ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ವಿವಾಹಿತ ಮಹಿಳೆ ಯಾರಿಂದ ಗರ್ಭ ಧರಿಸಿದ್ದರೂ ಪತಿಯೇ ಮಗುವಿನ ತಂದೆ; ವಿವಾದ ಹುಟ್ಟು ಹಾಕಿದ ಸುಪ್ರೀಂ ಕೋರ್ಟ್‌ ತೀರ್ಪು

ವಿವಾಹಿತ ಮಹಿಳೆ ಯಾರಿಂದ ಗರ್ಭ ಧರಿಸಿದರೂ, ಆಕೆಯ ಪತಿಯನ್ನು ಮಗುವಿನ ತಂದೆ ಎಂದು ಕಾನೂನುಬದ್ದವಾಗಿ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಸದ್ಯ ಈ ತೀರ್ಪು ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ವಾದ ನಡೆಯುತ್ತಿದೆ.

ವಿವಾಹಿತ ಮಹಿಳೆ ಯಾರಿಂದ ಗರ್ಭ ಧರಿಸಿದ್ದರೂ ಪತಿಯೇ ಮಗುವಿನ ತಂದೆ

ಸುಪ್ರೀಂ ಕೋರ್ಟ್‌.

Ramesh B Ramesh B Aug 11, 2025 9:32 PM

ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಪ್ರೀಂ ಕೋರ್ಟ್‌ (Supreme Court), ವಿವಾಹಿತ ಮಹಿಳೆ ಯಾರಿಂದ ಗರ್ಭ ಧರಿಸಿದರೂ, ಆಕೆಯ ಪತಿಯನ್ನು ಮಗುವಿನ ತಂದೆ ಎಂದು ಕಾನೂನುಬದ್ದವಾಗಿ ಪರಿಗಣಿಸಲಾಗುತ್ತದೆ ಎಂದು ತೀರ್ಪು ನೀಡಿದೆ. ತಂದೆಯ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ಈ ತೀರ್ಪು ಸದ್ಯ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ವಾದ ನಡೆಯುತ್ತಿದೆ. ಹಲವರು ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದುವೆಯಾದ ಬಳಿಕ ಯಾರ ಮೂಲಕವೇ ಆಗಲಿ ಮಗು ಜನಿಸಿದರೆ ಕಾನೂನು ಆಕೆಯ ಗಂಡನನ್ನು ಮಗುವಿನ ತಂದೆ ಎಂದು ಪರಿಗಣಿಸುತ್ತದೆ ಎಂದು ತೀರ್ಪು ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Supreme Court: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರ; ಸುಪ್ರೀಂ ಕೋರ್ಟ್‌ ಆದೇಶ

ತೀವ್ರ ಚರ್ಚೆ ಹುಟ್ಟು ಹಾಕಿದ ತೀರ್ಪು

ಗರ್ಭಧಾರಣೆಯ ಸಮಯದಲ್ಲಿ ಪತಿಗೆ ತನ್ನ ಪತ್ನಿಯೊಂದಿಗೆ ಯಾವುದೇ ಸಂಬಂಧವಿರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಈ ನಿಯಮ ಅನ್ವಯಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಡಿಎನ್‌ಎ ಟೆಸ್ಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಲಯ, ಅಂತಹ ಪರೀಕ್ಷೆಗಳನ್ನು ನಿಯಮಿತವಾಗಿ ಬಳಸಬಾರದು ಎಂದು ಹೇಳಿದೆ. ಈ ನಿರ್ಧಾರ ಮಗುವಿನ ಗೌಪ್ಯತೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ.

ʼʼಮದುವೆಯಾದ ಬಳಿಕ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದ ಪತ್ನಿ ಮಗುವನ್ನು ಹೆತ್ತರೆ ಅದಕ್ಕೆ ಪತಿಯೇ ಸಂಪೂರ್ಣ ಜವಾಬ್ದಾರನಾಗಿರುತ್ತಾನೆʼʼ ಎಂದು ನ್ಯಾಯಾಧೀಶರು ಹೇಳಿದರು. ಅಕ್ರಮ ಸಂತಾನದ ಹೆಸರಿನಿಂದ ಗುರುತಿಸ್ಪಡುವುದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಾಗ್ಯೂ ಪತಿಯು ಪತ್ನಿಯೊಂದಿಗೆ ಯಾವುದೇ ದೈಹಿಕ ಸಂಪರ್ಕ ಹೊಂದಿಲ್ಲ ಎಂದು ಸಾಬೀತುಪಡಿಸಿದರೆ, ಈ ಕಾನೂನು ಅನ್ವಯವಾಗುವುದಿಲ್ಲ.

ಮಕ್ಕಳನ್ನು ಇನ್ನು ಮುಂದೆ ಸಾಮಾನ್ಯ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಯು ಜೈವಿಕ ತಂದೆ ಯಾರು ಎನ್ನುವುದಕ್ಕಿಂತ ಹೆಚ್ಚು ಮುಖ್ಯವಾದುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪುರುಷರಿಂದ ತೀವ್ರ ವಿರೋಧ

ಪುರುಷರ ಹಕ್ಕುಗಳ ಬಗ್ಗೆ ಮಾತನಾಡುವ ಅನೇಕರು ಇದು ಅನಗತ್ಯ ಹೊರೆ ಎಂದು ವಾದಿಸುತ್ತಿದ್ದಾರೆ. ಅಲ್ಲದೆ ಪುರುಷರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸಿದ್ದು, ಈ ತೀರ್ಪನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.