PKL 2025: ಎರಡನೇ ಬಾರಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಮೇಲೆ ಕಣ್ಣಿಟ್ಟ ದಬಾಂಗ್ ಡೆಲ್ಲಿ ಕೆಸಿ!
ದಬಾಂಗ್ ಡೆಲ್ಲಿ ಕೆಸಿ ತಂಡವು 2025ರ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುತ್ತಾ ಬಂದಿರುವ ಡೆಲ್ಲಿ ತಂಡ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ತನ್ನ ಕೊನೆಯ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಸೋಲು ಅನುಭವಿಸಿತ್ತು.
ಪ್ರೋ ಕಬಡ್ಡಿ ಲೀಗ್ ಫೈನಲ್‌ಗೆ ಪ್ರವೇಶ ಮಾಡಿರುವ ದಬಾಂಗ್ ಡೆಲ್ಲಿ. -
ನವದೆಹಲಿ: ದಬಾಂಗ್ ಡೆಲ್ಲಿ ಕೆಸಿ ತಂಡ (Dabang Delhi KC), ಹನ್ನೇರಡನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (PKL 2025) ಫೈನಲ್‌ಗೆ ಪ್ರವೇಶ ಮಾಡಿದ್ದು, ಪ್ರಬಲ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ರಾಜಧಾನಿ ಆಧಾರಿತ ಈ ಫ್ರಾಂಚೈಸಿ ಸೀಸನ್ 12 ಅನ್ನು ಸ್ಫೋಟಕ ರೀತಿಯಲ್ಲಿ ಆರಂಭಿಸಿ ಮೊದಲ ಆರು ಪಂದ್ಯಗಳನ್ನು ಗೆದ್ದು ನೇರವಾಗಿ ಕಿರೀಟ ಪೈಪೋಟಿದಾರರಾಗಿ ಹೊರಹೊಮ್ಮಿತು. ಪಟ್ನಾ ಪೈರೇಟ್ಸ್ (Patna Pirates) ವಿರುದ್ಧ (33-30) ಸಣ್ಣ ಅಂತರದ ಸೋಲು ಕಂಡರೂ, ಅದು ತಂಡದ ಹೋರಾಟದ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು. ತಕ್ಷಣವೇ ಐದು ಸತತ ಜಯಗಳನ್ನು ದಾಖಲಿಸಿ, ಪಿಕೆಎಲ್ ಸೀಸನ್ 12 ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.
ಆರ್ಹತೆ ಪಡೆದ ಬಳಿಕ ದಬಾಂಗ್ ಡೆಲ್ಲಿ ಕೆ.ಸಿ ತಮ್ಮ ಅಂತಿಮ ಹಂತದ ಪಂದ್ಯಗಳಲ್ಲಿ ಬದಲಿ ಆಟಗಾರರಿಗೆ ಅವಕಾಶ ನೀಡಿತು. ಕ್ವಾಲಿಫೈಯರ್ ಒಂದರಲ್ಲಿ ಪುಣೇರಿ ಪಲ್ಟಾನ್ ವಿರುದ್ಧದ ಪೈಪೋಟಿ ಸೀಸನ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಯಿತು. ಪಂದ್ಯ ರೋಚಕ ಸಮನಾಗಿ ಅಂತ್ಯಗೊಂಡಿದ್ದು, ಈ ಸೀಸನ್‌ನಲ್ಲಿ ಎರಡೂ ತಂಡಗಳ ನಡುವೆ ಮೂರನೇ ಡ್ರಾ ಆಗಿತ್ತು.
