕ್ರೀಡಾಂಗಣದಲ್ಲಿ ಭಾರತದ ಕಾಲಮಾನ ಬೆಳಿಗ್ಗೆ 09 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI(India's Playing XI) ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ, ಟೀಮ್‌ ಇಂಡಿಯಾ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ ಅವರ ಬದಲು ವಾಷಿಂಗ್ಟನ್‌ ಸುಂದರ್‌ಗೆ (Washington Sundar) ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ.

ಪರ್ತ್‌ನ ಪಿಚ್‌ನ ಕಂಡೀಷನ್ಸ್‌ ವೇಗ ಹಾಗೂ ಬೌನ್ಸ್‌ನಿಂದ ಕೂಡಿದೆ. ಹಾಗಾಗಿ ಭಾರತ ತಂಡದ ಬ್ಯಾಟಿಂಗ್‌ ವಿಭಾಗ ಕುಸಿದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ವಾಷಿಂಗ್ಟನ್‌ ಸುಂದರ್‌ ಆಸರೆಯಾಗಬಲ್ಲರು. ಆ ಮೂಲಕ ಭಾರತ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ವಾಷಿಂಗ್ಟನ್‌ ಸುಂದರ್‌ ಮೌಲ್ಯವನ್ನು ತಂದುಕೊಡಲಿದ್ದಾರೆ ಎಂಬುದು ಆಕಾಶ್‌ ಚೋಪ್ರಾ ಅಭಿಪ್ರಾಯ.

"ಎಂಟನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಬಗ್ಗೆ ತೀವ್ರ ಕುತೂಹಲವಿದೆ. ಇದಕ್ಕೆ ಎರಡು ಆಯ್ಕೆಗಳು ಇವೆ. ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಿ 8 ರಿಂದ 11ರ ವರೆಗೆ ನೀವು ಬೌಲರ್‌ಗಳನ್ನು ಆಡಿಸಬಹುದು ಅಥವಾ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸುವುದು. ನಾವು ಪರ್ತ್‌ನಲ್ಲಿ ಆಡುತ್ತಿದ್ದೇವೆ. ಇಲ್ಲಿ ವೇಗ ಹಾಗೂ ಬೌನ್ಸ್‌ ಇರಲಿದ್ದು, ಬ್ಯಾಟಿಂಗ್‌ಗೆ ಸ್ವಲ್ಪ ಕಠಿಣವಾಗಬಹುದು. ಆರಂಭದಲ್ಲಿಯೇ ನೀವು ಎರಡು ಅಥವಾ ಮೂರು ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಳ್ಳಬಹುದು. ಒಂದು ವೇಳೆ ಇದು ನಡೆದರೆ, ನಿಮಗೆ ಬ್ಯಾಟಿಂಗ್‌ ಡೆಪ್ತ್‌ ಅಗತ್ಯವಿರುತ್ತದೆ," ಎಂದು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

ಕುಲ್ದೀಪ್‌ ಯಾದವ್‌ ಬದಲು ವಾಷಿಂಗ್ಟನ್‌ ಸುಂದರ್‌ ಆಡಬೇಕು

ಪರ್ತ್‌ನಲ್ಲಿ ಆರು ಬೌಲರ್‌ಗಳ ಅಗತ್ಯವನ್ನು ಆಕಾಶ್‌ ಚೋಪ್ರಾ ಎತ್ತಿ ತೋರಿಸಿದರೂ, ಕುಲ್‌ದೀಪ್ ಯಾದವ್‌ ಅವರನ್ನು ಪ್ಲೇಯಿಂಗ್‌ XIಗೆ ಸೇರಿಸದಿರುವ ಬಗ್ಗೆ ಅವರು ಪುನರುಚ್ಚರಿಸಿದರು. ಆದಾಗ್ಯೂ, ಎರಡನೇ ಮತ್ತು ಮೂರನೇ ಪಂದ್ಯಗಳಿಗೆ ತಂಡವು ಭಿನ್ನವಾಗಿರಬಹುದು ಎಂದು ಅವರು ಹೇಳಿದ್ದಾರೆ.

"ಪರ್ತ್‌ನಲ್ಲಿ ಸ್ಪಿನ್‌ ದೊಡ್ಡ ಪಾತ್ರವನ್ನು ವಹಿಸಲಿದೆಯಾ? ಇದನ್ನು ನಾನು ನಂಬುವುದಿಲ್ಲ. ನಿಮಗೆ ಆರು ಬೌಲರ್‌ಗಳ ಅಗತ್ಯವಿದೆ ಎಂದು ನಾನು ಹೇಳುತ್ತೇನೆ. ಪರ್ತ್‌ನಲ್ಲಿ ನಡೆಯುವ ಮೊದಲನೇ ಪಂದ್ಯಕ್ಕೆ ವಾಷಿಂಗ್ಟನ್‌ ಸುಂದರ್‌ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಸಿಡ್ನಿ ಮತ್ತು ಅಡಿಲೇಡ್‌ ಪಂದ್ಯಗಳ ಬಗ್ಗೆ ತಡವಾಗಿ ಮಾತನಾಡೋಣ. ಕುಲ್ದೀಪ್‌ ಯಾದವ್‌ಗೆ ಇಲ್ಲಿ ಅನ್ಯಾಯವಾಗುತ್ತಿದೆ ಎಂದು ನನಗೆ ತಿಳಿದಿದೆ ಆದರೆ, ಅವರನ್ನು ಪ್ಲೇಯಿಂಗ್‌ XIನಲ್ಲಿ ಸುಲಭವಾಗಿ ನೋಡಲು ಸಾಧ್ಯವಾಗುವುದಿಲ್ಲ," ಎಂದರು.

IND vs AUS 1st ODI: ತಂಡಗಳ ಪ್ಲೇಯಿಂಗ್‌ 11, ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ

ಅಕ್ಷರ್‌ ಪಟೇಲ್‌ಗೆ ಆಕಾಶ್‌ ಚೋಪ್ರಾ ಬೆಂಬಲ

ಏಳನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರ ಪ್ರದರ್ಶನ ತಮಗೆ ಮಾತ್ರವಲ್ಲದೆ, ರವೀಂದ್ರ ಜಡೇಜಾ ಅವರ ಸ್ಥಾನದ ಭವಿಷ್ಯಕ್ಕೂ ಹೇಗೆ ನಿರ್ಣಾಯಕವಾಗಲಿದೆ ಎಂಬುದರ ಕುರಿತು ಚೋಪ್ರಾ ಮಾತನಾಡಿದರು. ಜಡೇಜಾ ಇತ್ತೀಚೆಗೆ 2027ರ ವಿಶ್ವಕಪ್‌ ಟೂರ್ನಿಯ ತಂಡದ ಭಾಗವಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

"7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್. ಅದು ಒಂದು ಪ್ರಮುಖ ಸಂಖ್ಯೆ ಏಕೆಂದರೆ ರವೀಂದ್ರ ಜಡೇಜಾ ಅಲ್ಲಿರಬಹುದು. ಅವರು ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿದ್ದರು, ಆದರೆ ಅವರು ಈಗ ಇಲ್ಲ. 2027ರ ವಿಶ್ವಕಪ್ ಕನಸು ಇದೆ ಎಂದು ಅವರು ಈಗಾಗಲೇ ತಿಳಿಸಿದ್ದಾರೆ ಮತ್ತು ಅವರು ಇನ್ನೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಅಕ್ಷರ್ ಹೇಗೆ ಆಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಏಕೆಂದರೆ ಅಕ್ಷರ್ ನಿಜವಾಗಿಯೂ ಉತ್ತಮವಾಗಿ ಆಡಿದರೆ, ನೀವು ರವೀಂದ್ರ ಜಡೇಜಾ ಕಡೆಗೆ ಹಿಂತಿರುಗಲು ಸಾಧ್ಯವಿಲ್ಲ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.