ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Root: ಶತಕ ಬಾರಿಸಿ ಹಲವು ದಿಗ್ಗಜರ ದಾಖಲೆ ಮುರಿದ ಜೋ ರೂಟ್‌

ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರೂಟ್‌ ಅವರು ಭಾರತದ ಸುನೀಲ್‌ ಗವಾಸ್ಕರ್‌ ದಾಖಲೆಯನ್ನು ಸರಿಗಟ್ಟಿದರು. ರೂಟ್‌ ಭಾರತ ವಿರುದ್ಧ 13 ಟೆಸ್ಟ್‌ ಶತಕ ಬಾರಿಸಿದ್ದರೆ, ಗವಾಸ್ಕರ್‌ ವೆಸ್ಟ್‌ ಇಂಡೀಸ್‌ ವಿರುದ್ಧ 13 ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ 19 ಶತಕ ಬಾರಿಸಿರುವ ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.

ಹಲವು ದಿಗ್ಗಜ ಬ್ಯಾಟರ್‌ಗಳ ದಾಖಲೆ ಮುರಿದ ಜೋ ರೂಟ್‌

Abhilash BC Abhilash BC Aug 3, 2025 10:38 PM

ಲಂಡನ್‌: ಭಾರತ ವಿರುದ್ಧದ ಆ್ಯಂಡರ್‌ಸನ್‌-ತೆಂಡುಲ್ಕರ್‌ ಟೆಸ್ಟ್‌( IND vs ENG 5th Test) ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆದಿದಿರುವ ಜೋ ರೂಟ್‌(Joe Root) ಅಂತಿಮ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಮತ್ತಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ನಾಲ್ಕನೇ ದಿನದಾಟವಾದ ಭಾನುವಾರ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತ ರೂಟ್‌ ಅಮೋಘ ಶತಕ ಬಾರಿಸಿದರು. 152 ಎಸೆತ ಎದುರಿಸಿದ ರೂಟ್‌ 105 ರನ್‌ ಗಳಿಸಿದರು. ಇದೇ ವೇಳೆ ಅವರು ಅತ್ಯಧಿಕ ಟೆಸ್ಟ್‌ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು. ಈ ಹಾದಿಯಲ್ಲಿ ಅವರು ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ದಾಖಲೆಯನ್ನು ಮುರಿದರು. ಸಂಗಕ್ಕರ 38 ಶತಕ ಬಾರಿಸಿದ್ದರೆ, ರೂಟ್‌ 39 ಶತಕ ಬಾರಿಸಿದ್ದಾರೆ.

ಅತ್ಯಧಿಕ ಟೆಸ್ಟ್‌ ಶತಕ ದಾಖಲೆ ಭಾರತದ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಅವರು 51 ಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್‌ ಕ್ಯಾಲಿಸ್‌(45) ಮತ್ತು ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್‌(41) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಇದು ಮಾತ್ರವಲ್ಲದೆ ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರೂಟ್‌ ಅವರು ಭಾರತದ ಸುನೀಲ್‌ ಗವಾಸ್ಕರ್‌ ದಾಖಲೆಯನ್ನು ಸರಿಗಟ್ಟಿದರು. ರೂಟ್‌ ಭಾರತ ವಿರುದ್ಧ 13 ಟೆಸ್ಟ್‌ ಶತಕ ಬಾರಿಸಿದ್ದರೆ, ಗವಾಸ್ಕರ್‌ ವೆಸ್ಟ್‌ ಇಂಡೀಸ್‌ ವಿರುದ್ಧ 13 ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ 19 ಶತಕ ಬಾರಿಸಿರುವ ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.



ಈ ದಾಖಲೆ ಮಾತ್ರವಲ್ಲದೆ ಸರಣಿಯೊಂದರಲ್ಲಿ ಭಾರತ ವಿರುದ್ಧ ಅತಿ ಹೆಚ್ಚು ಬಾರಿ 500+ ರನ್‌ಗಳಿಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹಿರಿಮೆಗೂ ರೂಟ್‌ ಪಾತ್ರರಾದರು. ಒಟ್ಟು ಮೂರು ಬಾರಿ ಅವರು ಈ ಸಾಧನೆ ಮಾಡಿದಾರೆ. ಎವರ್ಟನ್ ವೀಕ್ಸ್‌, ಜಹೀರ್ ಅಬ್ಬಾಸ್, ಯೂನಿಸ್ ಖಾನ್, ಗ್ಯಾರಿ ಸೋಬರ್ಸ್ ಮತ್ತು ರಿಕಿ ಪಾಂಟಿಂಗ್ ತಲಾ 2 ಬಾರಿ 500+ ಮೊತ್ತ ಪೇರಿಸಿ ಜಂಟಿ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ IND vs ENG: 36 ವರ್ಷಗಳಲ್ಲಿ ಮೊದಲ ಬಾರಿಗೆ!; ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್‌, ಜಡೇಜ, ರಾಹುಲ್‌ ವಿಶೇಷ ದಾಖಲೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 6 ಸಾವಿರ ರನ್‌ ಪೂರೈಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ರೂಟ್‌ ಪಾಲಾಯಿತು.