ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs IND 1st T20I: ಮೊದಲ ಟಿ20 ಪಂದ್ಯದ ಟೀಮ್‌ ಕಾಂಬಿನೇಷನ್ ತಿಳಿಸಿದ ಸೂರ್ಯಕುಮಾರ್‌

Suryakumar Yadav: ನಾಯಕನ ಈ ಮಾತು ಕೇಳುವಾಗ ಜಸ್‌ಪ್ರೀತ್‌ ಬುಮ್ರಾ ಮತ್ತು ಆಲ್‌ರೌಂಡರ್‌ ಶಿವಂ ದುಬೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅರ್ಶ್‌ದೀಪ್‌ ಮತ್ತು ಹರ್ಷೀತ್‌ ರಾಣಾ ಬೆಂಚ್‌ ಕಾಯಬೇಕಾಗಬಹುದು. ಸ್ಪಿನ್ನರ್‌ಗಳಾಗಿ ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಮತ್ತು ವರಣ್‌ ಚ್ರವರ್ತಿ ಮೊದಲ ಆಯ್ಕೆಯಾಗಿದ್ದಾರೆ.

ಟೀಮ್‌ ಕಾಂಬಿನೇಷನ್ ಸುಳಿವು ಬಿಟ್ಟುಕೊಟ್ಟ ಸೂರ್ಯಕುಮಾರ್‌

-

Abhilash BC Abhilash BC Oct 28, 2025 4:20 PM

ಕ್ಯಾನೆಬೆರಾ: ಆಸ್ಟ್ರೇಲಿಯಾ ಮತ್ತು ಭಾರತ(AUS vs IND 1st T20I) ತಂಡಗಳ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ (ಅಕ್ಟೋಬರ್ 29) ಮನುಕಾ ಓವಲ್(Manuka Oval) ಸ್ಟೇಡಿಯಂನಲ್ಲಿ ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಿಂದ ಸೋಲು ಕಂಡಿತ್ತು. ಇದಕ್ಕೆ ಟಿ20ಯಲ್ಲಿ ಸೇಡು ತೀರಿಸಿಕೊಂಡೀತೇ ಎಂಬುದು ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ. ಪಂದ್ಯಕ್ಕೂ ಮುನ್ನ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ತಮ್ಮ ಆಡುವ ಬಳಗದ ಕಾಂಬಿನೇಷನ್‌ ರಿವೀಲ್‌ ಮಾಡಿದ್ದಾರೆ.

ಮಂಗಳವಾರ ನಡೆದ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೂರ್ಯಕುಮಾರ್‌, ಪರಿಸ್ಥಿತಿ ಏನೇ ಇರಲಿ ತಂಡವು ಒಬ್ಬ ವೇಗದ ಬೌಲರ್ ಜತೆಗೆ ಒಬ್ಬ ವೇಗದ ಬೌಲಿಂಗ್ ಆಲ್‌ರೌಂಡರ್ ಮತ್ತು ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ಸಂಯೋಜನೆಯ ಮೇಲೆ ವಿಶ್ವಾಸ ಹೊಂದಿದೆ ಎಂದು ಹೇಳಿದರು.

ನಾಯಕನ ಈ ಮಾತು ಕೇಳುವಾಗ ಜಸ್‌ಪ್ರೀತ್‌ ಬುಮ್ರಾ ಮತ್ತು ಆಲ್‌ರೌಂಡರ್‌ ಶಿವಂ ದುಬೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅರ್ಶ್‌ದೀಪ್‌ ಮತ್ತು ಹರ್ಷೀತ್‌ ರಾಣಾ ಬೆಂಚ್‌ ಕಾಯಬೇಕಾಗಬಹುದು. ಸ್ಪಿನ್ನರ್‌ಗಳಾಗಿ ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಮತ್ತು ವರಣ್‌ ಚ್ರವರ್ತಿ ಮೊದಲ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ AUS vs IND 1st T20I: ಮೊದಲ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ

"ಪರಿಸ್ಥಿತಿಗಳ ಆಧಾರದ ಮೇಲೆ ತಂಡ ಸಂಯೋಜನೆಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಏಕೆಂದರೆ ನಾವು ದಕ್ಷಿಣ ಆಫ್ರಿಕಾಕ್ಕೆ ಹೋದಾಗ, ನಾವು ಒಬ್ಬ ವೇಗದ ಬೌಲರ್, ಒಬ್ಬ ಆಲ್‌ರೌಂಡರ್ ಮತ್ತು ಮೂವರು ಸ್ಪಿನ್ನರ್‌ಗಳೊಂದಿಗೆ ಆಡಿದ್ದೇವೆ. ನಾವು ಪಂದ್ಯಗಳನ್ನು ಏಷ್ಯಾದಲ್ಲಿ ಅಥವಾ ಏಷ್ಯಾದ ಹೊರಗೆ ಎಂದು ನೋಡುತ್ತಿಲ್ಲ. ನಾವು ವಿಶ್ವಕಪ್‌ಗಾಗಿ ತಂಡ ನಿರ್ಮಿಸುತ್ತಿದ್ದೇವೆ" ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಭಾರತ ಸಂಭಾವ್ಯ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಸಂಜು ಸ್ಯಾಮ್ಸನ್‌, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ರಿಂಕು ಸಿಂಗ್.