ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ ಒಳಗೊಂಡಂತೆ ಸಾರ್ವಕಾಲಿಕ ಐಪಿಎಲ್‌ ಪ್ಲೇಯಿಂಗ್‌ XI ಕಟ್ಟಿದ ಎಬಿಡಿ!

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದಿಗ್ಗಜ ಎಬಿ ಡಿ ವಿಲಿಯರ್ಸ್‌, ಸ್ಟಾರ್‌ ಆಟಗಾರರನ್ನು ಒಳಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಾರ್ವಕಾಲಿಕ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದ್ದಾರೆ. ತಮ್ಮ ಆರ್‌ಸಿಬಿ ಮಾಜಿ ಸಹ ಆಟಗಾರ ವಿರಾಟ್‌ ಕೊಹ್ಲಿಗೂ ಸ್ಥಾನವನ್ನು ನೀಡಿದ್ದಾರೆ.

ಸಾರ್ವಕಾಲಿಕ ಐಪಿಎಲ್‌ ಪ್ಲೇಯಿಂಗ್‌ XI ಪ್ರಕಟಿಸಿದ ಎಬಿಡಿ!

ಸಾರ್ವಕಾಲಿಕ ಐಪಿಎಲ್‌ ಪ್ಲೇಯಿಂಗ್‌ XI ಪ್ರಕಟಿಸಿದ ಎಬಿ ಡಿ ವಿಲಿಯರ್ಸ್‌.

Profile Ramesh Kote Aug 5, 2025 11:03 PM

ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದಿಗ್ಗಜ ಎಬಿ ಡಿ ವಿಲಿಯರ್ಸ್‌(AB De Villiers) ಅವರು ಸ್ಟಾರ್‌ ಆಟಗಾರರನ್ನು ಒಳಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (All time IPL XI) ಸಾರ್ವಕಾಲಿಕ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದ್ದಾರೆ. ತಮ್ಮ ಆರ್‌ಸಿಬಿ ಮಾಜಿ ಸಹ ಆಟಗಾರ ವಿರಾಟ್‌ ಕೊಹ್ಲಿಗೂ (Virat Kohli) ಸ್ಥಾನವನ್ನು ನೀಡಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ದಿಗ್ಗಜ ಎಂಎಸ್‌ ಧೋನಿಗೆ ನಾಯಕತ್ವವನ್ನು ನೀಡಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆರಿಸಿದ್ದಾರೆ.

2008ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಎಬಿ ಡಿ ವಿಲಿಯರ್ಸ್‌ ಮೂರು ವರ್ಷಗಳ ಕಾಲ ಇದೇ ಫ್ರಾಂಚೈಸಿ ಪರ ಆಡಿದ್ದರು. ನಂತರ 2011ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗುವ ಮೂಲಕ 2021ರ ತನಕ ಇದೇ ತಂಡದ ಪರ ಆಡುವ ಮೂಲಕ ದಿಗ್ಗಜರಾಗಿದ್ದಾರೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 5162 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರು ಇದೀಗ ಐಪಿಎಲ್‌ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಆರಿಸಿದ್ದಾರೆ.

IPL 2026: ಆರ್‌ಸಿಬಿ ಪರ ಮತ್ತೊಮ್ಮೆ ಆಡ್ತಿರಾ? ಎಬಿ ಡಿ ವಿಲಿಯರ್ಸ್‌ ಕೊಟ್ಟ ಉತ್ತರ ಹೀಗಿದೆ!

ತಮ್ಮ ಸಾರ್ವಕಾಲಿಕ ಐಪಿಎಲ್‌ ಪ್ಲೇಯಿಂಗ್‌ XIನಲ್ಲಿ ಎಬಿಡಿ, ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮ್ಯಾಥ್ಯೂ ಹೇಡನ್‌ ಹಾಗೂ ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. ರೋಹಿತ್‌ ಶರ್ಮಾ 272 ಪಂದ್ಯಗಳಿಂದ 7046 ರನ್‌ ಬಾರಿಸಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಐದು ಬಾರಿ ಚಾಂಪಿಯನ್‌ ಆಗಿದೆ. ರೋಹಿತ್‌ ಶರ್ಮಾ 2013 ರಿಂದ 2023ರವರೆಗೆ ಮುಂಬೈ ಫ್ರಾಂಚೈಸಿಯಲ್ಲಿ ಮುನ್ನಡೆಸಿದ್ದಾರೆ. ಇನ್ನು ಮ್ಯಾಥ್ಯೂ ಹೇಡನ್‌ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಪರ 1107 ರನ್‌ಗಳನ್ನು ಗಳಿಸಿದ್ದಾರೆ.

ಮೂರನೇ ಕ್ರಮಾಂಕಕ್ಕೆ ತಮ್ಮ ಗೆಳೆಯ ವಿರಾಟ್‌ ಕೊಹ್ಲಿಯನ್ನು ಎಬಿಡಿ ಆರಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ 8661 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ನಂತರದ ಎರಡು ಕ್ರ,ಮಾಂಕಗಳಿಗೆ ಕ್ರಮವಾಗಿ ಸೂರ್ಯಕುಮಾರ್‌ ಯಾದವ್‌ ಹಾಗೂ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಆರ್‌ಸಿಬಿ ದಿಗ್ಗಜ ಆಯ್ಕೆ ಮಾಡಿದ್ದಾರೆ. ನಾಯಕ ಹಾಗೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಹಾಗೂ ನಾಯಕನಾಗಿ ಎಂಎಸ್‌ ಧೋನಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಎಂಎಸ್‌ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಐದು ಬಾರಿ ಚಾಂಪಿಯನ್‌ ಆಗಿದೆ.

WCL 2025: ಸಚಿನ್‌ ತೆಂಡೂಲ್ಕರ್‌ ಅಲ್ಲ! ತಮ್ಮ ನೆಚ್ಚಿನ ಮೂವರು ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಎಬಿಡಿ!

ಎಬಿಡಿ ಅವರ ಪ್ಲೇಯಿಂಗ್‌ XIನಲ್ಲಿ ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಲಸಿತ್‌ ಮಾಲಿಂಗ ಸ್ಥಾನಗಳನ್ನು ಪಡೆದಿದ್ದಾರೆ. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳಾಗಿ ಡೇನಿಯಲ್‌ ವೆಟ್ಟೋರಿ ಹಾಗೂ ಯುಜ್ವೇಂದ್ರ ಚಹಲ್‌ ಸ್ಥಾನವನ್ನು ಪಡೆದಿದ್ದಾರೆ.

ಎಬಿಡಿ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ XI: ರೋಹಿತ್‌ ಶರ್ಮಾ, ಮ್ಯಾಥ್ಯೂ ಹೇಡನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಎಬಿ ಡಿವಿಲಿಯರ್ಸ್‌, ಹಾರ್ದಿಕ್‌ ಪಾಂಡ್ಯ, ಎಂಎಸ್‌ ಧೋನಿ (ನಾಯಕ, ವಿ.ಕೀ),ಡೇನಿಯಲ್‌ ವೆಟ್ಟೋರಿ, ಜಸ್‌ಪ್ರೀತ್‌ ಬುಮ್ರಾ, ಲಸಿತ್‌ ಮಾಲಿಂಗ ಹಾಗೂ ಯುಜ್ವೇಂದ್ರ ಚಹಲ್‌