Pro Kabaddi: ಟೈಟಾನ್ಸ್‌ಗೆ ಶರಣಾದ ಬುಲ್ಸ್; 2ನೇ ಎಲಿಮಿನೇಟರ್‌ನಲ್ಲಿ ಪಾಟ್ನಾ ಸವಾಲು
ಟೈಬ್ರೇಕರ್‌ನಲ್ಲಿ ಡೆಲ್ಲಿ ದಬಾಂಗ್ ಕೆಸಿ ತಂಡ ತಮ್ಮ ಸಮತೋಲನ ಕಾಪಾಡಿ 6-4 ಅಂತರದಲ್ಲಿ ಗೆದ್ದು ಫೈನಲ್‌ಗೆ ಮೊದಲ ಸ್ಥಾನ ಪಡೆದಿತು. ಗೆಲುವಿನ ಬಳಿಕ ಮಾತನಾಡಿದ ದಬಾಂಗ್ ದೆಹಲಿ ಕೆಸಿಯ ಮುಖ್ಯ ಕೋಚ್ ಜೋಗಿಂದರ್ ನರವಾಲ್, "ಈ ಸೀಸನ್‌ನಲ್ಲಿ ನಮ್ಮ ತಂಡ ನಿರಂತರ ಹೋರಾಟ ನಡೆಸಿದ್ದು, ಪ್ರತಿಯೊಬ್ಬ ಆಟಗಾರ ಅಗತ್ಯ ಸಮಯದಲ್ಲಿ ಹೊಣೆ ಹೊತ್ತಿದ್ದಾರೆ. ಪುಣೇರಿ ಪಲ್ಟಾನ್ ನಮ್ಮ ಪೈಪೋಟಿದಾರರಾಗಿದ್ದು, ಫೈನಲ್‌ನಲ್ಲಿ ನಾವು ಶೇಕಡಾ 100 ಪ್ರಯತ್ನ ನೀಡುತ್ತೇವೆ," ಎಂದು ಹೇಳಿದ್ದಾರೆ.
ಟೀಮ್‌ನ ಪ್ರದರ್ಶನದ ಬಗ್ಗೆ ಮಾತನಾಡಿದ ದಬಾಂಗ್ ಡೆಲ್ಲಿ ಕೆ.ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಮೇಶ್ ಮಿಶ್ರ "ಅಜಿಂಕ್ಯ ಪವಾರ್ ಮತ್ತು ನೀರಜ ನರವಾಲ್ ಅವರ ಸಹಕಾರ ಮಹತ್ವದ ಪಾತ್ರವಹಿಸಿದೆ. ಫಝಲ್ ಅತ್ರಾಚಲಿ ಮತ್ತು ಸುರಜೀತ್ ಸಿಂಗ್ ಅವರಂತಹ ಹಿರಿಯ ಆಟಗಾರರ ಅನುಭವ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದೆ ಹಾಗು ಕೋಚ್ ಜೋಗಿಂದರ್ ನರವಾಲ್ ತಮ್ಮ ಅನುಭವ ಮತ್ತು ತಂತ್ರಜ್ಞಾನದಿಂದ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ," ಎಂದರು.
Houn jau de 😎#HarSaansDabang | #DDKC | #Kabaddi |#Dilli
— Dabang Delhi KC (@DabangDelhiKC) October 30, 2025
( Dabang Delhi Kc | Pro Kabaddi | Delhi ki Kabaddi | Har Saans Kabaddi ) pic.twitter.com/rtLmKitgIm
ವೇಗ, ಅನುಭವ ಮತ್ತು ಬಲವಾದ ತಂಡದೊಂದಿಗೆ ದಬಾಂಗ್ ಡೆಲ್ಲಿ ಕೆ.ಸಿ ಈಗ ಪಿಕೆಎಲ್ ಕಿರೀಟವನ್ನು ಮರಳಿ ಪಡೆಯಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಮತ್ತು ಮುಖ್ಯ ಕೋಚ್ ಜೋಗಿಂದರ್ ನರ್ವಾಲ್ ಒಂದೇ ತಂಡಕ್ಕೆ ಪಿಕೆಎಲ್ ಪ್ರಶಸ್ತಿಗಳನ್ನು ಗೆದ್ದ ಮೊದಲ ನಾಯಕ ಮತ್ತು ಮೊದಲ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಕಬಡ್ಡಿ ಇತಿಹಾಸದಲ್ಲಿ ಮತ್ತೊಮ್ಮೆ ತಮ್ಮ ಹೆಸರನ್ನು ಬರೆಯಲು ಸಜ್ಜಾಗುತ್ತಿದ್ದಾರೆ.