CWG 2026: ಫೈನಲ್‌ನಲ್ಲಿ ಸೋತ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್‌ಗೆ ಬೆಳ್ಳಿ ಪದಕ, ಭಾರತಕ್ಕೆ 30ನೇ ಪದಕ!
2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 55 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್‌ನಲ್ಲಿ ಭಾರತದ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೇ ಡಿಕ್ಸನ್ ವಿರುದ್ಧ 5-0 ಅಂಕಗಳ ಅಂತರದಲ್ಲಿ ಏಕಪಕ್ಷೀಯ ತೀರ್ಪಿನಿಂದ ಸೋಲು ಅನುಭವಿಸಿದರು. ಆ ಮೂಲಕ ಬೆಳ್ಳಿ ಪದಕಕ್ಕೆ ಸೀಮಿತರಾದರು. ಭಾರತಕ್ಕೆ ಇದು 30ನೇ ಪದಕವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜದುಮಣಿ ಸಿಂಗ್‌ಗೆ ಬೆಳ್ಳಿ ಪದಕ. -
ಗ್ಲಾಸ್ಗೋ: ಇಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games 2026) ಪುರುಷರ 55 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್ (Jadumani Singh) ಬೆಳ್ಳಿ ಪದಕದೊಂದಿಗೆ ತಮ್ಮ ಅಭಿಯಾನ ಮುಕ್ತಾಯಗೊಳಿಸಿದರು. ಸ್ಕಾಟಿಷ್ ಈವೆಂಟ್ ಕ್ಯಾಂಪಸ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೇ ಡಿಕ್ಸನ್ ವಿರುದ್ಧ 5-0 ಅಂಕಗಳ ಏಕಮತದ ತೀರ್ಪಿನಿಂದ ಸೋಲು ಅನುಭವಿಸಿದರು. ಈ ಬೆಳ್ಳಿ ಪದಕದೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 28ಕ್ಕೆ ಏರಿಕೆಯಾಯಿತು.
ಮೂರು ಸುತ್ತುಗಳ ಕಾಲ ನಡೆದ ಪೈಪೋಟಿಯಲ್ಲಿ ಆಸ್ಟ್ರೇಲಿಯಾದ ಡಿಕ್ಸನ್ ಮೇಲುಗೈ ಸಾಧಿಸಿದ್ದು, ಐವರು ತೀರ್ಪುಗಾರರೂ ಅವರ ಪರ ತೀರ್ಪು ನೀಡಿದರು. ಮೊದಲ, ಮೂರನೇ ಹಾಗೂ ನಾಲ್ಕನೇ ತೀರ್ಪುಗಾರರು 29-28 ಅಂಕಗಳಿಂದ ಡಿಕ್ಸನ್‌ಗೆ ಮುನ್ನಡೆ ನೀಡಿದರೆ, ಎರಡನೇ ಮತ್ತು ಐದನೇ ತೀರ್ಪುಗಾರರು 30-27 ಅಂಕಗಳ ಅಂತರದಲ್ಲಿ ಅವರ ಪರ ತೀರ್ಪು ನೀಡಿದರು. ಇದರೊಂದಿಗೆ ಡಿಕ್ಸನ್ ಅಂಕಗಳ ಆಧಾರದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯ ಆರಂಭದಿಂದಲೇ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಸುತ್ತಿನಲ್ಲಿ ಇಬ್ಬರೂ ಬಾಕ್ಸರ್‌ಗಳು ಸಮಬಲದ ಪ್ರದರ್ಶನ ನೀಡಿದರೂ, ಬಳಿಕ ಆಸ್ಟ್ರೇಲಿಯಾದ ಜೇ ಡಿಕ್ಸನ್ ನಿಖರ ಪಂಚ್‌ಗಳು ಮತ್ತು ರಿಂಗ್‌ನಲ್ಲಿ ತೋರಿದ ಚಾಣಾಕ್ಷ ಆಟದ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಂತಿಮ ಕ್ಷಣಗಳಲ್ಲಿ ಜದುಮಣಿ ಸಿಂಗ್ ಆಕ್ರಮಣಕಾರಿ ಆಟಕ್ಕೆ ಮೊರೆಹೋದರೂ, ಹಿನ್ನಡೆಯನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಶಾಂತಚಿತ್ತದಿಂದ ಪಂದ್ಯವನ್ನು ಮುಗಿಸಿದ ಡಿಕ್ಸನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
CWG 2026: ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಜೈಸ್ಮಿನ್ ಲಂಬೋರಿಯಾ!
