Nirmala Sitharaman: ಜಿಎಸ್‌ಟಿ ದರ ಕಡಿತದ ಪ್ರಯೋಜನ ಜನಸಾಮಾನ್ಯರಿಗೆ ತಲುಪುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಸರಕು ಮತ್ತು ಸೇವಾ ತೆರಿಗೆಯಲ್ಲಿ ಮಾಡಲಾದ ಸುಧಾರಣೆಗಳಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದ್ದು, ಕೇಂದ್ರ ಸರ್ಕಾರ ಈ ಪ್ರಯೋಜನವನ್ನು ಶೀಘ್ರವಾಗಿ ಗ್ರಾಹಕರಿಗೆ ತಲುಪಿಸುವತ್ತ ಹೆಜ್ಜೆ ಇಟ್ಟಿದೆ. ಈ ಬಗ್ಗೆ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ನಿರ್ಮಲ ಸೀತಾರಾಮನ್ -

ನವದೆಹಲಿ: ಇತ್ತೀಚೆಗಿನ ಜಿಎಸ್‌ಟಿ ದರ ಕಡಿತದಿಂದಾಗಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಸೇರಿದಂತೆ ಪ್ರಮುಖ ವಲಯಗಳಲ್ಲಿ ದಾಖಲೆಯ ಮಾರಾಟ ಕಂಡುಬಂದಿದ್ದು, ಜನಸಾಮಾನ್ಯರಿಗೆ ಇದರ ಪ್ರಯೋಜನಗಳು ತಲಿಪುತ್ತಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ. ನವದೆಹಲಿಯಲ್ಲಿ ಶನಿವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ (Piyush Goyal) ಮತ್ತು ಅಶ್ವಿನಿ ವೈಷ್ಣವ್ (Ashwini Vaishnaw) ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಎಸ್‌ಟಿ ದರ ಕಡಿತದ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುತ್ತಿವೆ ಮತ್ತು ಕೆಲ ವಸ್ತುಗಳ ಬೆಲೆ ನಿರೀಕ್ಷೆಗಿಂತ ಕಡಿಮೆ ಆಗಿವೆ ಎಂದು ಹೇಳಿದರು.
ಜಿಎಸ್‌ಟಿ ದರ ಕಡಿತದ ಬಳಿಕ ಸರ್ಕಾರ ಗುರುತಿಸಿದ್ದ ದಿನನಿತ್ಯ ಬಳಸುವ 54 ಅಗತ್ಯ ವಸ್ತುಗಳ ಖರೀದಿ ಪ್ರಮಾಣ ಹೆಚ್ಚಿದ್ದು, ನಮ್ಮ ಉದ್ದೇಶ ಈಡೇರಿದೆ. ಜಿಎಸ್‌ಟಿ 2.0ವು ಗ್ರಾಹಕರ ಉಳಿತಾಯದ ಪ್ರಮಾಣವನ್ನು ಮೊದಲಿಗಿಂತ ಹೆಚ್ಚಿಸಿದೆ ಎಂದು ವಿತ್ತ ಸಚಿವರು ಹೇಳಿದರು.
Since September 22, we have been receiving information from the zonal levels on all items. However, we have been closely monitoring the prices of 54 products to ensure that the benefits of the revised tax structure are reaching the end consumers.
— Nirmala Sitharaman Office (@nsitharamanoffc) October 18, 2025
The #NextGenGST benefits have… pic.twitter.com/jBYH9lblGn
ಈ ಸುದ್ದಿಯನ್ನು ಓದಿ: Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ
ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಪರಿಷ್ಕರಿಸಿದ್ದ ಕೇಂದ್ರ ಸರ್ಕಾರ, ಆಹಾರ, ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ಟಿವಿ, ರೆಫ್ರಿಜರೇಟರ್‌ಗಳಂತಹ ವಸ್ತುಗಳ ಮೇಲಿನ ದರಗಳಲ್ಲಿ ತೀವ್ರ ಕಡಿತವನ್ನು ಘೋಷಿಸಿತ್ತು. ಸೆಪ್ಟೆಂಬರ್ 22ರಂದು ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬಂದಿದ್ದವು.
ಪರಿಷ್ಕೃತ ಜಿಎಸ್‌ಟಿ ದರ ಜಾರಿಯಾದ ಮೊದಲ ದಿನವೇ ಎಸಿ, ಟಿವಿಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದವು. ಕಾರು-ಬೈಕ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದ್ದು, ಹೊಸ ಸುಧಾರಣೆಯಿಂದ ಹಣದುಬ್ಬರವೂ ಕಡಿಮೆ ಆಗಿದೆ. ಸ್ಮಾರ್ಟ್ ಫೋನ್‌ಗಳ ರಫ್ತಿನಲ್ಲಿ ಗಣನೀಯ ಏರಿಕೆ ಕಂಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ದಾಖಲೆಯ ಮಟ್ಟದಲ್ಲಿ ಮಾರಾಟ ಕಂಡಿವೆ. ನವರಾತ್ರಿಯ ಮೊದಲ ದಿನದಂದು ಜಾರಿಗೆ ತರಲಾಗಿದ್ದ ಜಿಎಸ್‌ಟಿ 2.0ವನ್ನು, ಎಲ್ಲ ನಾಗರಿಕರು ಉತ್ಸಾಹದಿಂದ ಸ್ವೀಕರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಜಿಎಸ್‌ಟಿ ದರ ಕಡಿತದಿಂದಾಗಿ ಈ ವರ್ಷದ ನವರಾತ್ರಿ ಉತ್ಸವದಲ್ಲಿ ದಾಖಲೆಯ ಮಾರಾಟ ನಡೆದಿದೆ. ಹಿಂದಿನ ನವರಾತ್ರಿ ಉತ್ಸವದಲ್ಲಿ ದಾಖಲಾದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. ಹೊಸ ಸುಧಾರಣೆಗಳಿಂದಾಗಿ ಆಹಾರದ ಬೆಲೆಗಳು ಕಡಿಮೆಯಾಗುತ್ತಿವೆ. ಎಲೆಕ್ಟ್ರಾನಿಕ್ಸ್‌ಗೆ ಹೆಚ್ಚುತ್ತಿರುವ ಬೇಡಿಕೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮಕ್ಕೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ವಾಣಿಜ್ಯ ಸಚಿವ ಪಿಯೂಷ್, ಈ ಜಿಎಸ್‌ಟಿ 2.0 ಅನ್ನು 'GST ಉಳಿತಾಯ ಹಬ್ಬ' ಎಂದು ಕರೆದಿದ್ದು, ಹೊಸ ಸುಧಾರಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಿಗೆ ಧನ್ಯವಾದ ತಿಳಸಿದ್ದಾರೆ.