ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs SA: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಬ್ಬರ, ಟಿ20ಐ ಸರಣಿ ಗೆದ್ದ ಆಸ್ಟ್ರೇಲಿಯಾ!

AUS vs SA 3rd T20I Highlights: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ರೋಚಕ ಗೆಲುವು ಪಡೆಯಿತು. ಆ ಮೂಲಕ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ.

ಆಸ್ಟ್ರೇಲಿಯಾಗೆ ಟಿ20ಐ ಸರಣಿ ಗೆದ್ದುಕೊಟ್ಟ ಗ್ಲೆನ್‌ ಮ್ಯಾಕ್ಸ್‌ವೆಲ್‌!

ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌.

Profile Ramesh Kote Aug 16, 2025 7:45 PM

ಕೈರ್ನ್ಸ್ (ದಕ್ಷಿಣ ಆಫ್ರಿಕಾ): ನೇಥನ್‌ ಎಲ್ಲಿಸ್‌ (Nathan Ellis) ಮಾರಕ ದಾಳಿ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಟಿ20ಐ ಸರಣಿಯ (AUS vs SA) ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ವಿಕೆಟ್‌ ರೋಚಕ ಗೆಲುವು ದಾಖಲಿಸಿತು. ಆ ಮೂಲಕ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಈ ಪಂದ್ಯದ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೊನೆಯ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ಪ್ರವಾಸಿ ತಂಡಕ್ಕೆ ಗೆಲುವು ಖಾತ್ರಿಗೊಳಿಸಿದರು.

ಇಲ್ಲಿನ ಕ್ಯಾಜಲಿ ಕ್ರೀಡಾಂಗಣ ದಕ್ಷಿಣ ಆಫ್ರಿಕಾ ನೀಡಿದ್ದ 173 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್‌ ಮಾರ್ಷ್‌ ಹಾಗೂ ಟ್ರಾವಿಸ್‌ ಹೆಡ್‌ 66 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. 18 ಎಸೆತಗಳಲ್ಲಿ 19 ರನ್‌ ಗಳಿಸಿ ಹೆಡ್‌ ಉತ್ತಮವಾಗಿ ಕಾಣುತ್ತಿದ್ದರು. ಆದರೆ, ಎಂಟನೇ ಓವರ್‌ನ ಕೊನೆಯ ಎಸೆತದಲ್ಲಿ ಏಡೆನ್‌ ಮಾರ್ಕ್ರಮ್‌ ಎಸೆತದಲ್ಲಿ ಕ್ಯಾಚ್‌ ಕೊಟ್ಟರು.

Dewald Brevis: ಆರೋನ್‌ ಹಾರ್ಡಿಗೆ ನೋ ಲುಕ್‌ ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸಿದ ಬೇಬಿ ಎಬಿಡಿ!

ನಂತರ ಕ್ರೀಸ್‌ಗೆ ಬಂದ ಜಾಶ್‌ ಇಂಗ್ಲಿಸ್‌ ಕೂಡ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಕೇವಲ 17 ರನ್‌ ಅಂತರದಲ್ಲಿ ಮೂರು ಮಿಚೆಲ್‌ ಮಾರ್ಷ್‌, ಕ್ಯಾಮೆರಾನ್‌ ಗ್ರೀನ್‌ ಸೇರಿದಂತೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಲ ಕಾಲ ಕ್ರೀಸ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ನಾಯಕ ಮಿಚೆಲ್‌ ಮಾರ್ಷ್‌ 37 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 54 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. 9 ಎಸೆತಗಳಲ್ಲಿ 17 ರನ್‌ ಸಿಡಿಸಿದ್ದ ಟಿಮ್‌ ಡೇವಿಡ್‌ ಕೂಡ ವಿಕೆಟ್‌ ಅನ್ನು ಕೈಚೆಲ್ಲಿದರು.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಸ್ಪೋಟಕ ಅರ್ಧಶತಕ

ಮಿಚೆಲ್‌ ಮಾರ್ಷ್‌ ವಿಕೆಟ್‌ ಒಪ್ಪಿಸಿದ ಬಳಿಕ ಆಸೀಸ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ, ಒಂದು ತುದಿಯಲ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪೆರೇಡ್‌ ನಡೆಸುತ್ತಿದ್ದರು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಏಕಾಂಗಿಯಾಗಿ ಆಸೀಸ್‌ ತಂಡವನ್ನು ಗೆಲ್ಲಿಸಿದರು. ಅವರು ಆಡಿದ 36 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 62 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ಕೊನೆಯ ಓವರ್‌ನಲ್ಲಿ ಆಸೀಸ್‌ಗೆ 6 ಎಸೆತಗಳಲ್ಲಿ 10 ರನ್‌ ಬೇಕಿತ್ತು. ಈ ವೇಳೆ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಹಾಗೂ ಐದನೇ ಎಸೆತದಲ್ಲಿ ಬೌಂಡರಿಗಳನ್ನು ಬಾರಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ದಕ್ಷಿಣ ಆಫ್ರಿಕಾ ಪರ ಕಾರ್ಬಿನ್‌ ಬಾಷ್‌ ಮೂರು ವಿಕೆಟ್‌ ಕಿತ್ತರೆ, ಕಗಿಸೊ ರಬಾಡ ಮತ್ತು ಕ್ವೇನಾ ಎಂಫಾಕಾ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವಂತಾಗಿದ್ದ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 172 ರನ್‌ಗಳನ್ನು ಕಲೆ ಹಾಕಿದರು. ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ ಎರಡು ರನ್‌ ಇರುವಾಗ ಏಡೆನ್‌ ಮಾರ್ಕ್ರಮ್‌, 32 ರನ್‌ ಇದ್ದಾಗ ರಯಾನ್‌ ರಿಕೆಲ್ಟನ್‌ ಹಾಗೂ 49 ರನ್‌ ಗಳಿಸಿದ ವೇಳೆ ಲ್ಯುಯಾನ್‌ ಪ್ರೆಟೋರಿಯಸ್‌ (24) ಅವರು ವಿಕೆಟ್‌ ಒಪ್ಪಿಸಿದರು. ಆ ಮೂಲಕ ಆಸೀಸ್‌ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.

41 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ನೂತನ ಮೈಲುಗಲ್ಲು ತಲುಪಿದ ಡೆವಾಲ್ಡ್‌ ಬ್ರೆವಿಸ್‌!

ಡೆವಾಲ್ಡ್‌ ಬ್ರೆವಿಸ್‌ ಅರ್ಧಶತಕ

ಎರಡನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ಡೆವಾಲ್ಡ್‌ ಬ್ರೆವಿಸ್‌, ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಕೆಲಕಾಲ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಬ್ರೆವಿಸ್‌, ಕೇವಲ 26 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 53 ರನ್‌ ಸಿಡಿಸಿದ್ದರು. ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ವಾನ್‌ ಡೆರ್‌ ಡುಸೆನ್‌ ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಕ್ರಮವಾಗಿ 25 ರನ್‌ ಹಾಗೂ 38 ರನ್‌ಗಳನ್ನು ಸಿಡಿಸಿದ್ದರು.

ಆಸ್ಟ್ರೇಲಿಯಾ ಪರ ನೇಥನ್‌ ಎಲ್ಲಿಸ್‌ 3 ವಿಕೆಟ್‌ ಕಿತ್ತರೆ, ಜಾಶ್‌ ಹೇಝಲ್‌ವುಡ್‌ ಮತ್ತು ಆಡಮ್‌ ಝಾಂಪ ತಲಾ ಎರಡೆರಡು ವಿಕೆಟ್‌ ಪಡೆದರು.