ಸೋಲು ಕಂಡರೂ, 22 ವರ್ಷದ ಜದುಮಣಿ ಸಿಂಗ್‌ಗೆ ಈ ಬೆಳ್ಳಿ ಪದಕ ಗಮನಾರ್ಹ ಅಭಿಯಾನಕ್ಕೆ ಸಾರ್ಥಕ ಅಂತ್ಯವಾಯಿತು. ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೇ ಫೈನಲ್ ಪ್ರವೇಶಿಸಿದ ಅವರು, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಎಲಿಸ್ ಟ್ರೋಬ್ರಿಡ್ಜ್ ಅವರನ್ನು 5-0 ಅಂಕಗಳ ಏಕಮತದ ತೀರ್ಪಿನಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಇದರೊಂದಿಗೆ ಸೆಮಿಫೈನಲ್ ಹಂತದಲ್ಲಿ ಭಾರತದ ಅಜೇಯ ಗೆಲುವಿನ ಓಟವನ್ನೂ ಮುಂದುವರಿಸಿದ್ದರು.
Heartiest congratulations to Shri Mandengbam Jadumani Singh on winning the Silver Medal at the #GlasgowCommonwealth Games. Though the Gold remained just beyond reach, your grit, resilience, and fighting spirit have inspired the nation.
— Khemchand Yumnam (@YKhemchandSingh) August 1, 2026
With this achievement, Manipur has… pic.twitter.com/FxHDoBv1qi
ಪಾಕ್‌ನ ಸುಮಾಮಾ ವಿರುದ್ಧ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದ ಜದುಮಣಿ
ಕಾಮನ್‌ವೆಲ್ತ್ ಕ್ರೀಡಾಕೂಟ 2026ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಬಾಕ್ಸರ್ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್ ತಮ್ಮ ಅಭಿಯಾನವನ್ನು ಪಾಕಿಸ್ತಾನದ ಸುಮಾಮಾ ರೆಹ್ಮಾನ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ್ದರು. ರೌಂಡ್ ಆಫ್-16 ಪಂದ್ಯದಲ್ಲಿ ಎದುರಾಳಿಯನ್ನು 5-0 ಅಂಕಗಳ ಏಕಮತದ ತೀರ್ಪಿನಿಂದ ಮಣಿಸಿದ ಅವರು, ಬಳಿಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿ ಭಾರತಕ್ಕೆ ಕನಿಷ್ಠ ಒಂದು ಪದಕವನ್ನು ಖಚಿತಪಡಿಸಿದ್ದರು. ಪಾಕಿಸ್ತಾನ ವಿರುದ್ಧದ ಗೆಲುವನ್ನು ಕಾರ್ಗಿಲ್ ಯುದ್ಧದ ವೀರ ಯೋಧರಿಗೆ ಸಮರ್ಪಿಸುವ ಮೂಲಕ ಅವರು ವಿಶೇಷ ಗಮನ ಸೆಳೆದಿದ್ದರು.
ಫೈನಲ್‌ನಲ್ಲಿ ಚಿನ್ನದ ಪದಕ ಕೈತಪ್ಪಿದರೂ, ಜದುಮಣಿ ಗೆದ್ದ ಬೆಳ್ಳಿ ಪದಕ ಗ್ಲಾಸ್ಗೋದಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನಕ್ಕೆ ಮಹತ್ವದ ಕೊಡುಗೆಯಾಯಿತು. ಹಲವು ತೂಕ ವಿಭಾಗಗಳಲ್ಲಿ ಭಾರತ ಯಶಸ್ವಿ ಪ್ರದರ್ಶನ ನೀಡುತ್ತಿರುವ ಈ ಕ್ರೀಡಾಕೂಟದಲ್ಲಿ, 50 ಕೆಜಿ ವಿಭಾಗದಿಂದ 55 ಕೆಜಿ ವಿಭಾಗಕ್ಕೆ ಬಡ್ತಿ ಪಡೆದು ಸ್ಪರ್ಧಿಸಿದ್ದ ಮಣಿಪುರದ ಜದುಮಣಿ ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದರು.