ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharaja Trophy: ಭರ್ಜರಿ ಗೆಲುವಿನ ಶುಭಾರಂಭ ಕಂಡ ಮಂಗಳೂರು ಡ್ರ್ಯಾಗನ್ಸ್

MD vs GBM: ಚೇಸಿಂಗ್‌ ನಡೆಸಿದ ಗುಲ್ಬರ್ಗಾ ನಾಟಕೀಯ ಕುಸಿತ ಕಂಡು ಆಲೌಟ್‌ ಆಯಿತು. ತಂಡದ ಪರ ಲವನಿತ್ ಸಿಸೋಡಿಯಾ(26) ಮತ್ತು ಪ್ರಜ್ವಲ್‌ ಪವನ್‌(25) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮಂಗಳೂರು ಪರ ನಾಯಕ ಶ್ರೇಯಸ್‌ ಗೋಪಾಲ್‌ ಮತ್ತು ಕ್ರಾಂತಿ ಕುಮಾರ್ ತಲಾ 3 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭರ್ಜರಿ ಗೆಲುವಿನ ಶುಭಾರಂಭ ಕಂಡ ಮಂಗಳೂರು ಡ್ರ್ಯಾಗನ್ಸ್

Abhilash BC Abhilash BC Aug 11, 2025 7:50 PM

ಮೈಸೂರು: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮಹಾರಾಜ ಟ್ರೋಫಿ(Maharaja Trophy) ಕೆಎಸ್‌ಸಿಎ ಟಿ20 ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ಭರ್ಜರಿ ಗೆಲುವಿನ ಶುಭಾರಂಭ ಕಂಡಿದೆ. ಗುಲ್ಬರ್ಗಾ ಮಿಸ್ಟಿಕ್ಸ್(MD vs GBM) ವಿರುದ್ಧ 33 ರನ್‌ ಗೆಲುವು ಸಾಧಿಸಿತು.

ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಮಂಗಳೂರು ತಂಡ ಯುವ ಬ್ಯಾಟರ್ ಮ್ಯಾಕ್ನಿಲ್ ನೊರೊನ್ಹಾ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 180 ರನ್‌ ಬಾರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಗುಲ್ಬರ್ಗಾ 19.5 ಓವರ್‌ಗಲ್ಲಿ 147 ರನ್‌ಗೆ ಸರ್ವಪತನ ಕಂಡಿತು.



ಚೇಸಿಂಗ್‌ ನಡೆಸಿದ ಗುಲ್ಬರ್ಗಾ ನಾಟಕೀಯ ಕುಸಿತ ಕಂಡು ಆಲೌಟ್‌ ಆಯಿತು. ತಂಡದ ಪರ ಲವನಿತ್ ಸಿಸೋಡಿಯಾ(26) ಮತ್ತು ಪ್ರಜ್ವಲ್‌ ಪವನ್‌(25) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮಂಗಳೂರು ಪರ ನಾಯಕ ಶ್ರೇಯಸ್‌ ಗೋಪಾಲ್‌ ಮತ್ತು ಕ್ರಾಂತಿ ಕುಮಾರ್ ತಲಾ 3 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ 2027 WC Squad: ಕೊಹ್ಲಿ, ರೋಹಿತ್‌, ಶಮಿ ಏಕದಿನ ವಿಶ್ವಕಪ್‌ ಆಡುವುದು ಅನುಮಾನ!

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಮಂಗಳೂರು ತಂಡಕ್ಕೆ ಆರಂಭಕಾರಾದ ಲೋಚನ್ ಗೌಡ(27) ಮತ್ತು ಬಿ.ಆರ್‌ ಶರತ್‌(16) ಮೊದಲ ವಿಕೆಟ್‌ಗೆ 54 ರನ್‌ ಒಟ್ಟುಗೂಡಿಸಿದರು. ಆದರೆ ಆ ಬಳಿಕ ಬಂದ ಅನೀಶ್‌(9), ಆದರ್ಶ್ ಪ್ರಜ್ವಲ್(18) ಬೇಗನೆ ವಿಕೆಟ್‌ ಕಳೆದುಕೊಂಡರು. ಸಂಕಷ್ಟದಲ್ಲಿದ್ದ ತಂಡಕ್ಕೆ ಮ್ಯಾಕ್ನಿಲ್ ನೊರೊನ್ಹಾ ಬಿರುಸಿನ ಆಟವಾಡಿ 28 ಎಸೆತಗಳಿಂದ 3 ಬೌಂಡರಿ ಮತ್ತು 4 ಸಿಕ್ಸರ್‌ ಸಿಕ್ಸರ್‌ ನೆರವಿನಿಂದ 53 ರನ್‌ ಬಾರಿಸಿದರು.