Asian Games 2026: 400 ಮೀ ಓಟದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡ ಪ್ರಾಚಿ ಚೌಧರಿ!
ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. ಸೆಪ್ಟಂಬರ್ 26 ರಂದು ಮಹಿಳೆಯರ 400 ಮೀಟರ್ ಓಟದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅವರು 400 ಮೀಟರ್ ಅನ್ನು 53.21 ಸೆಕೆಂಡುಗಳಲ್ಲಿ ಮುಗಿಸಿದ್ದಾರೆ.
ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಪ್ರಾಚಿ ಚೌಧರಿ. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತದ ಓಟಗಾರ್ತಿ ಪ್ರಾಚಿ ಚೌಧರಿ (Prachi Choudhary) ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರು ಸೆಪ್ಟಂಬರ್ 26 ರಂದು ಶನಿವಾರ ಮಹಿಳೆಯರ 400 ಮೀಟರ್ ಓಟದಲ್ಲಿ ಮೂರನೇ ಸ್ಥಾನವನ್ನು ಪಡಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ. ಅವರು 400 ಮೀಟರ್ ಓಟವನ್ನು ಪೂರ್ಣಗೊಳಿಸಲು 53.21 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ.
ಬಹ್ರೈನ್‌ನ ಸಲ್ಮಾ ನಾಸೀರ್ ಅವರು 400 ಮೀಟರ್ ಅನ್ನು 49.20 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಇರಾನ್‌ನ ಝಹ್ರಾ ಝರಾಯಿ ಮನೌಜನ್ ಅವರು 52.38 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭಾರತದ ಮತ್ತೋರ್ವ ಓಟಗಾರ್ತಿ ಕಿರನ್ 53.41 ಸೆಕುಂಡುಗಳ ಮೂಲಕ ಐದನೇ ಸ್ಥಾನವನ್ನು ಪಡೆದಿದ್ದಾರೆ.
Asian Games 2026: ಶಾಟ್ ಫುಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಜಿಂದರ್‌ಪಾಲ್ ಸಿಂಗ್ ತೂರ್!
ಇನ್ನು ಪುರುಷರ ವಿಭಾಗದ 400 ಮೀಟರ್ ಓಟದಲ್ಲಿ ಟಿಕೆ ವಿಶಾಲ್ ಅವರ 45.48 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಥಾಯ್ಲೆಂಡ್‌ನ ಜೊಶುವಾ ಅಟ್ಕಿನ್ಸನ್ ಅವರು 400 ಮೀಟರ್ ಅನ್ನು 44.90 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಚಿನ್ನದ ಪದಕವನ್ನು ಗೆದ್ದರು.
Congratulations to Prachi on securing Bronze Medal in the Women’s 400m at the #AsianGames2026.
— Kiren Rijiju (@KirenRijiju) September 26, 2026
A fantastic run and a proud moment for Indian athletics!#Cheer4Bharat pic.twitter.com/lukZsSrmvu
1500 ಮೀಟರ್ ಫೈನಲ್‌ನಲ್ಲಿ ಭಾರತಕ್ಕೆ ತಪ್ಪಿದ ಪದಕ
ಏಷ್ಯನ್ ಗೇಮ್ಸ್‌ನ ಮಹಿಳೆಯರ 1500 ಮೀಟರ್ ಫೈನಲ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತದ ಪಾರುಲ್ ಚೌಧರಿ ನಾಲ್ಕನೇ ಸ್ಥಾನ ಪಡೆದರೆ, ಪೂಜಾ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪಾರುಲ್ ಚೌಧರಿ 4:09.46 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಮತ್ತೊಂದೆಡೆ, ಪೂಜಾ 4:16.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬಹ್ರೇನ್‌ನ ನೆಲ್ಲಿ ಕೊರಿರ್ 4:04.50 ಸೆಕೆಂಡ್‌ಗಳ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
ಏಷ್ಯನ್ ಗೇಮ್ಸ್ ಕಬಡ್ಡಿ; ಭಾರತಕ್ಕೆ ಅವಳಿ ಬಂಗಾರದ ಸಂಭ್ರಮ
ಪುರುಷರ ಟ್ರಿಬಲ್ ಜಂಪ್‌ನಲ್ಲಿಯೂ ತಪ್ಪಿದ ಪದಕ
ಪುರುಷರ ಟ್ರಿಪಲ್ ಜಂಪ್ ಫೈನಲ್‌ನಲ್ಲೂ ಭಾರತಕ್ಕೆ ಪದಕ ಲಭಿಸಲಿಲ್ಲ. ಭಾರತದ ಕಾರ್ತಿಕ್ ಉನ್ನಿಕೃಷ್ಣನ್ 16.02 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಆರನೇ ಸ್ಥಾನ ಪಡೆದರು. ಚೀನಾದ ವೆನ್ ಸು 17.42 ಮೀಟರ್‌ಗಳ ಗೇಮ್ಸ್ ದಾಖಲೆಯ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದರು. ಜಪಾನ್‌ನ ಮನಾಟೊ ಮಿಯಾವೊ 16.77 ಮೀಟರ್‌ಗಳೊಂದಿಗೆ ಬೆಳ್ಳಿ ಪದಕ ಪಡೆದರೆ, ಚೀನಾದ ಮಾ ಯಿಂಗ್‌ಲಾಂಗ್ 16.75 ಮೀಟರ್‌ಗಳೊಂದಿಗೆ ಕಂಚಿನ ಪದಕ ಗೆದ್ದರು. ಭಾರತದ ಪ್ರವೀಣ್ ಚಿತ್ರವೇಲ್ ಫೈನಲ್‌ನಲ್ಲಿ ಯಾವುದೇ ಮಾನ್ಯ ಜಿಗಿತ ದಾಖಲಿಸಲು ಸಾಧ್ಯವಾಗದೆ NM (No Mark) ಆಗಿ ಸ್ಪರ್ಧೆ ಮುಗಿಸಿದರು.