ಸೂರ್ಯಕುಮಾರ್ ಯಾದವ್ ಅಲ್ಲ! ಇವರೇ ನನ್ನ ನಾಯಕ ಎಂದ ಕುಲ್ದೀಪ್ ಯಾದವ್!
ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಭಾರತದ ಗೆಲುವಿಗೆ ನೆರವು ನೀಡುವ ಮೂಲಕ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದ ಬಳಿಕ ತಮ್ಮ ಬೌಲಿಂಗ್ ಯಶಸ್ಸಿನ ಶ್ರೇಯ ಅಕ್ಷರ್ ಪಟೇಲ್‌ಗೆ ಸಲ್ಲಬೇಕೆಂದು ಹೇಳಿದ್ದಾರೆ.

ತಮ್ಮ ಬೌಲಿಂಗ್ ಯಶಸ್ಸಿನ ಶ್ರೇಯ ಅಕ್ಷರ್ ಪಟೇಲ್‌ಗೆ ಸಲ್ಲಬೇಕೆಂದ ಕುಲ್ದೀಪ್ ಯಾದವ್. -

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ (IND vs PAK) ಭಾರತ ತಂಡ 7 ವಿಕೆಟ್‌ಗಳ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದ ಬಳಿಕ ಮಾತನಾಡಿದ ಅವರು, ತಮ್ಮ ಬೌಲಿಂಗ್ ಯಶಸ್ಸಿನ ಶ್ರೇಯ ಅಕ್ಷರ್ ಪಟೇಲ್‌ಗೆ (Axar Patel) ಸಲ್ಲಬೇಕೆಂದು ಹೇಳಿದ್ದಾರೆ. ಅಕ್ಷರ್ ನೀಡಿದ್ದ ಸಲಹೆ ತುಂಬಾ ನೆರವು ಬಂದಿದೆ ಎಂದಿದ್ದಾರೆ.
ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬೌಲ್ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಬಿಸಿಸಿಐ ಟಿವಿ ಜೊತೆ ಮಾತನಾಡಿದ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ನನ್ನ ನಾಯಕ ಎಂದು ಹೇಳಿದ್ದಾರೆ. ಅವರು ಬೌಲಿಂಗ್ ವೇಳೆ ನೀಡಿದ್ದ ಸಲಹೆಗಳಿಂದ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
"ಅವರು ನನ್ನ ನಾಯಕ (ಅಕ್ಷರ್ ಪಟೇಲ್). ಇದು ತುಂಬಾ ಮುಖ್ಯ ಆದರೆ, ಸಣ್ಣ-ಸಣ್ಣ ವಿಷಯಗಳು ಇಲ್ಲಿ ತಂಬಾ ನಿರ್ಣಾಯಕವಾಗುತ್ತವೆ. ಇವತ್ತು (ಭಾನುವಾರ) ನಾವು ಬೌಲ್ ಮಾಡುವಾಗ, ಚೆಂಡು ಹಿಡಿತ ಮತ್ತು ತಿರುಗುವಿಕೆಯಿಂದಾಗಿ ಹೆಚ್ಚಿನ ವೇಗದಲ್ಲಿ ಬೌಲ್ ಮಾಡಲು ನೀವು ನನಗೆ ಹೇಳಿದ್ದೀರಿ. ಈ ಪದಗಳು ನನ್ನ ಕೈ ಹಿಡಿದವು. ತದ ನಂತರ ನಾನು ಬೌಲ್ ಮಾಡಿದ್ದು ಒಂದೇ ಒಂದು ಓವರ್ ಹಾಗೂ ನಾನು ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಿನ್ ಮಾಡಲು ಪ್ರಯತ್ನಿಸಬೇಕಾಗಿತ್ತು. ಪಿಚ್ ಹೆಚ್ಚಿನ ಬೌನ್ಸ್ ಅನ್ನು ನೀಡುತ್ತಿತ್ತು. ನೀವು ಎರಡು ವಿಕೆಟ್‌ಗಳನ್ನು ಪಡೆದಿದ್ದೀರಿ ಹಾಗೂ ನಾನು ಮೂರು ವಿಕೆಟ್‌ಗಳನ್ನು ತೆಗೆದುಕೊಂಡಿದ್ದೇನೆ. ನಾವಿಬ್ಬರೂ ಒಟ್ಟು ಐದು ವಿಕೆಟ್‌ಗಳನ್ನು ಕಬಳಿಸಿದ್ದೇವೆ. ಇದು ತಂಡದ ಸಂಯೋಜಿತ ಪ್ರಯತ್ನವಾಗಿದೆ," ಎಂದು ಕುಲ್ದೀಪ್ ಯಾದವ್ ತಿಳಿಸಿದ್ದಾರೆ.
