ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ ಸೂರ್ಯಕುಮಾರ್‌ ಯಾದವ್‌!

ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ಸೂಚನೆಯನ್ನು ನೀಡಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡಸಿದ ಬಳಿಕ ಬಹುಶಃ ಸೂರ್ಯಕುಮಾರ್‌ ಯಾದವ್‌ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ವಿದಾಯದ ಬಗ್ಗೆ ಸುಳಿವು ನೀಡಿದ ಸೂರ್ಯಕುಮಾರ್‌ ಯಾದವ್‌!

ನಿವೃತ್ತಿ ಬಗ್ಗೆ ಸುಳಿವು ನೀಡಿದ ಸೂರ್ಯಕುಮಾರ್‌ ಯಾದವ್‌. -

Profile Ramesh Kote Oct 15, 2025 6:02 PM

ನವದೆಹಲಿ: ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದಲ್ಲಿ ಭಾರತ ತಂಡ (India) ಇತ್ತೀಚೆಗೆ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಇದೀಗ ಭಾರತ ಟಿ20 ತಂಡ, ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದಲ್ಲಿಯೇ ಭಾರತ ಮುಂದಿನ ಟಿ20 ವಿಶ್ವಕಪ್‌ (T20 World Cup 2026) ಆಡಲಿದೆ. ಅಂದ ಹಾಗೆ ಸೂರ್ಯಕುಮಾರ್‌ ಯಾದವ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ, ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್‌ ಆಡುವ ಗುರಿಯನ್ನು ಹೊಂದಿರುವುದಾಗಿಯೂ ತಿಳಿಸಿದ್ದಾರೆ.

ನ್ಯೂಸ್‌-18 ಸಂಭಾಷಣೆಯಲ್ಲಿ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ವೈಟ್‌ಬಾಲ್‌ ಕ್ರಿಕೆಟ್‌ ಕಡೆಗೆ ಗಮನ ನೀಡಬೇಕೆಂದು ಹೇಳಿದ್ದಾರೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಕ್ರೀಡಾಕೂಟ ಹಾಗೂ ಇದಾದ ಬಳಿಕ ಮುಂದಿನ ವರ್ಷ ಮತ್ತೊಂದು ವಿಶ್ವಕಪ್‌ ಟೂರ್ನಿಯನ್ನು ಆಡಬೇಕೆಂದು ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಆಗ ಅವರ ವಯಸ್ಸು 37 ಅಥವಾ 38 ಆಗಬಹುದು.

IND vs AUS: ಆಸ್ಟ್ರೇಲಿಯಾದ ಜನತೆಗೆ ರೋಹಿತ್-ಕೊಹ್ಲಿ ನೋಡಲು ಇದು ಕೊನೆಯ ಅವಕಾಶ: ಪ್ಯಾಟ್ ಕಮ್ಮಿನ್ಸ್

"ಪ್ರಸ್ತುತ ನನಗೆ 34 ಅಥವಾ 35 ವಯಸ್ಸಾಗಿದೆ ಎಂದು ಭಾಸವಾಗುತ್ತಿದೆ. ಮುಂದಿನ ಮೂರು ಅಥವಾ ನಾಲ್ಕು ವರ್ಷಗಳ ಕಾಲ ವೈಟ್‌ಬಾಲ್‌ ಕ್ರಿಕೆಟ್‌ ಕಡೆಗೆ ಗಮನ ಕೊಟ್ಟರೆ ನನಗೆ ಹಾಗೂ ತಂಡದ ಪಾಲಿಗೆ ಒಳ್ಳೆಯದಾಗಲಿದೆ. ತಂಡಕ್ಕೆ ಹೆಚ್ಚಿನ ಕೊಡುಗೆಯನ್ನು ಪರಿಣಾಮಕಾರಿಯಾಗಿ ನೀಡಲು ನಾನು ಶಕ್ತನಾಗಬಹುದು. ನಿಮಗೆ ನಿಜ ಹೇಳಬೇಕೆಂದರೆ, 2028ರ ಒಲಿಂಪಿಕ್ಸ್‌ ಹಾಗೂ ಟಿ20 ವಿಶ್ವಕಪ್‌ ನನ್ನ ಮನಸಿನಲ್ಲಿದೆ. ಸಂಗತಿಗಳು ಹೇಗೆ ಸಾಗಲಿವೆ ಎಂಬುದನ್ನು ನಾನು ಎಚ್ಚರಿಕೆಯಿಂದ ನೋಡುತ್ತೇನೆ. ಈ ವರ್ಷ ಹಾಗೂ ಮುಂದಿನ ವರ್ಷ ನನ್ನ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ 37 ಅಥವಾ 38 ವರ್ಷ ವಯಸ್ಸಾದಾಗ ದೇಹ ಹೇಗಿರಬಹುದು ಎಂದು ನಿಮಗೆ ತಿಳಿದಿದೆ," ಎಂದು ಹೇಳಿದ್ದಾರೆ.

