ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 4th Test: ರಿಷಭ್‌ ಪಂತ್‌ ಬಗ್ಗೆ ಟೀಮ್‌ ಇಂಡಿಯಾಗೆ ಎಚ್ಚರಿಕೆ ಕೊಟ್ಟ ರವಿ ಶಾಸ್ತ್ರಿ!

ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. ರಿಷಭ್‌ ಪಂತ್‌ ಅವರು ವಿಕೆಟ್‌ ಕೀಪಿಂಗ್‌ಗೆ ಸಂಪೂರ್ಣ ಫಿಟ್‌ನೆಸ್‌ ಇದ್ದರೆ ಮಾತ್ರ, ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಆಡಬೇಕು, ಇಲ್ಲವಾದಲ್ಲಿ ಆಡಬಾರದು ಎಂದು ಅವರು ಸೂಚನೆ ನೀಡಿದ್ದಾರೆ.

ರಿಷಭ್‌ ಪಂತ್‌ ಬಗ್ಗೆ ಟೀಮ್‌ ಇಂಡಿಯಾಗೆ ಎಚ್ಚರಿಕೆ ಕೊಟ್ಟ ರವಿ ಶಾಸ್ತ್ರಿ!

ಭಾರತ ತಂಡಕ್ಕೆ ಮಹತ್ವದ ಸಲಹೆ ನೀಡಿದ ರವಿ ಶಾಸ್ತ್ರಿ.

Profile Ramesh Kote Jul 18, 2025 6:04 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜುಲೈ 23ರಂದು ಮ್ಯಾಂಚೆಸ್ಟರ್‌ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೂ (IND vs ENG) ಮುನ್ನ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ (Ravi Shastri) ಪ್ರವಾಸಿ ತಂಡಕ್ಕೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್‌ (Rishabh Pant) ವಿಕೆಟ್‌ ಕೀಪಿಂಗ್‌ ನಿರ್ವಹಿಸಲು ಸಾಧ್ಯವಿಲ್ಲವಾದರೆ, ಅವರು ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಆಡಬಾರದು ಎಂದು ಅವರು ಹೇಳಿದ್ದಾರೆ. ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಪಂತ್‌ ವಿಕೆಟ್‌ ಕೀಪಿಂಗ್‌ ವೇಳೆ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ್‌ ಜುರೆಲ್‌ ಅವರು ವಿಕೆಟ್ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಭಾರತ ತಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಗೆಲ್ಲಬಹುದಾದ ಅವಕಾಶವನ್ನು ಕೈ ಚೆಲ್ಲಿಕೊಂಡಿತ್ತು. 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, ರವೀಂದ್ರ ಜಡೇಜಾ ಅವರ ಏಕಾಂಗಿ ಹೋರಾಟದ ಹೊರತಾಗಿಯೂ 170 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಟೀಮ್‌ ಇಂಡಿಯಾ 22 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಪಂತ್‌ ಕ್ರಮವಾಗಿ 74 ರನ್‌ ಹಾಗೂ 33 ರನ್‌ಗಳನ್ನು ಕಲೆ ಹಾಕಿದ್ದರು. ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಒಂದು ವಾರ ಸಮಯಾವಕಾಶವಿತ್ತು. ಹಾಗಾಗಿ ಪಂತ್‌ ಗಾಯದಿಂದ ಗುಣಮುಖರಾಗಿ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡಬಹುದು. ಆದರೆ, ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ, ರಿಷಭ್‌ ಪಂತ್‌ಗೆ ಸಂಬಂಧಿಸಿದಂತೆ ಭಾರತ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!

ಐಸಿಸಿ ಜತೆ ಮಾತನಾಡಿದ ರವಿ ಶಾಸ್ತ್ರಿ,"ರಿಷಭ್‌ ಪಂತ್‌ ಫೀಲ್ಡಿಂಗ್‌ನಲ್ಲಿ ತೊಡಗಿದರೆ, ಅವರು ಗಾಯ ಇನ್ನಷ್ಟು ಕೆಟ್ಟದಾಗಲಿದೆ. ಆದರೆ, ವಿಕೆಟ್‌ ಕೀಪಿಂಗ್‌ ಗ್ಲೌಸ್‌ನಲ್ಲಿ ಆಡಿದರೆ, ಅವರು ಬೆರಳು ಅದರಿಂದ ರಕ್ಷಣೆ ಪಡೆಯಲಿದೆ. ಗ್ಲೌಸ್‌ ಇಲ್ಲದೆ ಆಡಿದರೆ, ಅಂದರೆ ಫೀಲ್ಡಿಂಗ್‌ನಲ್ಲಿ ತೊಡಗಿದರೆ ಯಾವುದೇ ಸಮಯದಲ್ಲಿ ಚೆಂಡು ಅವರ ಗಾಯದ ಬೆರಳಿಗೆ ತಗುಲಬಹುದು. ಆ ಮೂಲಕ ಅವರ ಗಾಯ ಇನ್ನಷ್ಟು ಗಂಭೀರವಾಗಲಿದೆ. ಹಾಗಾಗಿ ಅವರು ವಿಕೆಟ್‌ ಕೀಪಿಂಗ್‌ ನಿರ್ವಹಿಸುವ ಜೊತೆಗೆ ಬ್ಯಾಟಿಂಗ್‌ ನಡೆಸಲಿದೆ. ಇದರಲ್ಲಿ ಯಾವುದಾದರೂ ಒಂದು ಮಾಡಲು ಸಾಧ್ಯವಿಲ್ಲ. ಅವರ ಗಾಯ ಗಂಭೀರವಾಗಿದ್ದರೆ, ಅವರು ದಿ ಓವಲ್‌ನಲ್ಲಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅಂದ ಹಾಗೆ ಮುಂದಿನ ಪಂದ್ಯಕ್ಕೆ ಅವರಿಗೆ 9 ದಿನಗಳ ಕಾಲ ವಿಶ್ರಾಂತಿ ಸಿಕ್ಕಿದೆ," ಎಂದು ಅವರು ತಳಿಸಿದ್ದಾರೆ.

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

ಭರ್ಜರಿ ಫಾರ್ಮ್‌ನಲ್ಲಿರುವ ಪಂತ್‌

ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ಅದ್ಭುತ ಲಯದಲ್ಲಿದ್ದಾರೆ. ಅವರು ಏಕೈಕ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕವನ್ನು ಸಿಡಿಸಿದ ವಿಶ್ವದ ಎರಡನೇ ವಿಕೆಟ್‌ ಕೀಪಿರ್‌ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ 134 ರನ್‌ಗಳನ್ನು ಕಲೆ ಹಾಕಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ 118 ರನ್‌ಗಳನ್ನು ಸಿಡಿಸಿದ್ದರು. ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅವರು 27 ಬೌಂಡರಿಗಳು ಹಾಗೂ 9 ಸಿಕ್ಸರ್‌ಗಳನ್ನು ಬಾರಿಸಿದ್ದರು. ನಂತರ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ65 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಲಾರ್ಡ್ಸ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ 74 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಈ ಸರಣಿಯಲ್ಲಿ ಒಟ್ಟು 425 ರನ್‌ಗಳನ್ನು ಸಿಡಿಸಿದ್ದಾರೆ.