Hockey Maestro Dhyanchand Birthday Celebration: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಜನ್ಮದಿನಾಚರಣೆ
ಕ್ರೀಡೆಯ ಬಗ್ಗೆ ಧ್ಯಾನ್‌ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಯುವ ಕ್ರೀಡಾಪಟು ಗಳು ಅನುಕರಿಸಿದರೆ ಯಶಸ್ಸು ಕಾಣಲು ಸಾಧ್ಯ.ಧ್ಯಾನ್ ಚಂದ್ರ ಅವರ ಸಾಧನೆಯನ್ನು ಗುರುತಿಸಿ ಭಾರತ ಸರಕಾರ ಪದ್ಮಭೂಷಣ ನೀಡಿ ಗೌರವಿಸಿದೆ. ಮೇಜರ್ ಧ್ಯಾನ್ ಚಂದ್ ಅವರ ಸಾಧನೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನು ಕ್ರೀಡಾದಿನಾಚರಣೆಯಾಗಿ ಆಚರಿಸುತ್ತಿರುವುದು ಕ್ರೀಡಾಪಟುಗಳಿಗೆ ನೀಡಿದ ಗೌರವವಾಗಿದೆ

ಹಾಕಿ ಕ್ರೀಡೆಯನ್ನು ಜಗತ್ತು ಬೆರಗುಕಣ್ಣಿನಿಂದ ನೋಡುವಂತೆ ಮಾಡಿದ್ದ ಮಾಂತ್ರಿಕ ಧ್ಯಾನ್ ಚಂದ್ ಅವರ ಜೀವನ ಸಾಧನೆ ಎಲ್ಲಾ ಕ್ರೀಡಾಸಾಧಕರಿಗೆ ಪ್ರೇರಣೆಯಾಗಿದೆ ಎಂದು ಸರ್.ಎಂ.ವಿ.ಶಾಲೆಯ ದೈಹಿಕ ಶಿಕ್ಷಕ ಲಿಂಗೇಶ್ ತಿಳಿಸಿದರು. -

ಚಿಕ್ಕಬಳ್ಳಾಪುರ: ಹಾಕಿ ಕ್ರೀಡೆಯನ್ನು ಜಗತ್ತು ಬೆರಗುಕಣ್ಣಿನಿಂದ ನೋಡುವಂತೆ ಮಾಡಿದ್ದ ಮಾಂತ್ರಿಕ ಧ್ಯಾನ್ ಚಂದ್ ಅವರ ಜೀವನ ಸಾಧನೆ ಎಲ್ಲಾ ಕ್ರೀಡಾಸಾಧಕರಿಗೆ ಪ್ರೇರಣೆಯಾಗಿದೆ ಎಂದು ಸರ್.ಎಂ.ವಿ.ಶಾಲೆಯ ದೈಹಿಕ ಶಿಕ್ಷಕ ಲಿಂಗೇಶ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾಇಲಾಖೆ ಮತ್ತು ಚಂದ್ರು ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಕಾವಲು ಸಮಿತಿಗಳು ಬಲವರ್ಧನೆಯಾದಲ್ಲಿ ಪೋಕ್ಸೋ ಪ್ರಕರಣಗಳ ತಡೆಗಟ್ಟಬಹುದು
ಕ್ರೀಡೆಯ ಬಗ್ಗೆ ಧ್ಯಾನ್‌ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಯುವ ಕ್ರೀಡಾಪಟು ಗಳು ಅನುಕರಿಸಿದರೆ ಯಶಸ್ಸು ಕಾಣಲು ಸಾಧ್ಯ. ಧ್ಯಾನ್ ಚಂದ್ರ ಅವರ ಸಾಧನೆಯನ್ನು ಗುರುತಿಸಿ ಭಾರತ ಸರಕಾರ ಪದ್ಮಭೂಷಣ ನೀಡಿ ಗೌರವಿಸಿದೆ. ಮೇಜರ್ ಧ್ಯಾನ್ ಚಂದ್ ಅವರ ಸಾಧನೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನು ಕ್ರೀಡಾ ದಿನಾಚರಣೆಯಾಗಿ ಆಚರಿಸುತ್ತಿರುವುದು ಕ್ರೀಡಾಪಟು ಗಳಿಗೆ ನೀಡಿದ ಗೌರವವಾಗಿದೆ. ಮೂರು ದಶಕಗಳಿಗೂ ಹೆಚ್ಚುಕಾಲ ಹಾಕಿ ಎಂಬ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಿ ಜಗತ್ತೇ ಬೆರಗಾಗುವಂತೆ ಮಾಡಿದ್ದವರು ಧ್ಯಾನ್ ಚಂದ್ ಅವರಾಗಿದ್ದರು ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೇಜರ್ ಧ್ಯಾನ್‌ಚಂದ್ರ ಜನ್ಮದಿನಾಚರಣೆ ಅಂಗವಾಗಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕ್ರೀಡಾಪ್ರೇಮಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಈ ವೇಳೆ ಅಥ್ಲೆಟಿಕ್ ತರಬೇತುದಾರ ಚಂದ್ರು,ಪೋಟೋ ಸ್ಟುಡಿಯೋ ಶ್ರೀನಿವಾಸ್, ಎಎಸ್‌ಐ ರಮೇಶ್, ನಾಗರಾಜ್, ಪ್ರೊ.ಲೋಕನಾಥ್, ಮಿಲ್ಟನ್ ವೆಂಕಟೇಶ್, ಸಹಾಯಕ ನಿರ್ದೇಶಕಿ ಜಯ ಲಕ್ಷ್ಮೀ ಬಾಯಿ, ವಕೀಲ ಮುನಿರಾಜು,ಉಪನ್ಯಾಸಕ ರಾಜಶೇಖರ್ ಮತ್ತಿತರರು ಇದ್ದರು.