ಕ್ರಿಕೆಟ್‌ ಆಡಿಲ್ಲವಾಗಿದ್ದರೆ ಉದ್ಯಮಿಯಾಗುತ್ತಿದ್ದೆ: ಸೂರ್ಯ

ಸೂರ್ಯಕುಮಾರ್ ಯಾದವ್ ಅವರು ಕ್ರಿಕೆಟಿಗನಾಗಿರದಿದ್ದರೆ, ಖಂಡಿತವಾಗಿಯೂ ಉದ್ಯಮಿಯಾಗುತ್ತಿದ್ದೆ ಎಂದು ಬಹಿರಂಗಪಡಿಸಿದರು, ವಿಶೇಷವಾಗಿ ಅವರ ಪತ್ನಿ ಸಂಪೂರ್ಣ ಬ್ಯುಸಿನೆಸ್‌ ಹಿನ್ನೆಲೆಯಿಂದ ಬಂದವರು ಮತ್ತು ಅವರೊಂದಿಗೆ ಮಾತನಾಡುವುದರಿಂದ ಅವರ ಬ್ಯುಸಿನೆಸ್‌ ಜ್ಞಾನ ನನಗೂ ಬಂದಿದೆ ಎಂದಿದ್ದಾರೆ.

IND vs AUS: ಮೊದಲ ಬ್ಯಾಚ್‌ನಲ್ಲಿ ಆಸೀಸ್‌ಗೆ ತೆರಳಿದ ಕೊಹ್ಲಿ, ರೋಹಿತ್‌, ರಾಹುಲ್‌

"ನಾನು ಖಂಡಿತವಾಗಿಯೂ ಉದ್ಯಮಿಯಾಗುತ್ತಿದ್ದೆ, ಶೇಕಡಾ 100% ರಷ್ಟಿದೆ. ನನಗೆ ಬ್ಯುಸಿನೆಸ್‌ ಜ್ಞಾನವಿದೆ. ನಾನು ಮದುವೆಯಾದಾಗಿನಿಂದ, ನನ್ನ ಹೆಂಡತಿ ಸಂಪೂರ್ಣ ಬ್ಯುಸಿನೆಸ್‌ ಹಿನ್ನೆಲೆಯಿಂದ, ವ್ಯಾಪಾರ ಕುಟುಂಬದಿಂದ ಬಂದವಳು. ಅವರೊಂದಿಗೆ ಮಾತನಾಡುವುದರಿಂದ ನಾನು ಕ್ರಿಕೆಟ್ ಆಡದಿದ್ದರೆ ನನ್ನ ಹಣವನ್ನು ಹೇಗೆ ದ್ವಿಗುಣಗೊಳಿಸಬಹುದಿತ್ತು, ಮೂರು ಪಟ್ಟು ಹೆಚ್ಚಿಸಬಹುದಿತ್ತು ಅಥವಾ ನಾಲ್ಕು ಪಟ್ಟು ಹೆಚ್ಚಿಸಬಹುದಿತ್ತು ಎಂದು ನನಗೆ ಅರಿವಾಯಿತು," ಎಂದು ತಿಳಿಸಿದ್ದಾರೆ.