ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆಯನ್ನು ಬರೆದ ಕೈರೊನ್‌ ಪೊಲಾರ್ಡ್‌!

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುತ್ತಿರುವ ವೆಸ್ಟ್‌ ಇಂಡೀಸ್‌ ದಿಗ್ಗಜ ಕೈರೊನ್‌ ಪೊಲಾರ್ಡ್‌ ಅವರು ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳು ಹಾಗೂ 300 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಕೈರೊನ್‌ ಪೊಲಾರ್ಡ್!

ಟಿ20 ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಕೈರೊನ್‌ ಪೊಲಾರ್ಡ್. -

Profile Ramesh Kote Aug 30, 2025 1:52 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (CPL 2025) ಟೂರ್ನಿಯ ಬಾರ್ಬಡೋಸ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ (BR vs TNR) 19 ರನ್‌ ಗಳಿಸುವ ಮೂಲಕ ಟ್ರಿಂಬ್ಯಾಗೊ ನೈಟ್‌ ರೈಡರ್ಸ್‌ ತಂಡದ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌ (Kieron Pollard) ದೊಡ್ಡ ದಾಖಲೆಯನ್ನು ಬರೆದಿದ್ದಾರೆ. 2022ರಲ್ಲಿ ವಿಂಡೀಸ್‌ ಆಲ್‌ರೌಂಡರ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಆದರೂ ಅವರು ತಮ್ಮದೇ ದೇಶದಲ್ಲಿ ನಡೆಯುತ್ತಿರುವ ಸಿಪಿಎಲ್‌ ಟೂರ್ನಿಯಲ್ಲಿ ಮುಂದುವರಿದಿದ್ದಾರೆ. ಇದೀಗ ಅವರು ಸಿಪಿಎಲ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ನ ಸಹೋದರ ಫ್ರಾಂಚೈಸಿ ಟ್ರಿಂಬ್ಯಾಗೊ ನೈಟ್‌ ರೈಡರ್ಸ್‌ ಪರ ಆಡುತ್ತಿದ್ದಾರೆ.

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಬಾರ್ಬಡೋಸ್‌ ರಾಯಲ್ಸ್‌ ನೀಡಿದ್ದ 179 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಟ್ರಿಂಬ್ಯಾಗೊ ತಂಡದ ಪರ ಬ್ಯಾಟ್‌ ಮಾಡಿದ ಕೈರೊನ್‌ ಪೊಲಾರ್ಡ್‌ 9 ಎಸೆತಗಳಲ್ಲಿ 19 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದೇ ತಂಡದ ನಿಕೋಲಸ್‌ ಪೂರನ್‌ ಅವರು 40 ಎಸೆತಗಳಲ್ಲಿ ಅಜೇಯ 65 ರನ್‌ಗಳನ್ನು ಬಾರಿಸಿದ್ದರು. ಇವರ ಜೊತೆಗೆ ಕಾಲಿನ್‌ ಮನ್ರೊ 44 ಎಸೆತಗಳಲ್ಲಿ 67 ರನ್‌ ಚಚ್ಚಿದ್ದರು.

Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು

ಕೈರೊನ್‌ ಪೊಲಾರ್ಡ್‌ ದೊಡ್ಡ ದಾಖಲೆ

ಟ್ರಿಂಬ್ಯಾಗೊ ನೈಟ್‌ ರೈಡರ್ಸ್‌ ತಂಡದ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌ ಅವರು ಟಿ20 ಕ್ರಿಕೆಟ್‌ನಲ್ಲಿ14000 ರನ್‌ಗಳು ಹಾಗೂ 300 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಆಟಗಾರ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 14000ಕ್ಕೂ ಅಧಿಕ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕ್ರಿಸ್‌ ಗೇಲ್‌ ಹೆಸರಿನಲ್ಲಿದೆ. ಇನ್ನು ಮೂವರು ಬೌಲರ್‌ಗಳು ಚುಟುಕು ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ವಿಕೆಟ್‌ಗಳನು ಕಬಳಿಸಿದ್ದಾರೆ. ಆದರೆ, ಇವರಲ್ಲಿ ಯಾರೂ 14000ಕ್ಕೂ ಅಧಿಕ ರನ್‌ ಗಳಿಸಿಲ್ಲ.

ವೆಸ್ಟ್ ಇಂಡೀಸ್‌ನ ಮಾಜಿ ಟಿ20ಐ ನಾಯಕ ಪೊಲಾರ್ಡ್ ಇದುವರೆಗೆ 712 ಟಿ20 ಪಂದ್ಯಗಳಲ್ಲಿ 14000 ರನ್‌ಗಳು ಮತ್ತು 332 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಪೊಲಾರ್ಡ್ 101 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಮಾತಿನ ಚಕಮಕಿ: ದಿಗ್ವೇಶ್ ರಾಥಿ, ನಿತೀಶ್ ರಾಣಾಗೆ ದಂಡ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಗೇಲ್, ಈ ಮಾದರಿಯಲ್ಲಿ 14562 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 22 ಶತಕಗಳು ಮತ್ತು 88 ಅರ್ಧಶತಕಗಳಿವೆ. ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಲು ಪೊಲಾರಡ್ಸ್‌ಗೆ ಕೇವಲ 563 ರನ್‌ಗಳ ಅಗತ್ಯವಿದೆ ಮತ್ತು ಮುಂದಿನ ಒಂದೆರಡು ವರ್ಷಗಳಲ್ಲಿ ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಬಹುದು.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ಆರ್ಥಿಕ ನೆರವು ಘೋಷಿಸಿದ ಆರ್‌ಸಿಬಿ

ಅಗ್ರ ಸ್ಥಾನದಲ್ಲಿರುವ ರಶೀದ್‌ ಖಾನ್‌

ಅಫಘಾನಿಸ್ತಾನ ತಂಡದ ರಶೀದ್‌ ಖಾನ್‌ ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಆಗಿದ್ದಾರೆ. ಅವರು 488 ಪಂದ್ಯಗಳಿಂದ 661 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆಯನ್ನು ರಶೀದ್‌ ಖಾನ್‌ ಬರೆಯುವ ಸಾಧ್ಯತೆ ಇದೆ. ವಿಂಡೀಸ್‌ ದಿಗ್ಗಜ ಡ್ವೇನ್‌ ಬ್ರಾವೊ ಅವರು 631 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸುನೀಲ್‌ ನರೇನ್‌ ಅವರು 590 ವಿಕೆಟ್‌ಗಳ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.