Asia Cup 2025: ಅರ್ಧಶತಕ ಬಾರಿಸಿ ಜೋಸ್ ಬಟ್ಲರ್ ದಾಖಲೆ ಮುರಿದ ಮುಹಮ್ಮದ್ ವಾಸೀಮ್!
ಒಮಾನ್ ವಿರುದ್ಧದ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಯುಎಇ ತಂಡದ ನಾಯಕ ಮುಹಮ್ಮದ್ ವಾಸೀಮ್ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಟಿ20ಐ ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್ ದಾಖಲೆ ಮುರಿದ ಮುಹಮ್ಮದ್ ವಾಸೀಮ್. -

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಯುಎಇ ತಂಡದ ನಾಯಕ ಮುಹಮ್ಮದ್ ವಾಸೀಮ್ (Muhammed Waseem) ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಸೋಮವಾರ ಒಮಾನ್ ವಿರುದ್ದದ ಪಂದ್ಯದಲ್ಲಿ (Oman vs UAE) ಅತ್ಯುತ್ತಮ ಬ್ಯಾಟ್ ಮಾಡಿದ ಮುಹಮ್ಮದ್ ವಾಸೀಮ್ ಅವರು 54 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದಂತೆ 69 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ಇವರು ತಮ್ಮ ಟಿ20ಐ ವೃತ್ತಿ ಜೀವನದಲ್ಲಿ ಆಡಿದ 84 ಪಂದ್ಯಗಳಿಂದ 3010 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಯುಎಇ ಆಟಗಾರ ಎನಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಯುಎಇ ಬ್ಯಾಟರ್ 1500ಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಿಲ್ಲ.
ಮುಹಮ್ಮದ್ ವಾಸೀಮ್ ಹಾಗೂ ಆಲಿಸನ್ ಶರಫು ಅರ್ಧಶತಕಗಳ ಬಲದಿಂದ ಯುಎಇ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಿತು. ಅಂದ ಹಾಗೆ ಮುಹಮ್ಮದ್ ವಾಸೀಮ್‌ಗೂ ಮುನ್ನ ಆಲಿಸನ್ ಶರಫು ಅದ್ಭುತವಾಗಿ ಬ್ಯಾಟ್ ಮಾಡಿ 51 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ ಯುಎಇ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟು ವಿಕೆಟ್ ಒಪ್ಪಿಸಿದ್ದರು. ಆದರೆ, 20ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ನಿಂತು ಆಡಿದ್ದ ಮುಹಮ್ಮದ್ ವಾಸೀಮ್, ಯುಎಇ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 172 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ನಂತರ ಗುರಿ ಹಿಂಬಾಲಿಸಿದ ಒಮಾನ್ 18.4 ಓವರ್‌ಗಳಿಗೆ 130 ರನ್‌ಗಳಿಗೆ ಆಲ್‌ಔಟ್ ಆಯಿತು.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಜೋಸ್ ಬಟ್ಲರ್ ದಾಖಲೆ ಮುರಿದ ಮುಹಮ್ಮದ್ ವಾಸೀಮ್
ಒಮಾನ್ ವಿರುದ್ಧದ ಇನಿಂಗ್ಸ್‌ನ ಮೂಲಕ ಮಹಮ್ಮದ್ ವಾಸೀಮ್ ಅವರು, ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ವಾಸೀಮ್ ಟಿ20ಐ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಜೋಸ್ ಬಟ್ಲರ್‌ಗಿಂತ ಕಡಿಮೆ ಎಸೆತಗಳಲ್ಲಿ ಈ ಮೊತ್ತವನ್ನು ಕಲೆ ಹಾಕಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ 3000 ಟಿ20ಐ ರನ್‌ಗಳನ್ನು ಪೂರ್ಣಗೊಳಿಸಲು 2068 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಯುಎಇ ನಾಯಕ 1947 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ 2000ಕ್ಕೂ ಕಡಿಮೆ ಎಸೆತಗಳಲ್ಲಿ 3000 ಟಿ20ಐ ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮುಹಮ್ಮದ್ ವಾಸೀಮ್ ಬರೆದಿದ್ದಾರೆ.
ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು (ಎಸೆತಗಳಲ್ಲಿ)
ಮುಹಮ್ಮದ್ ವಾಸೀಮ್: 1947 ಎಸೆತಗಳು
ಜೋಸ್ ಬಟ್ಲರ್: 2068 ಎಸೆತಗಳು
ಆರೋನ್ ಫಿಂಚ್: 2077 ಎಸೆತಗಳು
ಡೇವಿಡ್ ವಾರ್ನರ್: 2113 ಎಸೆತಗಳು
ರೋಹಿತ್ ಶರ್ಮಾ: 2149 ಎಸೆತಗಳು
Leading by example 🫡
— AsianCricketCouncil (@ACCMedia1) September 15, 2025
Skipper Muhammad Waseem anchored 🇦🇪 innings with a well-timed 6️⃣9️⃣. 🙌#UAEvOMAN #DPWorldAsiaCup2025 #ACC pic.twitter.com/TDkuiznzxZ
ಮುಹಮ್ಮದ್ ವಾಸೀಮ್ ನಾಲ್ಕನೇ ಬ್ಯಾಟ್ಸ್‌ಮನ್
ಕಡಿಮೆ ಇನಿಂಗ್ಸ್‌ಗಳಲ್ಲಿ 3000 ಟಿ20ಐ ರನ್‌ಗಳನ್ನು ಪೂರ್ಣಗೊಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮುಹಮ್ಮದ್ ವಾಸೀಮ್ ನಾಲ್ಕನೇ ಆಟಗಾರರಾಗಿದ್ದಾರೆ. ಇವರು ಈ ಮೊತ್ತವನ್ನು ಗಳಿಸಲು ಒಟ್ಟು 84 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಮೊಹಮ್ಮದ್ ರಿಝ್ವಾನ್ 79 ಇನಿಂಗ್ಸ್‌ಗಳಲ್ಲಿ ಈ ಮೊತ್ತವನ್ನು ದಾಖಲಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಮ್ ತಲಾ 81 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ ವಿಶ್ವದ 11ನೇ ಆಟಗಾರ ಎನಿಸಿಕೊಂಡಿದ್ದಾರೆ.