IND vs PAK: ಏಷ್ಯಾ ಕಪ್ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಡದೇ ಇರಲು ಕಾರಣವೇನು?
2025ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂರು ಬದಲಾವಣೆಗಳೊಂದಿಗೆ ಆಡಿತ್ತು. ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ಫೈನಲ್‌ಗೆ ಅಲಭ್ಯರಾಗಿದ್ದರು.

ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಡಲಿಲ್ಲ. -

ಬರಹ: ಕೆ ಎನ್ ರಂಗು, ಚಿತ್ರದುರ್ಗ
ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಅಂದ ಹಾಗೆ ಭಾರತ ತಂಡ ಈ ಪಂದ್ಯಕ್ಕೆ ತನ್ನ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik pandya) ಆಡಲಿಲ್ಲ. ಅವರ ಬದಲು ರಿಂಕು ಸಿಂಗ್ ಆಡಿದ್ದರು. ಅಂದ ಹಾಗೆ ಹಾರ್ದಿಕ್ ಪಾಂಡ್ಯ ಏಕೆ ಆಡಲಿಲ್ಲ ಎಂದು ಇಲ್ಲಿ ವಿವರಿಸಲಾಗಿದೆ.
ಶ್ರೀಲಂಕಾ ವಿರುದ್ದ ಆಡಿದ್ದ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರ ಬದಲು ಜಸ್‌ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಪ್ಲೇಯಿಂಗ್ XIಗೆ ಬಂದರು. ಆದರೆ, ಹಾರ್ದಿಕ್ ಪಾಂಡ್ಯ ಅವರ ಬದಲು ಮ್ಯಾಚ್ ಫಿನಿಷರ್ ಆಗಿ ರಿಂಕು ಸಿಂಗ್ ಈ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಆಡಿದರು. ಆದರೆ, ಎಲ್ಲಾ ಪಂದ್ಯಗಳನ್ನುಆಡಿದ್ದ ಹಾರ್ದಿಕ್ ಪ್ರಮುಖ ಪಂದ್ಯದಲ್ಲಿ ಹೊರಗುಳಿದರು. ಇದಕ್ಕೆ ಕಾರಣವೇನೆಂದು ಇಲ್ಲಿ ತಿಳಿಸಲಾಗಿದೆ.
IND vs PAK: ಟಾಸ್ ವೇಳೆ ರವಿ ಶಾಸ್ತ್ರಿ ಜೊತೆ ಮಾತನಾಡಲು ಸಲ್ಮಾನ್ ಆಘಾ ನಿರಾಕರಣೆ!
ಹಾರ್ದಿಕ್ ಪಾಂಡ್ಯ ಏಕೆ ಆಡಲಿಲ್ಲ?
ಶುಕ್ರವಾರ ಶ್ರೀಲಂಕಾ ವಿರುದ್ಧದ ಕೊನೆಯ ಸೂಪರ್ ಫೋರ್ ಹಂತದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಆರಂಭಿಕ ಓವರ್ ಬೌಲ್ ಮಾಡಿದ ನಂತರ ಗಾಯಕ್ಕೆ ತುತ್ತಗಿ ಮೈದಾನದಿಂದ ಹೊರಗೆ ಹೋಗಿದ್ದರು. ಪ್ರಾಥಮಿಕ ಚಿಕಿತ್ಸಾ ಹಂತದಲ್ಲಿ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ, ಫೈನಲ್ ಪಂದ್ಯಕ್ಕೆ ಕೇವಲ ಒಂದು ದಿನದ ಬಿಡುವು ಸಿಕ್ಕ ಕಾರಣ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.
🚨 Playing XI 🚨
— AsianCricketCouncil (@ACCMedia1) September 28, 2025
Teams get game-ready for one last time this tournament. 👕
Will Abhi-Gill star for India yet again or will the fiery duo of Shaheen-Rauf break the back of the opposition's batting?#INDvPAK #DPWorldAsiaCup2025 #Final #ACC pic.twitter.com/Yqa5su6VMH
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಟೀಮ್ ಇಂಡಿಯಾಗೆ ದೊಡ್ಡ ಹೊಡೆತವಾಗಿದೆ, ಏಕೆಂದರೆ ಹಾರ್ದಿಕ್ ಪಾಂಡ್ಯ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನ ವಿರುದ್ಧ ಹಾರ್ದಿಕ್ ಅಸಾಧಾರಣ ದಾಖಲೆಯನ್ನು ಹೊಂದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಪಾಕ್ ವಿರುದ್ಧ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 15 ವಿಕೆಟ್‌ಗಳನ್ನು ಪಡೆದಿದ್ದಾರೆ.
ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಸ್ಟಾರ್ ಆಲ್‌ರೌಂಡರ್ 98 ವಿಕೆಟ್‌ಗಳನ್ನು ಪಡೆದಿದ್ದರು. ಅರ್ಷದೀಪ್ (101) ಮಾತ್ರ ಹೆಚ್ಚು ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಆರು ಪಂದ್ಯಗಳನ್ನಾಡಿರುವ ಹಾರ್ದಿಕ್ 48 ರನ್ ಗಳಿಸಿ, ನಾಲ್ಕು ವಿಕೆಟ್ ಕಬಳಿಸಿದ್ದರು.