"ಆದರೆ, ನಾನು ನಿಮಗೆ ವಿಶೇಷವಾದ ಶ್ರೇಯವನ್ನು ನೀಡಲು ಬಯಸುತ್ತೇನೆ. ನೀವು ಅತ್ಯುತ್ತಮವಾಗಿ ಬೌಲ್ ಮಾಡಿದ್ದೀರಿ. ಬಹುಶಃ ನೀವು ಮೊದಲು ಬೌಲಿಂಗ್ ಮಾಡಿದ್ದರಿಂದ ಮತ್ತು ಪರಿಸ್ಥಿತಿಗಳನ್ನು ತಿಳಿದಿದ್ದರಿಂದ ನಿಮಗೆ ಒಂದು ಐಡಿಯಾ ಬಂದಿರಬಹುದು," ಎಂದು ಹೇಳಿದ್ದಾರೆ.
IND vs PAK: ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು ದಾಖಲೆ ಬರೆದ ಹಾರ್ದಿಕ್ ಪಾಂಡ್ಯ
ತಮ್ಮ ಬೌಲಿಂಗ್ ವೇಗವು ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಬೆನ್ನಟ್ಟುವಿಕೆಯನ್ನು ಸುಲಭಗೊಳಿಸುತ್ತಿದೆ ಎಂದು ಅಕ್ಷರ್ ಪಟೇಲ್ ಹೇಳಿಕೊಂಡಿದ್ದಾರೆ. ಪರಿಣಾಮವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಅವರು ತುಂಬಾ ನಿಧಾನವಾಗಿ ಬೌಲ್ ಮಾಡಲು ಮತ್ತು ಚೆಂಡಿಗೆ ಹೆಚ್ಚಿನ ರೆವ್ಯೂಲೇಷನ್ ನೀಡಲು ಆಯ್ಕೆ ಮಾಡಿಕೊಂಡರು.
"ಖಂಡಿತ, ನಾವು ಕಳೆದ ಪಂದ್ಯದಲ್ಲಿ ಆಡಿದಂತೆಯೇ, ಪ್ರತಿ ಹೊಸ ಪಂದ್ಯವು ವಿಭಿನ್ನ ಪಿಚ್‌ಗಳನ್ನು ಹೊಂದಿರುತ್ತವೆ. ಆದರೆ ನಾನು ಕೊನೆಯ ಪಂದ್ಯವನ್ನು ಆಡಿದಾಗ, ನಾನು ಬೌಲ್ ಮಾಡುತ್ತಿದ್ದ ವೇಗವು ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗುತ್ತಿದೆ ಎಂದು ನನಗೆ ಅನಿಸಿತು. ನಾನು ಅದನ್ನು ನಿರ್ಣಯಿಸಿದೆ ಮತ್ತು ಮೊದಲ ಓವರ್‌ನಲ್ಲಿ ಸ್ವಲ್ಪ ನಿಧಾನವಾಗಿ ಬೌಲ್ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಚೆಂಡಿಗೆ ವೇಗವನ್ನು ನೀಡುತ್ತೇನೆ ಎಂದು ಭಾವಿಸಿದೆ. ಅದು ಈ ಪಂದ್ಯದಲ್ಲಿ ಕೆಲಸ ಮಾಡಿದೆ," ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.