ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 36 ವರ್ಷಗಳಲ್ಲಿ ಮೊದಲ ಬಾರಿಗೆ!; ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್‌, ಜಡೇಜ, ರಾಹುಲ್‌ ವಿಶೇಷ ದಾಖಲೆ

ಟೆಸ್ಟ್ ಸರಣಿಯೊಂದರಲ್ಲಿ ವೈಯಕ್ತಿಕವಾಗಿ 500+ ರನ್ ಗಳಿಸಿದ ಐದನೇ ತ್ರಿವಳಿ ಜೋಡಿ ಎನಿಸಿಕೊಂಡಿತು. 1947 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಅಲನ್ ಮೆಲ್ವಿಲ್ಲೆ, ಬ್ರೂಸ್ ಮಿಚೆಲ್ ಮತ್ತು ಡಡ್ಲಿ ನೂರ್ಸೆ ಈ ಸಾಧನೆ ಮಾಡಿದ ಮೊದಲ ತ್ರಿವಳಿ ಎನಿಸಿಕೊಂಡಿದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್‌, ಜಡೇಜ, ರಾಹುಲ್‌ ವಿಶೇಷ ದಾಖಲೆ

Abhilash BC Abhilash BC Aug 3, 2025 5:00 PM

ಲಂಡನ್‌: 2025ರ ಇಂಗ್ಲೆಂಡ್‌(IND vs ENG) ಪ್ರವಾಸದ ಆಂಡರ್ಸನ್-ತೆಂಡೂಲ್ಕರ್(Anderson-Tendulkar Trophy 2025) ಟೆಸ್ಟ್‌ ಟ್ರೋಫಿಯಲ್ಲಿ ಭಾರತ ತಂಡ ಮತ್ತು ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ, ಭಾರತೀಯ ಬ್ಯಾಟ್ಸ್‌ಮನ್‌ಗಳು ಅಸಾಧಾರಣ ಪ್ರದರ್ಶನ ನೀಡಿ ಅದ್ಭುತ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತವನ್ನು ಗಳಿಸಿದ ಹಲವಾರು ನಿದರ್ಶನಗಳಿವೆ. ರವೀಂದ್ರ ಜಡೇಜಾ(Ravindra Jadeja), ಕೆಎಲ್ ರಾಹುಲ್(KL Rahul) ಮತ್ತು ಶುಭಮನ್ ಗಿಲ್(Shubman Gill) ಕೂಡ 36 ವರ್ಷಗಳ ಹಳೆಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಟೆಸ್ಟ್ ಸರಣಿಯೊಂದರಲ್ಲಿ ವೈಯಕ್ತಿಕವಾಗಿ 500+ ರನ್ ಗಳಿಸಿದ ಐದನೇ ತ್ರಿವಳಿ ಜೋಡಿ ಎನಿಸಿಕೊಂಡಿತು. 1947 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಅಲನ್ ಮೆಲ್ವಿಲ್ಲೆ, ಬ್ರೂಸ್ ಮಿಚೆಲ್ ಮತ್ತು ಡಡ್ಲಿ ನೂರ್ಸೆ ಈ ಸಾಧನೆ ಮಾಡಿದ ಮೊದಲ ತ್ರಿವಳಿ ಎನಿಸಿಕೊಂಡಿದಾರೆ.

ಭಾರತ ಪರ ಜಡೇಜಾ, ಗಿಲ್‌ ಮತ್ತು ರಾಹುಲ್‌ ಈ ಸಾಧನೆಗೈದ ಬ್ಯಾಟರ್‌ಗಳು. ರಿಷಭ್‌ ಪಂತ್‌ ಅಂತಿಮ ಪಂದ್ಯ ಆಡುತ್ತಿದ್ದರೆ ನಾಲ್ಕು ಮಂದಿ 500 ಪ್ಲಸ್‌ ಮೊತ್ತ ದಾಖಲಿಸಿದ ವಿಶ್ವ ದಾಖಲೆ ಬರೆಯಬಹುತ್ತಿದ್ದು. ಆದರೆ ಪಂತ್‌ ಗಾಯದಿಂದ ಅಂತಿಮ ಪಂದ್ಯದಿಂದ ಹೊರಬಿದ್ದರು.

ಟೆಸ್ಟ್ ಸರಣಿಯಲ್ಲಿ ವೈಯಕ್ತಿಕವಾಗಿ 500+ ರನ್ ಗಳಿಸಿದ ತ್ರಿವಳಿ ಬ್ಯಾಟರ್‌ಗಳು

1947 ರಲ್ಲಿ ಇಂಗ್ಲೆಂಡ್ ವಿರುದ್ಧ: ಅಲನ್ ಮೆಲ್ವಿಲ್ಲೆ, ಬ್ರೂಸ್ ಮಿಚೆಲ್ ಮತ್ತು ಡಡ್ಲಿ ನೂರ್ಸೆ

1968/69 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ: ಇಯಾನ್ ಚಾಪೆಲ್, ಬಿಲ್ ಲಾರಿ ಮತ್ತು ಡೌಗ್ ವಾಲ್ಟರ್ಸ್

1976 ರಲ್ಲಿ ಇಂಗ್ಲೆಂಡ್ ವಿರುದ್ಧ: ರಾಯ್ ಫ್ರೆಡೆರಿಕ್ಸ್, ಗೋರ್ಡನ್ ಗ್ರೀನಿಡ್ಜ್ ಮತ್ತು ವಿವಿಯನ್ ರಿಚರ್ಡ್ಸ್

1989 ರಲ್ಲಿ ಇಂಗ್ಲೆಂಡ್ ವಿರುದ್ಧ: ಡೀನ್ ಜೋನ್ಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ

2025 ರಲ್ಲಿ ಇಂಗ್ಲೆಂಡ್ ವಿರುದ್ಧ: ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್

ಇದನ್ನೂ ಓದಿ IND vs ENG 5th Test: ಯಶಸ್ವಿ ಜೈಸ್ವಾಲ್‌ ಶತಕ, ಮೂರನೇ ದಿನ ಭಾರತ ತಂಡಕ್ಕೆ ಮೇಲುಗೈ!