ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jos Buttler: ಬೌಂಡರಿಗಳ ಮೂಲಕವೇ ದಾಖಲೆ ಬರೆದ ಜಾಸ್‌ ಬಟ್ಲರ್‌

ಸಾಲ್ಟ್ ಮತ್ತು ಬ್ರೂಕ್ 129 ರನ್‌ಗಳ ಪ್ರಬಲ ಪಾಲುದಾರಿಕೆಯನ್ನು ನೀಡಿ, ಸ್ಕೋರ್‌ಬೋರ್ಡ್ ಅನ್ನು ಸ್ಥಿರವಾಗಿರಿಸುವುದರ ಜೊತೆಗೆ ಆತಿಥೇಯರ ಮೇಲೆ ಒತ್ತಡವನ್ನು ಹೇರಿದರು. ಟಾಮ್ ಬ್ಯಾಂಟನ್ 12 ಎಸೆತಗಳಲ್ಲಿ ಅಜೇಯ 29 ರನ್‌ಗಳೊಂದಿಗೆ ಇಂಗ್ಲೆಂಡ್ ತಂಡದ 236 ರನ್‌ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.

ರೋಹಿತ್‌, ವಿರಾಟ್‌ ಜತೆ ಎಲೈಟ್‌ ಪಟ್ಟಿ ಸೇರಿದ ಜಾಸ್‌ ಬಟ್ಲರ್‌

-

Abhilash BC Abhilash BC Oct 21, 2025 12:07 PM

ಕ್ಟ್ರೇಸ್ಟ್‌ಚರ್ಚ್‌: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20(ENG vs NZ ) ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್(Jos Buttler) ಕೇವಲ ಒಂದು ಬೌಂಡರಿ ಬಾರಿಸಿ ವಿಕೆಟ್‌ ಕೈಚೆಲ್ಲಿದರೂ ಈ ಬೌಂಡರಿ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಮತ್ತು ಟಿ20 ಎರಡರಲ್ಲೂ 350 ಅಥವಾ ಅದಕ್ಕಿಂತ ಹೆಚ್ಚು ಬೌಂಡರಿಗಳನ್ನು ಬಾರಿಸಿದ ವಿಶ್ವದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಪಾಲ್ ಸ್ಟಿರ್ಲಿಂಗ್ ಮತ್ತು ಬಾಬರ್ ಅಜಮ್ ಅವರನ್ನೊಳಗೊಂಡ ಎಲೈಟ್‌ ಪಟ್ಟಿ ಸೇರಿದ್ದಾರೆ.

ಫಿಲ್ ಸಾಲ್ಟ್ 56 ಎಸೆತಗಳಲ್ಲಿ 151.79 ಸ್ಟ್ರೈಕ್ ರೇಟ್‌ನಲ್ಲಿ 85 ರನ್ ಗಳಿಸಿದರು. ಅವರಿಗೆ ನಾಯಕ ಹ್ಯಾರಿ ಬ್ರೂಕ್ ಉತ್ತಮ ಬೆಂಬಲ ನೀಡಿದರು. ಅವರು ಕೇವಲ 35 ಎಸೆತಗಳಲ್ಲಿ 78 ರನ್ ಗಳಿಸಿ ನ್ಯೂಜಿಲೆಂಡ್ ಬೌಲರ್‌ಗಳನ್ನು ಸವಾಲಿಗೆ ಸಿಲುಕಿಸಿದರು.

ಸಾಲ್ಟ್ ಮತ್ತು ಬ್ರೂಕ್ 129 ರನ್‌ಗಳ ಪ್ರಬಲ ಪಾಲುದಾರಿಕೆಯನ್ನು ನೀಡಿ, ಸ್ಕೋರ್‌ಬೋರ್ಡ್ ಅನ್ನು ಸ್ಥಿರವಾಗಿರಿಸುವುದರ ಜೊತೆಗೆ ಆತಿಥೇಯರ ಮೇಲೆ ಒತ್ತಡವನ್ನು ಹೇರಿದರು. ಟಾಮ್ ಬ್ಯಾಂಟನ್ 12 ಎಸೆತಗಳಲ್ಲಿ ಅಜೇಯ 29 ರನ್‌ಗಳೊಂದಿಗೆ ಇಂಗ್ಲೆಂಡ್ ತಂಡದ 236 ರನ್‌ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.

ಇದನ್ನೂ ಓದಿ Asia Cup 2025: ಅರ್ಧಶತಕ ಬಾರಿಸಿ ಜೋಸ್‌ ಬಟ್ಲರ್‌ ದಾಖಲೆ ಮುರಿದ ಮುಹಮ್ಮದ್‌ ವಾಸೀಮ್‌!

ಬೃಹತ್‌ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್‌ 18 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಆತಿಥೇಯರು 65 ರನ್‌ಗಳ ಸೋಲನ್ನು ಅನುಭವಿಸಿದರು ಮತ್ತು ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆಯಲ್ಲಿದ್ದಾರೆ.